Published
6 months agoon
By
Akkare Newsಗೌರವಾಧ್ಯಕ್ಷ: ವಾರಿಸೇನ ಜೈನ್, ಅಧ್ಯಕ್ಷ: ಕೇಶವ ಭಂಡಾರಿ, ಪ್ರ. ಕಾರ್ಯದರ್ಶಿ: ದೇವಾನಂದ ಕೆ.
ಪುತ್ತೂರು: ಕೋಡಿಂಬಾಡಿಯ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಕೇಶವ ಭಂಡಾರಿ ಕೈಪ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ನ್ಯಾಯವಾದಿ ದೇವಾನಂದ ಕೆ. ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ವಾರಿಸೇನ ಜೈನ್ ಕೋಡಿಯಾಡಿ, ಕೋಶಾಧಿಕಾರಿಯಾಗಿ ಭರತ್ ಗೌಡ ನಿಡ್ಯ, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಉಪಾಧ್ಯಕ್ಷರಾಗಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಉಮೇಶ್ ಪನಿತೋಟ, ಅಶೋಕ್ ಪ್ರಭು ದಾರಂದಕುಕ್ಕು, ಚೆನ್ನಣ್ಣ ಗೌಡ ಬರಮೇಲು, ಶ್ರೀನಿವಾಸ ನಾಯ್ಕ ದಾಸಕೋಡಿ, ದೀಕ್ಷಿತ್ ಎಂ.ಎಲ್., ಸತೀಶ್ ಮಡಿವಾಳ ಸೇಡಿಯಾಪು, ಶಾರದಾ ಸಿ.ರೈ ಸರೋಳಿ, ಚಂದ್ರಶೇಖರ ಕುಲಾಲ್ ಸೇಡಿಯಾಪು, ಗೌರವ ಸಲಹೆಗಾರರಾಗಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಜಿ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಕೂರ್ನಡ್ಕ, ತಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಕೆ., ರಮೇಶ್ ನಾಯಕ್ ನಿಡ್ಯ, ಸುಭಾಸ್ ನಾಯಕ್ ನೆಕ್ಕರಾಜೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಮುರಳೀಧರ ರೈ ಮಠಂತಬೆಟ್ಟು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಎಂ. ನಿರಂಜನ ರೈ ಮಠಂತಬೆಟ್ಟು, ಪಿ. ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ನ್ಯಾಯವಾದಿ ಎಸ್. ಕುಮಾರನಾಥ ಮತ್ತು ಪ್ರಧಾನ ಅರ್ಚಕರಾಗಿ ಬಾಲಕೃಷ್ಣ ಐತಾಳ್ ಅವರನ್ನು ಆಯ್ಕೆ ಮಾಡಲಾಯಿತು.