ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ನಿಂದನೆ ಆರೋಪ-ಶಾಸಕ ಭರತ್ ಶೆಟ್ಟಿ ವಿರುದ್ಧ ಪುತ್ತೂರು ಕಾಂಗ್ರೆಸ್ ನಿಂದ ಪ್ರತಿಭಟನಾ ಸಭೆ

Published

on

*ಭರತ್ ಶೆಟ್ಟಿಯವರು ತಿದ್ದಿಕೊಳ್ಳದಿದ್ದರೆ ಕಾಂಗ್ರೆಸ್ ಸುಮ್ಮನಿರುವುದಿಲ್ಲ – ಅಶೋಕ್ ರೈ
*ಮೋದಿಯ ಆಡಳಿತದ ಆರಂಭದಿಂದ ದ್ವೇಷದ ರಾಜಕಾರಣ ಆರಂಭ- ಎಮ್ ಬಿ ವಿಶ್ವನಾಥ ರೈ
*ನಾವು ಗಾಂಧಿ ಪೀಳಿಗೆಯವರು, ಬಿಜೆಪಿ ನಾತೂರಾಮ್ ಗೋಡ್ಸೆ ಪೀಳಿಗೆಯವರು – ಎಂ ಎಸ್ ಮೊಹಮ್ಮದ್
*ಭರತ್ ಶೆಟ್ಟಿ ಗೂಂಡನಾಗಿ ವರ್ತಿಸುವುದು ಸರಿಯಲ್ಲ – ಡಾ ರಾಜಾರಾಮ್
*ಭರತ್ ಶೆಟ್ಟಿಯವರು ಶಾಸಕ ಅಶೋಕ್ ರೈ, ಶಕುಂತಳಾ ಶೆಟ್ಟಿ, ಸೊರಕೆ, ಡಿ.ವಿಯವರನ್ನು ನೋಡಿ ಕಲಿಯಲಿ- ಮಹಮ್ಮದ್ ಬಡಗನ್ನೂರು
*ಹಿಂಸೆಯನ್ನು ಪ್ರತಿಪಾದಿಸುವವರ ಕೆಬಿತ್ತ ಕಂಡೆಗೆ ಹೊಡೆಯಲಿ – ಅಮಳ ರಾಮಚಂದ್ರ
*ಭರತ್ ಶೆಟ್ಟಿಯವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು – ಹೇಮನಾಥ ಶೆಟ್ಟಿ
.

ಪುತ್ತೂರು: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯವರ ಬಗ್ಗೆ ಶಾಸಕ ಭರತ್ ಶೆಟ್ಟಿ ಅವರು ಅವಹೇಳನಕಾರಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಮತ್ತು ಬಿಜೆಪಿ ಸುಳ್ಳಿನ ರಾಜಕಾರಣ ನಡೆಸುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಿತು.

 

ಭರತ್ ಶೆಟ್ಟಿಯವರು ತಿದ್ದಿಕೊಳ್ಳದಿದ್ದರೆ ಕಾಂಗ್ರೆಸ್ ಸುಮ್ಮನಿರುವುದಿಲ್ಲ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ದೇಶದ ಕಾರ್ಯಕರ್ತರಿಗೆ ನೋವಾಗುವ ರೀತಿಯಲ್ಲಿ ಮಾತನಾಡಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಡಾಕ್ಟರ್ ಕಲಿತವರು, ವಿದ್ಯಾವಂತರು ಸಮಾಜದಲ್ಲಿ ಇನ್ನೊಬ್ಬರಿಗೆ ಯಾವ ರೀತಿಯಲ್ಲಿ ಗೌರವ ಕೊಡುವುದು ಎಂದು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಭರತ್ ಶೆಟ್ಟಿಯವರೇ ಈಗ ನಿಮಗೆ ನಾಲ್ಕು ಜನ ಚಪ್ಪಾಳೆ ತಟ್ಟುತ್ತಾರೆ. ಅಧಿಕಾರ ಇರುವಾಗ ಜನ ಇದ್ದಾರೆ. ಅಧಿಕಾರ ಕಳಕೊಂಡಾಗ ನೋಡಿ ಯಾರಿದ್ದಾರೆಂದು ಎಂದು ಪ್ರಶ್ನಿಸಿದ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕೆಲಸ ಮಾಡಿ. ಭರತ್ ಶೆಟ್ಟಿಯವರು ಮೊದಲು ಜೆಡಿಎಸ್ ನಲ್ಲಿರುವಾಗ ಬಿಜೆಪಿಗೆ ಸಿಕ್ಕಾಪಟ್ಟೆ ಬೈಯುತ್ತಿದ್ದರು.

 

ಅದೇ ರೀತಿ ಭಾರತದ ಪ್ರಧಾನಿ ಶ್ರಿಮಾನ್ ನರೇಂದ್ರ ಮೋದಿಯವರಿಗೆ ಈ ರೀತಿ ಮಾತನಾಡಿದರೆ. ಬಿಜೆಪಿಯವರು ಸುಮ್ಮನಿರುತ್ತಿದ್ದರಾ. ನಾವು ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಪಾಠ ಮಾಡುತ್ತೇವೆ. ಹಾಗಾಗಿ ಇವತ್ತು ಶಾಸಕ ಭರತ್ ಶೆಟ್ಟಿಯವರಿಗೆ ಪಾಠ ಹೇಳಿ ಕೊಡುವ ಅಗತ್ಯವಿದೆ. ನೀವು ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಸಂವಿಧಾನಿಕ ವಿಚಾರದಲ್ಲಿ ನಾವು ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮಂತೆ ಕೆಟ್ಟ ಶಬ್ದ ಬಳಕೆ ಮಾಡುವುದಿಲ್ಲ. ನಾವು ನಿಮಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತೇವೆ. ನಮ್ಮ ಆಚಾರ ವಿಚಾರಕ್ಕೆ ತೊಂದರೆ ಆದರೆ, ಕೃಷಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಗೆ ತೊಂದರೆ ಆದರೆ, ಜನರಿಗೆ ತೊಂದರೆ ಆದಾಗ ಹೋರಾಟ ಮಾಡಬೇಕು. ಅಭಿವೃದ್ದಿಗಾಗಿ ಹೋರಾಟ ಮಾಡಿ ಅದು ಬಿಟ್ಟು ನಾಯಕರೊಬ್ಬರಿಗೆ ಈ ಪದ ಬಳಸುವುದು ಒಳ್ಳೆಯದಲ್ಲ ಇನ್ನು ಮುಂದೆಯಾದರೂ ಶ್ರೀಯುತ ಭರತ್ ಶೆಟ್ಟಿಯವರು ಗೌರವ ಉಳಿಸಿಕೊಳ್ಳುವ ಕೆಲಸ ಮಾಡಿ. ನಾವೆಲ್ಲ ಕಾಂಗ್ರೆಸ್ ಪಕ್ಷ ಸುಮ್ಮನೆ ಕೂತುಕೊಳ್ಳುವುದಿಲ್ಲ. ನೀವು ಬದಲಾವಣೆ ಆಗುವುದು ಉತ್ತಮ. ನಿಮಗೂ, ಸಮಾಜಕ್ಕೂ, ನಿಮ್ಮ ಪಕ್ಷಕ್ಕೂ ಒಳ್ಳೆದು, ಬದಲಾವಣೆ ಆಗದಿದ್ದಲ್ಲಿ ಮುಂದಿನ ದಿವಸ ನಿಮ್ಮಂತೆ ಮಾತನಾಡುವ ಪ್ರವೃತ್ತಿಯನ್ನು ಗಳಿಸಿಕೊಳ್ಳಬೇಡಿ. ನಿಮ್ಮನ್ನು ತಿದ್ದುವಂತ ಕೆಲಸ ಮಾಡಿ. ಅವಹೇಳನ ಪದ ಬಳಸಿದರೆ ಕಾಂಗ್ರೆಸ್ ಪಕ್ಷ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

 

ಮೋದಿಯ ಆಡಳಿತದ ಆರಂಭದಿಂದ ದ್ವೇಷದ ರಾಜಕಾರಣ ಆರಂಭ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಅವರು ಮಾತನಾಡಿ ಮೋದಿ ಅಡಳಿತ ಬಂದ ಬಳಿಕ ಮಹತ್ಮಾಗಾಂಧೀಜಿ, ನೆಹರೂರವರನ್ನು ದೂಷಿಸಿದರು. ಗಣ್ಯ ವ್ಯಕ್ತಿಗಳನ್ನು ದೂಷಿಸಿದರು. ಯಾರು ಅವರ ವಿರುದ್ಧ ನಿಲ್ಲುತ್ತಾರೋ ಅವರನ್ನು ನಾಶ ಮಾಡುವ ಪ್ರಯತ್ನ ಆಗುತ್ತಿತ್ತು. ಅದು ನಿರಂತರವಾಗಿ ಮುಂದುವರಿದು ಇವತ್ತು ಭರತ್ ಶೆಟ್ಟಿಯವರು ಈ ಅವಹೇಳನ ಮಾತುಗಳನ್ನಾಡುತ್ತಿದ್ದಾರೆ. ಒಬ್ಬ ಶಾಸಕನಾಗಿ ಸಂಸತ್, ವಿಧಾನಸಭೆಯ ಭದ್ರತೆಯ ಕುರಿತು ಗೊತ್ತಿದ್ದರೂ ಸಂಸತ್‌ನೊಳಗೆ ಹೋಗಿ ವಿರೋಧ ಪಕ್ಷದ ನಾಯಕನ ಕಪಾಳಕ್ಕೆ ಹೊಡೆಯುವ ಹೇಳಿಕೆ ದೇಶದ ಭದ್ರತೆಗೆ ಅಪಮಾನ ಮಾಡಿದಂತಾಗಿದೆ. ಲೋಕ ಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಮೋದಿಗಿಂತ ಹೆಚ್ಚು ಸೀಟ್ ಪಡೆದ ರಾಹುಲ್ ಗಾಂಧಿ ತಮ್ಮ ನಾಯಕತ್ವವನ್ನು ತೋರಿಸಿದ್ದಾರೆ. ಇವತ್ತು ಚುನಾವಣೆಯಲ್ಲಿ 20 ಸೀಟ್ ಆಚೆ ಈಚೆ ಆದರೂ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಿದ್ದರು ಎಂಬುದನ್ನು ಬಿಜೆಪಿ ತಿಳಿದು ಕೊಳ್ಳಬೇಕು. ಇವತ್ತು ಅವರ ವಿರುದ್ಧ ಅವಹೇಳನ ಕಾರಿಯಾಗಿ ಮಾತನಾಡುವ ಶಾಸಕ ಭರತ್ ಶೆಟ್ಟಿಯವರಿಗೆ ತಾಕತ್ತು ಧಮ್ಮು ಇದ್ದರೆ ರಾಹುಲ್ ಗಾಂಧಿಗೆ ಹೊಡೆದು ನೋಡಲಿ. ಇಲ್ಲಾ ನಮ್ಮಲ್ಲಿ ಕ್ಷಮೆ ಕೇಳಲಿ. ಅದು ಇಲ್ಲಾಂತಾದರೆ ನಾವು ನಿಮ್ಮನ್ನು ಲುಚ್ಚ, ಲಫಂಗ ಎಂದು ಹೇಳುತ್ತೇವೆ ಎಂದರು.

 

ನಾವು ಗಾಂಧಿ ಪೀಳಿಗೆಯವರು, ಬಿಜೆಪಿ ನಾತೂರಾಮ್ ಗೋಡ್ಸೆ ಪೀಳಿಗೆಯವರು:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಎಂ ಎಸ್ ಮಹಮ್ಮದ್ ಅವರು ಮಾತನಾಡಿ ರಾಹುಲ್ ಗಾಂಧಿ ದೇಶದ ಭವಿಷ್ಯದ ಪ್ರಧಾನಿ. ಬಿಜೆಪಿಯವರ ಕುತಂತ್ರ ರಾಜಕಾರಣ ನಡೆಯುವುದಿಲ್ಲ. ನಾಯಕತ್ವಕ್ಕಾಗಿ ಬಿಜೆಪಿಯಲ್ಲಿ ಶಾಸಕರು ಪೈಪೋಟಿ ಮಾಡುತ್ತಿದ್ದಾರೆ. ಭರತ್ ಶೆಟ್ಟಿಯವರು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರವೊಂದಿಗೆ ಪೈಪೋಟಿ ಮಾಡುತ್ತಿದ್ದಾರೆ. ಯಾಕೆಂದರೆ ಬಿಜೆಪಿ ಭಯೋತ್ಪಾದಕತೆಯ ಹೇಳಿಕೆಯ ಮೂಲಕ ನಾಯಕತ್ವ ಆಯ್ಕೆ ಮಾಡುತ್ತಿದೆ. ರಾಹುಲ್ ಗಾಂಧಿ ವ್ಯಕ್ತಿತ್ವದ ಮುಂದೆ ಭರತ್ ಶೆಟ್ಟಿ ಏನು ಅಲ್ಲ. ಭರತ್ ಶೆಟ್ಟಿ ಭಯೋತ್ಪಾದಕರು. ಬಿಜೆಪಿ ನಾತೂರಾಮ್ ಗೂಡ್ಸೆ ಪೀಳಿಗೆಯವರು. ನಾವು ಮಹಾತ್ಮಾ ಗಾಂಧಿ ಪೀಳಿಗೆಯವರು. ಭರತ್ ಶೆಟ್ಟಿ ಎಲ್ಲಿದ್ದಾರೆ ಎಂದು ಯಾರಿಗೂ ಗೊತ್ತಿರಲಿಲ್ಲ. ಅದಕ್ಕೆ ಅವರು ಮೊನ್ನೆ ಹೇಳಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ಅವರ ಭಯೋತ್ಪಾದಕ ಮನೋಸ್ಥಿತಿಯನ್ನು ತೋರಿಸುತ್ತಿದ್ದೆ.

ಭರತ್ ಶೆಟ್ಟಿ ಗೂಂಡನಾಗಿ ವರ್ತಿಸುವುದು ಸರಿಯಲ್ಲ:
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ ರಾಜಾರಾಮ್ ಅವರು ಮಾತನಾಡಿ ಭಾರತ್ ಜೋಡೊ ಕಾರ್ಯಕ್ರಮದ ಮೂಲಕ ದೇಶದ ಶಾಂತಿಗಾಗಿ ಶ್ರಮವಹಿಸಿ ನಾಯಕ ರಾಹುಲ್ ಗಾಂಧಿ ಅವರ ವಿರುದ್ದ ಅವಹೇಳನ ರೀತಿಯಲ್ಲಿ ಮಾತನಾಡಿದ ಶಾಸಕ ಭರತ್ ಶೆಟ್ಟಿವರಿಗೆ ಧಿಕ್ಕಾರ ಕೂಗಬೇಕಾಗಿದೆ. ನಮ್ಮ ಕಾರ್ಯಕರ್ತರು ಇವರ ಅವಿವೇಕತನದ ಮಾತುಗಳಿಗೆ ಉತ್ತರ ಕೊಡುತ್ತಾರೆ. ಘಣತೆ ಗೌರವ ಕಾಪಾಡಬೇಕಾದ ಭರತ್ ಶೆಟ್ಟಿ ತೀರಾ ಗೂಂಡನಾಗಿ ವರ್ತಿಸುವುದು ಸರಿಯಲ್ಲ. ರಾಜಕಾರಣದಲ್ಲಿ ರಾಜಧರ್ಮ ಪಾಲಿಸಿ ಎಂದರು.

ಭರತ್ ಶೆಟ್ಟಿಯವರು ನಮ್ಮ ಶಾಸಕ ಅಶೋಕ್ ರೈ, ಮಾಜಿಗಳಾದ ಶಕುಂತಳಾ ಶೆಟ್ಟಿ, ಸೊರಕೆ, ಡಿ.ವಿಯವರನ್ನು ನೋಡಿ ಕಲಿಬೇಕು:
ಅಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡನ್ನೂರು ಅವರು ಮಾತನಾಡಿ ಸಂವಿಧಾನವನ್ನು ಮೀರಿ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತಿದೆ. ತನ್ನ ಇರುವಿಕೆಯನ್ನು ತೋರಿಸಲು ಭರತ್ ಶೆಟ್ಟಿ ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಸದನದಲ್ಲಿ 1 ಗಂಟೆ 16 ನಿಮಿಷ ಮಾತನಾಡಿದಾಗ ಪ್ರಧಾನಿ ನರೇಂದ್ರ ಮೋದಿಯವರು ಸಹ ಕಿವಿಯಾಗಿದ್ದರು. ಅದೇ ಭರತ್ ಶೆಟ್ಟಿ ಅವರು ಕುಟುಂಬವನ್ನೆ ನಡುನೀರಿಗೆ ಬಿಟ್ಟವರು. ಆದರೂ ಅದನ್ನು ನಾವು ಹೇಳುವುದಿಲ್ಲ. ನೀವು ಮಾಡಿದ ಅನಾಚರಕ್ಕೆ ನಿಮ್ಮ ಕಿಬಿತ್ತ ಕಂಡೆಗೆ ನಿಮ್ಮಮನೆಯವರು ಹೊಡೆಯಬೇಕಾಗಿತ್ತು. ನಿಮಗೆ ನಾಯಕತ್ವ ಇಲ್ಲ. ನೀವು ನಾಯಕನಲ್ಲ ನಾಲಾಯಕ್ ಶಾಸಕರಾಗಿ ಪ್ರಚಾರದಲ್ಲಿದ್ದೀರಿ. ನೀವು ಪುತ್ತೂರಿನ ಶಾಸಕ ಅಶೋಕ್ ರೈ, ಮಾಜಿ ಶಾಸಕರಾದ ಶಕುಂತಳಾ ಶೆಟ್ಡಿ, ವಿನಯಕುಮಾರ್ ಸೊರಕೆ, ಡಿ ವಿ ಸದಾನಂದ ಗೌಡರನ್ನು ನೋಡಿ ಕಲಿಯಿರಿ ಎಂದರು.‌

ಹಿಂಸೆಯನ್ನು ಪ್ರತಿಪಾದಿಸುವವರ ಕೆಬಿತ್ತಕಂಡೆಗೆ ಹೊಡೆಯಲಿ:
ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಅವರು ಮಾತನಾಡಿ ಯಾರು ದೇಶದಲ್ಲಿ ಹಿಂಸೆಯನ್ನು ಪ್ರತಿಪಸದಿಸುತ್ತಾ ಬಂದರೋ, ಹಿಂದು ಮುಸಲ್ಮಾನರನ್ನು ವಿಭಜಿಸುವ ತಂತ್ರ ಮಾಡಿದ್ದಾರೋ ಅಂತವರ ಕೆಬಿತಕಂಡೆಗೆ ಹೊಡಿಬೇಕಾದಿತು ಎಂದರು.

ಭರತ್ ಶೆಟ್ಟಿಯವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು:
ವೈದ್ಯರಾದವರು ರಾಜಕಾರಣದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಮಾತನಾಡುತ್ತಾರೆಂದು ಕೇಳುವಾಗ ಬಹಳ ಅಚ್ಚರಿ ಮತ್ತು ಇದು ಅವರ ವೃತ್ತಿ ಕ್ಷೇತ್ರಕ್ಕೂ ಅಗೌರವ ತಂದಿದೆ. ಭರತ್ ಶೆಟ್ಟಿಯಂತಹ ಅಯೋಗ್ಯ ಶಾಸಕನನ್ನು ಕ್ಷೇತ್ರದ ಜನರು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಜನರೆಲ್ಲ ಅಯೋಗ್ಯರಾಗಿ ಹೋಗಿದ್ದಾರೆ. ಆ ಜನರಿಗೆ ನಾವು ಸವಾಲು ಹಾಕಬೇಕಾಗಿದೆ. ಯಾಕೆಂದರೆ ದೇಶದ ಒಟ್ಟು ರಾಜಕೀಯದಲ್ಲಿ ಹೊಲಸು ಕಾಣುತ್ತಿದೆ ಎಂದ ಅವರು ಭರತ್ ಶೆಟ್ಟಿಯವರು ಈ ಮನೋಪ್ರವೃತ್ತಿಯಿಂದ ಹೊರ ಬರಬೇಕಾಗಿದೆ. ಇಲ್ಲದಿದ್ದರೆ ಇನ್ನು ಅವರು ಮೆಂಟಲ್ ಆಸ್ಪತ್ರೆಗೆ ಸೇರುವ ಸಮಯ ದೂರವಿಲ್ಲ. ಅವರು ಕ್ಷೇತ್ರದ ಜನರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕೆಂದು ಆಗ್ರಹಿಸಿದರು.

ಕರ್ನಾಟಕ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಎನ್ ಚಂದ್ರಹಾಸ ಶೆಟ್ಟಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಪಾರೂಕ್ ಬಾಯಬ್ಬೆ, ಜಿಲ್ಲಾ ಯುವಕಾಂಗ್ರೆಸ್ ಪ್ರ.ಕಾರ್ಯದರ್ಶಿ ಬಶೀರ್ ಪರ್ಲಡ್ಕ, ನಗರ ಯುವಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಜಿಲ್ಲಾ ಯುವಕಾಂಗ್ರೆಸ್ ಕಾರ್ಯದರ್ಶಿ ರಂಜಿತ್ ಬಂಗೇರ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸುದೇಶ್ ಕುಮಾರ್ ಚಿಕ್ಕಪುತ್ತೂರು, ನೇಮಾಕ್ಷ ಸುವರ್ಣ, ಮನಮೋಹನ್, ನಗರಸಭಾ ಸದಸ್ಯರಾದ ರಿಯಾಜ್ ಪರ್ಲಡ್ಕ, ದಿನೇಶ್ ಶೇವಿರೆ, ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ, ಪುಡಾ ಅಧ್ಯಕ್ಷ ಭಾಸ್ಕರ್ ಗೌಡ ಕೋಡಿಂಬಾಳ, ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಬೊಲೋಡಿ ಚಂದ್ರಹಾಸ ರೈ, ಕೌಶಲ್ ಪ್ರಸಾದ್ ಶೆಟ್ಟಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಶಿಕಿರಣ್ ರೈ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ವಂದಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version