ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಕೊಡಿಪ್ಪಾಡಿ ಗ್ರಾಮದಲ್ಲಿ ಅಡಕೆಗೆ ಎಲೆ ಚುಕ್ಕಿ ರೋಗ ಗ್ರಾಮದಲ್ಲಿ‌ಪಸರಿಸಿದ ಮಾರಕ ರೋಗ: ಪರಿಹಾರಕ್ಕಾಗ್ರಹಿಸಿ ಶಾಸಕರಿಗೆ‌ಮನವಿ

Published

on

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಬಹುತೇಕ ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದ್ದು ಸುಮಾರು ಸಾವಿರಾರು ಅಡಿಕೆ ಮರಗಳು ನಾಶವಾಗಿದೆ ಇದರಿಂದ ಕೃಷಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು ಸರಕಾರದಿಂದ ಸೂಕ್ತ ಔಷಧಿ ಮತ್ತು ಪರಿಹಾರಕ್ಕೆ ಆಗ್ರಹಿಸಿ ಕೊಡಿಪ್ಪಾಡಿ ಅಡಕೆ ಕೃಷಿಕರ ನಿಯೋಗ ಬನ್ನೂರು ರೈತರ ಸೇವಾ ಸಹಕಾರಿ‌ಸಂಘದ‌ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ‌ಶಾಸಕರ ಮೂಲಕ ಸರಕಾರಕ್ಕೆ‌ಮನವಿ ಸಲ್ಲಿಸಿದರು.

ನಾವು ಅಡಿಕೆ ಕೃಷಿಕರಾಗಿದ್ದು, ಅಡಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು , ಬೇರೆ ಯಾವುದೇ ಆದಾಯದ ಮೂಲಗಳಿರುವುದಿಲ್ಲ. ನಾವು ಹೊಂದಿದ ಜಾಗೆಯಲ್ಲಿ ಅಡಿಕೆ ಕೃಷಿ ಮಾಡಿದ್ದು. ಈ ಸಾಲಿನಲ್ಲಿ ಕುಡಿಪ್ಪಾಡಿ ಗ್ರಾಮದ ಭಾಗಶ ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗ ಬಂದಿದ್ದು, ಸಣ್ಣ ಅಡಿಕೆ ಉದುರಿ ಹೋಗಿದೆ. ಸದರಿ ರೋಗವನ್ನು ತಡೆಗಟ್ಟುವರೆ ಬೇರೆ ಬೇರೆ ಕಂಪೆನಿಯವರು ತಿಳಿಸಿದ ಮೇರೆಗೆ 3-4 20 ರೋಗದ ಬಾದೆ ಕಡಿಮೆ ಆಗಿರುವು ದಿಲ್ಲ. ಔಷದಿ ಸಿಂಪರಣೆ ಮಾಡಿದರೂ ನಮ್ಮ ತೋಟಕ್ಕೆ ಕೃಷಿಕ ಪಂಜಿಗುಡ್ಡೆ ಈಶ್ವರ ಭಟ್ ರವರ ಮನವಿಯ ಮೇರೆಗೆ ಇಂದೋರ್ ಶ್ರೀ ಸಿದ್ದಿ ಅಗ್ರಿ ಕಂಪೆನಿ ಪೈ. ಅ. ಕಾರ್ಯಪಾಲಕ ನಿರ್ದೆಶಕರಾದ ಪೆರ್ವೋಡಿ ನಾರಾಯಣ ಭಟ್ ರವರು ಬಂದು ಪರಿಶೀಲಿಸಿ ಅದು ಎಲೆ ಚುಕ್ಕಿ ರೋಗ ಎಂದು ದೃಢೀಕರಿಸಿದ್ದಾರೆ ಈ ರೀತಿಯಿಂದ ನಮಗೆ ತುಂಬಾ ಆರ್ಥಿಕ ನಷ್ಟವಾಗಿದೆ. ಆದುದರಿಂದ ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಔಷದಿ ಯನ್ನು ಸಿಂಪಡಿಸಲು ಸರಕಾರದಿಂದ ಸಹಾಯಧನವನ್ನು ಒದಗಿಸುವ‌ಮೂಲಕ ನಮ್ಮ ಅಡಕೆ ತೋಟವನ್ನು ಎಲೆ ಚಿಕ್ಕಿ ರೋಗದಿಂದ ರಕ್ಷಣೆ ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

 

ಅಧಿವೇಶನದಲ್ಲಿ ಪ್ರಸ್ತಾಪಿಸುವೆ: ಅಶೋಕ್ ರೈ
ಅಡಕೆ ಎಲೆ ಚುಕ್ಕಿ ರೋಗ ದ‌ಕ ಜಿಲ್ಲೆಯಲ್ಲಿ‌ವ್ಯಾಪಕವಾಗಿ ಹರಡುತ್ತಿದೆ. ಕಳೆದ ಕೆಲವು ತಿಂಗಳಿಂದ ಸುಳ್ಯ‌ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ರೋಗ ಇದೀಗ ಪುತ್ತೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು ಕೃಷಿಕರು‌ಕಂಗಾಲಾಗಿದ್ದಾರೆ. ಇದಕ್ಕೆ ಸೂಕ್ತ ಔಷಧಿಯನ್ನು ಪತ್ತೆ ಮಾಡಬೇಕಿದೆ.‌ನಷ್ಟಕ್ಕೊಳಗಾದ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ವಿಚಾರವನ್ನು ವಿಧಾನಸಭಾ ಅಧಿವೇಶನದಲ್ಲಿ‌ ಸರಕಾರದ‌ಗಮನ ಸೆಳೆಯುವುದಾಗಿ ಶಾಸಕ ಅಶೋಕ್ ರೈ ನಿಯೋಗಕ್ಕೆ ಭರವಸೆ ನೀಡಿದರು.

 

ಈ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ‌ಸಹಕಾರಿ‌ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್, ನಿರ್ದೇಶಕರುಗಳಾದ ಸುಬಾಶ್ ನಾಯಕ್ ನೆಕ್ಕರಾಜೆ, ದೇವಾನಂದ ಕೆ, ಸುಬ್ರಹ್ಮಣ್ಯ ಗೌಡ ಹಣಿಯೂರು, ಮೋಹನ್ ಪಕ್ಕಳ ಕುಂಟಾಪು,ಧೀರಜ್ ಗೌಡ ಕೊಡಿಪ್ಪಾಡಿ, ಕೇಶವ ಅಶ್ವತ್ತಡಿ, ಅಶೋಕ್ ಗೌಡ ಅಶ್ವತ್ತಡಿ, ಗಂಗಾಧರ ಗೌಡ, ಇಬ್ರಾಹಿಂ ಕೊಡಿಪ್ಪಾಡಿ ದಿನೇಶ ಗೌಡ ಗೋಮುಖ, ವಾಸುದೇವ‌ಮಯ್ಯ, ರಾಮ ಜೋಯಿಸ,ದೇವಯ್ಯ ಗೌಡ ಅಂಜಾಲ,ಸುಬ್ರಾಯ ನಾಯ್ಕ ಕೊಳತ್ತಿಮಾರ್,ರಾಜೇಶ‌ಕೊಡಿಪ್ಪಾಡಿ, ರಾಧಾಕೃಷ್ಣ ನಂದನ, ಕರೀಂ‌ಆನಾಜೆ, ಇರ್ಷಾದ್ ಕೊಡಿಪ್ಪಾಡಿ, ಶ್ರೀಕಾಂತ ಕೊಡಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version