ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಯುವವಾಹಿನಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಭಾಷಣ ಸ್ಪರ್ಧೆ

Published

on

ಬಂಟ್ವಾಳ: ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ಇವರ ಸಹಯೋಗದೊಂದಿಗೆ ಯುವವಾಹಿನಿ ರಿ. ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆಯ ಅಂಗವಾಗಿ ಭಾಷಣ ಸ್ಪರ್ಧೆ ದಿನಾಂಕ: 17/08/2024 ರಂದು ನಾರಾಯಣ ಗುರು ಸಭಾಭವನ ಗಾಣದಪಡ್ಪು ಬಿಸಿರೋಡ್ಇಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿರುದು

 

ಎಂದು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾದ ಬ್ರಿಜೇಶ್ ಕಂಜತ್ತೂರು, ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

 

ಪ್ರಾಥಮಿಕ ವಿಭಾಗ:
ವಿಷಯ:
1.ಸಂತ ಶ್ರೇಷ್ಠ ನಾರಾಯಣ ಗುರು
2.ನಾರಾಯಣ ಗುರು ವ್ಯಕ್ತಿಯಲ್ಲ ಶಕ್ತಿ

ಪ್ರೌಢಶಾಲಾ ವಿಭಾಗ:
ವಿಷಯ:
1. ಸಾಮಾಜಿಕ ಬದಲಾವಣೆಯಲ್ಲಿ ನಾರಾಯಣ ಗುರು ಚಿಂತನೆಯ ಪಾತ್ರ
2. ನಾರಾಯಣಗುರು ಸಂಘಟಿಸಿದ ಚಳವಳಿಗಳು ಮತ್ತು ಅವುಗಳ ಅವಶ್ಯಕತೆ
(ವಿ.ಸೂ: ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಳ್ಳುವುದು)

ನಿಯಮಗಳು:
1. ಸಮಯ 4+1ನಿಮಿಷ ಮಾತ್ರ.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
2. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.

3. ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣಪತ್ರದೊಂದಿಗೆ ತಾ. 20/08/2024ರ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು. ಹಾಗೂ ಇಬ್ಬರಿಗೆ ಭಾಷಣ ಪ್ರಸ್ತುತಿ ಪಡಿಸಲು ಅವಕಾಶ ಕಲ್ಪಿಸಲಾಗುವುದು.
4. ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ನಡೆಯುವುದು.

 

5. ತೀರ್ಪುಗಾರರ ತೀರ್ಮಾಣವೇ ಅಂತಿಮ.
6. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ದೃಢೀಕರಣ ಪತ್ರದೊಂದಿಗೆ ಹಾಜರಾಗುವುದು.
7. ⁠ಸ್ಪರ್ಧೆಗೆ ಹೆಸರು ನೋಂದಾಯಿಸಲು ಕಡೆಯ ದಿನಾಂಕ: 10/08/2024 ನೊಂದಾವಣೆಗಾಗಿ 9164800648, +91 78993 26189 ಈ ದೂರವಾಣಿ ಸಂಖೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕಾಗಿ ವಿನಂತಿಸಿದ್ದಾರೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version