Published
4 months agoon
By
Akkare Newsಬಂಟ್ವಾಳ : ಕೆಸರು ಗದ್ದೆ ಕ್ರೀಡಾಕೂಟಗಳು ಕೇವಲ ಆಟಕ್ಕೆ ಸೀಮಿತವಾಗದೆ ನಮ್ಮ ಪೂರ್ವಿಜಕರ ಆಚಾರ ವಿಚಾರ, ಸಂಸ್ಕೃತಿಗಳನ್ನು ಇಂದಿನ ಜನಾಂಗಕ್ಕೆ ನೆನಪಿಸಲು ಸಹಕಾರಿಯಾಗಿದೆ ಎಂದು ಗುರು ಬೆಳದಿಂಗಳು ಫೌಂಡೇಶನ್ ರಿಜಿಸ್ಟರ್ ಕುದ್ರೋಳಿ ಇದರ ಅಧ್ಯಕ್ಷರಾದ ಪದ್ಮರಾಜ್ ಆರ್ ಪೂಜಾರಿ ಹೇಳಿದರು.
ಅವರು ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ವತಿಯಿಂದ ನಡೆದ ಕೆಸರುದ್ದ ಕಂಡೋಡು ಗೊಬ್ಬುದ ಕೂಟ ಕಾರ್ಯಕ್ರಮದ ಸಮರೂಪದಲ್ಲಿ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಬಂಟ್ವಾಳ ಹಿಂದುಳಿದ ವರ್ಗಗಳ ಮೋರ್ಚ ಅಧ್ಯಕ್ಷ ಯಶೋಧರ ಕರ್ಬೆಟ್ಟು ವಹಿಸಿದ್ದರು.
ವೇದಿಕೆಯಲ್ಲಿ ಬಂಟ್ವಾಳ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಮಂಗಳೂರು ಜ್ಯೋತಿಬೀಡಿ ಪಾಣೆ ಮಂಗಳೂರು ಮಾಲಕರಾದ ರಘು ಸಫಲ್ಯ, ಪಿಡಬ್ಲ್ಯೂ ಗುತ್ತಿಗೆದಾರರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಶೈಲೇಶ್ ಪೂಜಾರಿ ಕುರ್ಚಿಗುಡ್ಡೆ, ರಾಮ ಗಣೇಶ್ ಆಟೋ ವರ್ಕ್ಸ್ ಬಿ ಸಿ ರೋಡ್ ಮಾಲಕ ಉಮೇಶ್ ನೆಲ್ಲಿಗುಡ್ಡೆ, ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಪಾಣೆಮಂಗಳೂರು ಇದರ ಮಾಲಕ ಚರಣ್ ಕುಮಾರ್, ದಕ್ಷಿಣ ಕನ್ನಡ ಫ್ಲವರ್ ಡೆಕೋರೇಷನ್ ಮಾಲಕರ ಅಸೋಸಿಯೇಷನ್ ಉಪಾಧ್ಯಕ್ಷ ಅನಿಲ್ ಕೊಟ್ಟಾರಿ, ಸುರಕ್ಷಾ ಹಾರ್ಡ್ವೇರ್ ಮೆಲ್ಕಾರ್ ಮಾಲಕ ಚೇತನ್ ಮೆಲ್ಕಾರ್, ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ರಾದ ಪುರುಷೋತ್ತಮ ಸಾಲಿಯಾನ್, ಡಾಕ್ಟರ್ ಸುಬ್ರಹ್ಮಣ್ಯ ಮೊಗರ್ನಾಡು, ಪ್ರಸಾದ್ ಮರ್ದೋಳಿ, ಮಹಿಳಾ ಸಂಚಾಲಕಿ ನಳಿನಿ ಉಮೇಶ್, ಗೌರವ ಸಂಚಾಲಕಿ ಕಾವ್ಯಶ್ರೀ ನೆಲ್ಲಿಗುಡ್ಡೆ, ಮೊದಲಾದವರು ಉಪಸ್ಥಿತರಿದ್ದರು.
ಕೆಸರು ಗದ್ದೆಯಲ್ಲಿ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಶೇಷ ಸ್ಪರ್ಧೆಯಾಗಿ ಕೆಸರಿನಲ್ಲಿ ನಡೆದ ಹಗ್ಗ ಜಗ್ಗಾಟದ ಪ್ರಥಮ ಬಹುಮಾನವನ್ನು ಜಾನಕಿ ಕನ್ಸ್ಟಕ್ಷನ್ ಶೇಡಿಗುರಿ ಹಾಗೂ ದ್ವಿತೀಯ ಬಹುಮಾನವನ್ನು ಮಿತ್ತಮಜ್ಜಲ್ ಫ್ರೆಂಡ್ಸ್ ಪಡೆದುಕೊಂಡರು.
ಕ್ರೀಡಾಕೂಟದ ತೀರ್ಪುಗಾರರಾಗಿ ಹರೀಶ್ ಅಂತರ, ವಿಶ್ವನಾಥ ಕೆ, ನಾಗರಾಜ್ ಸುಳ್ಯ, ಕ್ರೀಡಾಕೂಟದ ಸ್ಪರ್ಧ ನಿರೂಪಕರಾಗಿ ನವೀನ್ ಪುತ್ತೂರು, ಜಯರಾಜ್ ಕಾಂಚನ್ ಸಹಕರಿಸಿದರು.
ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ಅಧ್ಯಕ್ಷ ಕಿರಣ್ ಅಟ್ಲುರು ಸ್ವಾಗತಿಸಿ, ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.