Published
9 months agoon
By
Akkare News
ಚಿಕ್ಕಬಳ್ಳಾಪುರದಲ್ಲಿ ಒಂದು ಅಸಾಮಾನ್ಯ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಸಂಸಾರ ಸಾಗಿಸಲು ಹಣದ ಅಗತ್ಯಕ್ಕಾಗಿ ಪ್ರೇಮಿಗಳಾದ ಇಬ್ಬರು ಚಿನ್ನದ ಸರಗಳ್ಳತನಕ್ಕೆ ಇಳಿದಿದ್ದು, ಈಗ ಪೊಲೀಸರ ವಶದಲ್ಲಿದ್ದಾರೆ. ಈ ಘಟನೆ ಜೂನ್ 1, 2025 ರಂದು ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.
ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಾದ ಗೋವಿಂದರಾಜು (32) ಎಂಬಾತ ಮದುವೆಯಾಗಿ ಎರಡು ಮಕ್ಕಳಿದ್ದರೂ, ಅಶ್ವಿನಿ (28) ಎಂಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಗೋವಿಂದರಾಜುನಿಂದ ಅಶ್ವಿನಿ ಗರ್ಭಿಣಿಯಾಗಿದ್ದು, ಈ ವಿಷಯ ಇಬ್ಬರ ಕುಟುಂಬದವರಿಗೂ ತಿಳಿದು, ಇಬ್ಬರೂ ಮನೆ ಬಿಟ್ಟು ಊರು-ಊರು ಅಲೆಯುವಂತಾಗಿತ್ತು. ಇದರಿಂದ ಇಬ್ಬರಿಗೂ ಸ್ಥಿರವಾದ ನೆಲೆ ಸಿಗದ ಕಾರಣ, ಮನೆ ಬಾಡಿಗೆ ಪಡೆದು ಸಂಸಾರ ನಡೆಸಲು ಆರಂಭಿಸಿದರು. ಆದರೆ, ಆರ್ಥಿಕ ಸಂಕಷ್ಟದಿಂದಾಗಿ, ಇಬ್ಬರು ಚಿನ್ನದ ಸರ ಕಳ್ಳತನಕ್ಕೆ ಇಳಿದರು.
ಗೋವಿಂದರಾಜು ಮತ್ತು ಅಶ್ವಿನಿ ಮುದುಗೆರೆ ಗ್ರಾಮದಲ್ಲಿ ಒಂಗಪ್ಪ ಎಂಬವರ ಮನೆಯಿಂದ 35 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದರು. ಈ ಘಟನೆಯ ಬಗ್ಗೆ ಒಂಗಪ್ಪ ಪೊಲೀಸರಿಗೆ ದೂರು ನೀಡಿದ್ದರು. ಗೌರಿಬಿದನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಇಬ್ಬರನ್ನು ಬಂಧಿಸಿದರು. ಬಂಧಿತರಿಂದ ಕಳವುಗೊಂಡ 35 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.