Published
5 months agoon
By
Akkare Newsದ.ಕ.ಜಿಲ್ಲೆಯಾದ್ಯಾಂತ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಅವಾಂತರಗಳು ಸೃಷ್ಟಿಯಾಗುತ್ತಿದ್ದು,ಕೊಳ್ನಾಡು ಗ್ರಾ.ಪಂಚಾಯತ್ ವ್ಯಾಪ್ತಿಯ ಸುರಿಬೈಲ್ – ಖಂಡಿಗ ರಸ್ತೆಯ ಕಾಂಕ್ರೀಟ್ ಅಡಿಸ್ಥಳ ಕುಸಿದ ಕಾರಣ ಮೋರಿ ಸಮೇತ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದ್ದು ಅಪಾರ ಜನವಸತಿ ಪ್ರದೇಶವಾದ ಖಂಡಿಗ ಸುರಿಬೈಲ್ ಜನಸಂಚಾರ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ.
ಇಂದು ಕುಸಿತಕೊಂಡ ರಸ್ತೆಗೆ ತಕ್ಷಣ ಬೇಟಿ ನೀಡಿ ಪರಿಶೀಲಿಸಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕ ದ.ಕ ಜಿಲ್ಲಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್ ರವರು ವೀಕ್ಷಿಸಿ ಸರಕಾರದ ಗಮನ ಸೆಳೆದು ಪರಿಹಾರ ಒದಗಿಸುವುದಾಗಿ ಭರವಸೆ ನೀಡಿ ತಾತ್ಕಾಲಿಕವಾಗಿ ಬದಲಿ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಲು ಸೂಚಿಸಿದರಲ್ಲದೆ,ದ.ಕನ್ನಡ ಜಿ.ಪಂಚಾಯತ್ ಸಹಾಯಕ
ಅಭಿಯಂತಕರು ಮತ್ತು ಎ.ಇ.ನಾಗೇಶ್ ಸುಭಾಶ್ಚಂದ್ರ ಶೆಟ್ಟಿಯವರ ಕೋರಿಕೆಗೆ ಆಗಮಿಸಿ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವುದಾಗಿ ತಿಳಿಸಿದ ನಂತರ ಮುಂದಿನ ಕಾರ್ಯಯೋಜನೆಯ ಬಗ್ಗೆ ಮಾತುಕತೆ ನಡೆಸಿದರು…ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಹಮೀದ್ ಸುರಿಬೈಲ್,ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಪ್ ಶೆಡ್,ಅಬ್ದುಲ್ ರಹಿಮಾನ್ ಸಾಲೆ,ಖಾದರ್ ನಾರ್ಶ,ಸುಲೈಮಾನ್ ಖಂಡಿಗ ಉಪಸ್ಥಿತಿತರಿದ್ದರು…