ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕ್ರೀಡೆ

Olympics: ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಗೆ ಲಗ್ಗೆ ಇಟ್ಟ ಭಾರತದ ಪ್ರೀತಿ ಪವಾರ್..!

Published

on

ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 54ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್‌ ಫೈನಲ್‌ ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ
ಗೆಲುವಿನ ಪತಾಕೆಯನ್ನು ಹಾರಿಸುವ ಭರವಸೆಯನ್ನು ಮೂಡಿಸಿದ್ದಾರೆ.

 

ಏಷಿಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಅವರಿಗೆ ಇದು ಚೊಚ್ಚಲ ಒಲಿಂಪಿಕ್ ಸ್ಪರ್ಧೆಯಾಗಿದ್ದು, ನಿನ್ನೆ(ಜು.27) ರಾತ್ರಿ ನಡೆದ ವಿಯೆಟ್ನಾಂನ ವೋ ಥಿ ಕುಮ್ ಅನ್ಹ್‌ ಅವರೊಂದಿಗಿನ ಪೈಪೋಟಿಯಲ್ಲಿ  ಪ್ರಾಬಲ್ಯ ಮೆರೆದ ಪ್ರೀತಿ 5-0 ಅಂತರದ ಗೆಲುವನ್ನು ಸಾಧಿಸಿದ್ದಾರೆ.

ಹರಿಯಾಣದ 20 ವರ್ಷದ ಬಾಕ್ಸರ್ ಪ್ರೀತಿ ಕ್ರೀಡಾಕೂಟಕ್ಕೆ ಕೆಲವು ದಿನಗಳ ಮೊದಲು ಅನಾರೋಗ್ಯಕ್ಕೆ ತುತ್ತಾಗಿದ್ದರು.

 

ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅಜಯ್ ಸಿಂಗ್ ‘ಜಯದೊಂದಿಗೆ ಅಭಿಯಾನ ಆರಂಭಿಸಿರುವುದು ಸಂಸತ ತಂದಿದೆ. ಕ್ರೀಡಾಕೂಟಕ್ಕಿಂತ ಮೊದಲು ಪ್ರೀತಿ ಅನಾರೋಗ್ಯಕ್ಕೆ ತುತ್ತಾಗಿದ್ದು
ಬಳಿಕ ಚೇತರಿಸಿಕೊಂಡು ಸ್ಪರ್ಧೆಯಲ್ಲಿ ಅಭೂತಪೂರ್ವ ಗೆಲುವಿಗಾಗಿ ಹೋರಾಟ ನಡೆಸಿದ್ದು ತಮ್ಮ ಅಸಾಧಾರಣ ಧೈರ್ಯ ಪ್ರದರ್ಶಿಸಿದ್ದಾರೆ’ ಎಂದು ಹೇಳಿದ್ದಾರೆ.

 

ಪ್ರೀತಿ ಅವರು ಮಂಗಳವಾರ ನಡೆಯಲಿರುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಾಡಲಿದ್ದಾರೆ.

2024 ರ ಒಲಿಂಪಿಕ್ಸ್‌ನಲ್ಲಿ ಪದಕದ ನಿರೀಕ್ಷೆ ಹುಟ್ಟಿಸಿದ ಭಾರತೀಯ ಕ್ರೀಡಾಪಟುಗಳು..!

ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಈಗಾಗಲೇ ಭಾರತದಿಂದ 112 ಜನ ಕ್ರೀಡಾಪಟುಗಳು ತೆರಳಿದ್ದಾರೆ. 16 ವಿವಿಧ ಕ್ರೀಡೆಯಲ್ಲಿ ಸುಮಾರು 69 ಪದಕಗಳಿಗಾಗಿ ಈ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ 29 ಕ್ರೀಡಾಪಟುಗಳು ಭಾಗವಹಿಸಿದ್ದು 16 ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ.

ಶೂಟಿಂಗ್ ವಿಭಾಗದಲ್ಲಿ 21 ಕ್ರೀಡಾಪಟುಗಳಿದ್ದು, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಫೇವರೇಟ್‌ ಸ್ಪರ್ಧಾಳುಗಳು ಇದರಲ್ಲಿದ್ದಾರೆ. ಇವರಲ್ಲಿ ದೀಪಿಕಾ ಕುಮಾರಿ ಮತ್ತು ತರುಣದೀಪ್ ರೈ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಉದ್ಘಾಟನಾ ಸಮಾರಂಭಕ್ಕೂ ಮೊದಲು ಅರ್ಹಾತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.

 

ಪದಕದ ನಿರೀಕ್ಷೆ ಹುಟ್ಟಿಸಿರುವ ಆರ್ಚರಿ ವಿಭಾಗ..
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಪದಕ ಗೆಲ್ಲುವ ಅವಕಾಶ ಜುಲೈ 27 ರಂದು ಲಭಿಸಲಿದೆ. 10 ಮೀಟರ್ ಏರ್‌ ರೈಫಲ್‌ ನ ಮಿಕ್ಸೆಡ್ ವಿಭಾಗದಲ್ಲಿ ಭಾರತೀಯ ಶೂಟರ್‌ಗಳು ಭಾಗವಹಿಸಲಿದ್ದಾರೆ. ಈ ವಿಭಾಗದಲ್ಲಿ ಭಾರತದ ಎರಡು ತಂಡಗಳು ಭಾಗವಹಿಸಲಿದ್ದು, ಸಂದೀಪ್ ಸಿಂಗ್ ಹಾಗೂ ಎಲವೆನಿಲ್ ವಲರಿವನ್ ಮತ್ತು ಅರ್ಜುನ್ ಬಾಬುತಾ ಹಾಗೂ ರಿಮಿತಾ ಜಿಂದಾಲ್ ಈ ಮಿಶ್ರ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಮನು ಭಾಕರ್ ಎರಡು ವ್ಯಯಕ್ತಿಕ ಪಿಸ್ತೂಲ್ ವಿಭಾಗದ 10 ಮೀಟರ್‌ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

 

ಜಾವಲಿನ್, ಬ್ಯಾಡ್ಮಿಂಟನ್, ಬಾಕ್ಸಿಂಗ್‌ ವಿಭಾಗದಲ್ಲಿ ಪದಕ ವಿಜೇತರು
ಜಾವಲಿನ್ ವಿಭಾಗದಲ್ಲಿ ಚಾಂಪಿಯನ್ ನೀರಜ್ ಚೋಪ್ರಾ ಭಾರತದ ಚಿನ್ನದ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಜಾವಲಿನ್ ವಿಭಾಗದ ಅರ್ಹತಾ ಸುತ್ತು ಆಗಸ್ಟ್ 6 ರಂದು ಆರಂಭವಾಗಿ ಫೈನಲ್ ಆಗಸ್ಟ್ 8 ರಂದು ನಡೆಯಲಿದೆ. ಜುಲೈ 27 ರಿಂದ ಆಗಸ್ಟ್ 5 ರ ತನಕ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ನಡೆಯಲಿದ್ದು, ಎರಡು ಬಾರಿಯ ಚಾಂಪಿಯನ್ ಪಿವಿ ಸಿಂಧು ಮತ್ತೆ ಪದಕದ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಇನ್ನು 2020 ರ ಟೋಕಿಯೋ ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ 49 ಕೆಜಿ ವಿಭಾಗದ ವೇಟ್‌ ಲಿಫ್ಟರ್‌ ಮೀರಾಬಾಯಿ ಆಗಸ್ಟ್‌ 7 ರಂದು ಪದಕದ ಭೇಟೆಗೆ ಇಳಿಯಲಿದ್ದಾರೆ. ಇವರ ಜೊತೆಗೆ ಪದಕದ ನಿರೀಕ್ಷೆಯಲ್ಲಿ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೋವ್ಲಿನಾ ಬೋರ್ಗೋಹೈನ್ ಇದ್ದಾರೆ. ಹಾಗೇ ಇದೇ ಮೊದಲ ಬಾರಿ ಒಲಿಂಪಿಕ್ಸ್ ಪ್ರವೇಶಿಸಿರುವ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ನಿಖತ್ ಜರೀನ್ ಅವರೂ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ಸೈಲಿಂಗ್, ಶೂಟಿಂಗ್, ಈಜು, ಕುಸ್ತಿ, ಟೇಬಲ್ ಟೆನ್ನಿಸ್ ಮತ್ತು ಟೆನ್ನಿಸ್ ಇವು ಪ್ಯಾರಿಸ್ 2024 ರಲ್ಲಿ 16 ಕ್ರೀಡಾ ಭಾರತೀಯ ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಭಾರತವು ಟೋಕಿಯೊ 2020 ರಿಂದ ಒಂದು ಚಿನ್ನ ಸೇರಿದಂತೆ ಏಳು ಪದಕಗಳ ದಾಖಲೆಯೊಂದಿಗೆ ಮರಳಿದೆ ಮತ್ತು ಪ್ಯಾರಿಸ್ 2024 ನಲ್ಲಿ ಎಣಿಕೆಯನ್ನು ಉತ್ತಮಗೊಳಿಸಲು ನೋಡುತ್ತದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version