Published
6 months agoon
By
Akkare Newsಉಪ್ಪಿನಂಗಡಿ ಜುಲೈ 09 : ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ಲೋಕಸಭಾ ಸದಸ್ಯರೂ, ವಿಪಕ್ಷ ನಾಯಕರೂ ಆದ ಶ್ರೀ ರಾಹುಲ್ ಗಾಂಧಿ ಯವರ ವಿರುದ್ಧ ಸಂಸತ್ ಭವನದ ಒಳಗೆ ಹೋಗಿ ಕೆಪ್ಪೆಗೆ ಬಾರಿಸಬೇಕು ಹಾಗೂ ಶಸ್ತ್ರಾಸ್ತ್ರ ಹೇಗೆ ಉಪಯೋಗಿಸಬೇಕು ಎಂಬುದು ಗೊತ್ತಿದೆ ಈ ಎರಡು ಅಂಶ ಆತಂಕಕಾರಿ. ಅವಹೇಳನ ಕಾರಿಯಾಗಿ ನಾಲಿಗೆ ಹರಿ ಬಿಟ್ಟ ಶಾಸಕ ಭರತ್ ಶೆಟ್ಟಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಉಪ್ಪಿನಂಗಡಿ ಠಾಣಾಧಿಕಾರಿಗೆ ದೂರು ನೀಡಲಾಯಿತು.