Published
3 months agoon
By
Akkare Newsಪುತ್ತೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಭಾನುವಾರ ನಡೆದ ಮಾನವ ಸರಪಳಿಯಲ್ಲಿ ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾದರು.
ರಾಜ್ಯಾದ್ಯಂತ ಮಾನವ ಸರಪಳಿ ರಚಿಸಲು ಸರ್ಕಾರ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ಕಬಕದಿಂದ ಸಂಪಾಜೆವರೆಗೆ ಮಾನವ ಸರಪಳಿ ರಚಿಸಲಾಯಿತು.
ಇದರಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ರಾಜೇಶ್ ಕೆ., ಎಓಗಳಾದ ಜಯಪ್ರಕಾಶ್, ರತ್ನಾಕರ್ ನಾಯಕ್ ಎಂ, ಜೆಇ ರಂಜಿನಿ, ದುರ್ಗಾ ಸಿಂಗ್ ವರ್ಶಿಯರ್, ಗಂಗಮ್ಮಾ ವರ್ಶಿಯರ್, ಸಹಾಯಕಿ ಕವಿತಾ, ದಿನೇಶ್, ಜಗದೀಶ್, ಪೂವಪ್ಪ, ಸಂತೋಷ್ ಜಾಧವ್, ನಬಿ ಸಾಬ್, ಗೋಪಾಲ್ ಚವಾಣ್, ಗಂದಪ್ಪ ಸಿರೂರು, ಸದಾನಂದ ಮತ್ತು ರಾಕೇಶ್ ಪಾಲ್ಗೊಂಡರು.