Published
2 years agoon
By
Akkare News
ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ಗ್ರಾಮ ಪಂಚಾಯತಿಗಳಲ್ಲಿ ಒಂದಾದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಕ್ಸರೇ ಯಂತ್ರೋಪಕರಣಗಳಿದ್ದು ಅದನ್ನು ಆಪರೇಟ್ ಮಾಡುವವರಿಲ್ಲದ ಕಾರಣ ರೋಗಿಗಳಿಗೆ ಸದಾ ತೊಂದರೆಯಾಗುತ್ತಿದೆ. ಅದಕ್ಕೆ ನುರಿತ ಟೆಕ್ನಿಷಿಯನ್ ಅನ್ನು ನೇಮಕ ಮಾಡಬೇಕು.
ರಕ್ತ ಮಲ ಮೂತ್ರ ಪರೀಕ್ಷಾ ಕೇಂದ್ರದಲ್ಲಿ ತಜ್ಞ ಸಿಬ್ಬಂದಿ ಒಬ್ಬರನ್ನು ನೇಮಕ ಮಾಡಬೇಕು.
ಪ್ರಾಥಮಿಕ ಕೇಂದ್ರದಲ್ಲಿ ಈಗಾಗಲೇ ಸಾಮಾನ್ಯ ಹೆರಿಗೆಗಳು ಆಗುತ್ತಿದ್ದು, ಸಿಜೇರಿಯನ್ ಹೆರಿಗೆಗಳಾಗಬೇಕಾದರೆ ಮತ್ತು ಗರ್ಭಾಶಯದ ಆಪರೇಷನ್ ಕೇಂದ್ರಕ್ಕೆ ಒಂದು ಅನಸ್ತೇಶಿಯ ತಜ್ಞರು ಮತ್ತು ಸುಸಜ್ಜಿತ ಆಪರೇಷನ್ ಥಿಯೇಟರ್ ನ ಅದಕ್ಕೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು.
ಉಪ್ಪಿನಂಗಡಿ ಸುತ್ತಮುತ್ತಲಿನ ಕಿಡ್ನಿ ಸಂಬಂಧಿತ ರೋಗದ ರೋಗಿಗಳು ಈಗಾಗಲೇ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡುತ್ತಿದ್ದು ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನು ಮಾಡಿದರೆ ಗ್ರಾಮೀಣ ಭಾಗದ ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ ಆದ್ದರಿಂದ ಅದರ ಬಗ್ಗೆಯೂ ಸಹ ತಾವುಗಳು ಗಂಭೀರವಾಗಿ ಗಮನಹರಿಸಬೇಕು.
ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿ ವಿತರಕರ ಎರಡು ಹುದ್ದೆಗಳಿದ್ದು ಅದರಲ್ಲಿ ಒಂದು ಈಗಾಗಲೇ ಭರ್ತಿಯಾಗಿದ್ದು ಇನ್ನೊಂದು ಖಾಲಿ ಬಿದ್ದಿದೆ ಆದ್ದರಿಂದ ಇನ್ನೊಂದು ಹುದ್ದೆಯನ್ನು ಸಹ ಶೀಘ್ರದಲ್ಲಿ ಭರ್ತಿ ಮಾಡಬೇಕು.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಊರು ಉಪ್ಪಿನಂಗಡಿ ಆದ್ದರಿಂದ ಶಿರಾಡಿ ಇಂದ ಮಾಣಿಯವರೆಗೆ ಅಪಘಾತಗಳಾದಾಗ ಗಾಯಾಳುಗಳನ್ನು ಚಿಕಿತ್ಸೆಗೆ ಪುತ್ತೂರು ಅಥವಾ ಮಂಗಳೂರಿಗೆ ಕರೆದುಕೊಂಡು ಹೋಗುವ ಮುಂಚೆ ಉಪ್ಪಿನಂಗಡಿಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡುವ ಸೌಲಭ್ಯವನ್ನು ಮತ್ತು ತಜ್ಞ ವೈದ್ಯರುಗಳ ತಂಡವನ್ನು ದಿನದ ಇಪ್ಪತ್ತನಾಲ್ಕು ಗಂಟೆಯೂ ಸಿದ್ಧಗೊಳಿಸಿದರೆ ಗ್ರಾಮೀಣ ಜನರಿಗೆ ಇದರಿಂದ ಉಪಯೋಗವಾಗುತ್ತದೆ ಇದರ ಬಗ್ಗೆಯೂ ಸಹ ತಾವು ಗಮನಹರಿಸಬೇಕೆಂದು ಕರ್ನಾಟಕ ಸರ್ಕಾರದ ಆರೋಗ್ಯ ಮಂತ್ರಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ರವರಿಗೆ ಉಬಾರ್ ಡೋನರ್ಸ್ ಹೆಲ್ಪ್ ಲೈನ್ ತಂಡದ ಅಧ್ಯಕ್ಷರಾದ ಶ್ರೀ ಶಬೀರ್ ಕೆಂಪಿ ಹಾಗೂ ಸದಸ್ಯರುಗಳ ಸಮ್ಮುಖದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್, ಇರ್ಷಾದ್ ಯು ಟಿ, ಅನಸ್ ದಿಲ್ದಾರ್, ಜಮಾಲ್ ಕೆಂಪಿ, ಲತೀಫ್ ಕುದ್ಲೂರ್, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.