ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ವಿಂಡ್​ಫಾಲ್ ಟ್ಯಾಕ್ಸ್ ರದ್ದತಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ? ಏನಿದು ವಿಂಡ್​ಫಾಲ್ ಟ್ಯಾಕ್ಸ್?

Published

on

ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆ ಆಗಿರುವುದರಿಂದ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸಲು ಸರ್ಕಾರ ಆಲೋಚಿಸುತ್ತಿರುವುದು ತಿಳಿದುಬಂದಿದೆ. ಪೆಟ್ರೋಲ್ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ಅವರು, ತೈಲ ಕಂಪನಿಗಳಿಗೆ ಹಾಕಲಾಗುವ ವಿಂಡ್​ಫಾಲ್ ತೆರಿಗೆಯನ್ನು ತೆಗೆದುಹಾಕುವ ಪ್ರಸ್ತಾಪವೊಂದು ಸರ್ಕಾರದ ಪರಾಮರ್ಶೆಯಲ್ಲಿರುವುದನ್ನು ತಿಳಿಸಿದ್ದಾರೆ.

 

 

 

 

ಏನಿದು ವಿಂಡ್​ಫಾಲ್ ಟ್ಯಾಕ್ಸ್?

ಇದು ಆದಾಯ ತೆರಿಗೆಯಲ್ಲಿನ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ರೀತಿಯಂಥದ್ದು. ಅಸ್ವಾಭಾವಿಕವಾಗಿ ಲಾಭ ಹೆಚ್ಚಳ ಆದಾಗ ವಿಂಡ್​ಫಾಲ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಪೆಟ್ರೋಲಿಯಂ ಸೇರಿ ಕೆಲ ಉದ್ಯಮಗಳಲ್ಲಿ ಸರ್ಕಾರ ಈ ತೆರಿಗೆ ಹಾಕುತ್ತದೆ. 2022ರಲ್ಲಿ ಮೊದಲ ಬಾರಿಗೆ ಸರ್ಕಾರ ವಿಂಡ್​ಫಾಲ್ ಟ್ಯಾಕ್ಸ್ ಜಾರಿಗೆ ತಂದಿತು. ಜಾಗತಿಕ ತೈಲ ಬೆಲೆಯಲ್ಲಿ ದಿಢೀರ್ ಏರಿಳಿತಗಳಾಗಿ ತೈಲ ಕಂಪನಿಗಳು ದೊಡ್ಡ ಲಾಭ ಗಳಿಸಿದಾಗ ಅದಕ್ಕೆ ತೆರಿಗೆ ವಿಧಿಸಲೆಂದು ಇದನ್ನು ತರಲಾಗಿತ್ತು.


ಜಾಗತಿಕ ತೈಲ ಬೆಲೆಗಳ ಅನುಸಾರವಾಗಿ ತಿಂಗಳಿಗೆ ಎರಡು ಬಾರಿ ಸರ್ಕಾರ ವಿಂಡ್​ಫಾಲ್ ಟ್ಯಾಕ್ಸ್ ಅನ್ನು ಪರಿಷ್ಕರಿಸುತ್ತದೆ. ಈಗ ಪೂರ್ಣವಾಗಿ ಟ್ಯಾಕ್ಸ್ ತೆಗೆದುಹಾಕುವ ಪ್ರಸ್ತಾಪ ಸರ್ಕಾರದ ಮುಂದಿದೆ. ತೈಲ ಸಂಸ್ಕರಣಾ ಕಂಪನಿಗಳಿಗೆ ಲಾಭದ ಮಾರ್ಜಿನ್ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿಂಡ್​ಫಾಲ್ ಟ್ಯಾಕ್ಸ್ ತೆಗೆದುಹಾಕಲು ಯೋಚಿಸಲಾಗುತ್ತಿದೆ ಎನ್ನಲಾಗಿದೆ.

ಪೆಟ್ರೋಲ್, ಡೀಸಲ್ ಬೆಲೆ ಇಳಿಕೆ ಸಾಧ್ಯತೆ
ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಸಾಕಷ್ಟು ಇಳಿಕೆ ಆಗಿರುವುದರಿಂದ ಭಾರತದಲ್ಲಿ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ರೀಟೇಲ್ ಬೆಲೆಗಳನ್ನು ಇಳಿಸಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version