Published
9 months agoon
By
Akkare News
ಪುತ್ತೂರು: ನರಿಮೊಗರು ಗ್ರಾಮದ ಪಾಣಂಬು ಎಂಬಲ್ಲಿ ವಿಪರೀತ ಮಳೆ ಸುರಿದು ಮಾಜಿ ಸೈನಿಕ ವಸಂತ ಪೂಜಾರಿ ಯವರ ತೋಟಕ್ಕೆ ಗುಡ್ಡೆ ಕುಸಿದು ಸುಮಾರು ಫಲ ಬರುವ 450 ಅಡಿಕೆ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ತೋಟದ ಜಾಗದ ಬದಿಯಲ್ಲಿ ದೊಡ್ಡ ತೊಡಿಗೆ ಮಣ್ಣು ಬಿದ್ದು ನೀರುಗಳು ತೋಟದಲ್ಲಿ ಹರಿದು ಅಪಾರ ಪ್ರಮಾಣದ ಅಡಿಕೆ ಮರಗಳು ನಾಶವಾಗಿದೆ. ಚೆನ್ನಪ್ಪ ಪೂಜಾರಿಯವರ ಮನೆಯ ಹಿಂಬದಿಯ ಗುಡ್ಡಜರೆಯುವ ಹಂತದಲ್ಲಿದ್ದು ಪ್ಲಾಸ್ಟಿಕ್ ಓದಿಕೆ ಹಾಕಿ ತಾತ್ಕಾಲಿಕ ಪರಿಹಾರ ಮಾಡಲಾಗಿದೆ.