Published
3 months agoon
By
Akkare Newsಕಾಣಿಯೂರು: ಇತಿಹಾಸಪ್ರಸಿದ್ಧ |ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊಸ್ತಾರೋಗಣೆ ಸೆ 12ರಂದು ನಡೆಯಲಿದೆ. ಪ್ರಾತಃಕಾಲ 5-15ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, 7.30ಕ್ಕೆ ತೆನೆ ತರುವುದು ಹಾಗೂ ಕದಿರು ಪೂಜೆ ನಡೆಯಲಿದೆ. ಬೆಳಿಗ್ಗೆ8 ರ ಬಳಿಕ ದೇವಳದ ನೌಕರರಿಗೆ ಮತ್ತು ಸ್ಥಳೀಯ ಭಕ್ತರಿಗೆ ಕದಿರು ವಿತರಣೆ ನಡೆಯಲಿದೆ.
ದರುಶನದಲ್ಲಿ ವ್ಯತ್ಯಯ: ಹೊಸ್ತಾರೋಗಣೆ ದಿನ ಬೆಳಿಗ್ಗೆ 10ಗಂಟೆಯ ನಂತರ ದೇವರ ದರುಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಅಲ್ಲದೇ ಆಶ್ಲೇಷ ಬಲಿ ಸೇವೆಯು ಬೆಳಿಗ್ಗೆ 9ಗಂಟೆಯ ನಂತರ 2ಪಾಳೆಯಲ್ಲಿ ನಡೆಯಲಿದೆ. ಭಕ್ತಾದಿಗಳು ಸಹಕರಿಸಬೇಕು ಎಂದು ಶ್ರೀ ದೇವಾಲಯದ ಪ್ರಕಟಣೆ ತಿಳಿಸಿದೆ.