Published
5 months agoon
By
Akkare Newsಪುತ್ತೂರು:ಉಪ್ಪಿನಂಗಡಿಯ ಕೊಡಿಂಬಾಡಿ ವಿನಯಕನಗರ ಸಮೀಪ ಧರೆ ಕುಸಿದು ವಿದ್ಯುತ್ ಕಂಬ ತುಂಡಾದ ಘಟನೆ ನಡೆದಿದೆ. ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಕಂಬವನ್ನು ತೆರವುಗೊಳಿಸಿ ಅದನ್ನು ದುರಸ್ಥಿ ಮಾಡುವ ಕಾರ್ಯವನ್ನು ಪವರ್ ಮ್ಯಾನ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಚರಂಡಿ ವ್ಯವಸ್ಥೆ ಮುಚ್ಚಿದ್ದು ಇಂದು ಸುರಿಯುತ್ತಿರುವ ಮಳೆ ವಿಪರೀತಗೊಂಡರೆ ನೀರು ಹಾದುಹೋಗುವ ಸಮಸ್ಯೆ ವಿಪರೀತವಾಗಬಹುದು ಎಂದು ತಿಳಿದುಬಂದಿದೆ.