Published
2 months agoon
By
Akkare Newsಪುತ್ತೂರು: ನ. ೨ ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರಐ ಅವರ ನೇತೃತ್ವದ ರೈಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆಯುವ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ಗ್ರಾಮದ ಪ್ರತೀಯೊಬ್ಬರೂ ಬಂದು ನಮ್ಮ ಆಶೀರ್ವಾದ ಮಾಡಬೇಕು ನಿಮ್ಮ ಆಗಮನವೇ ನಮಗೆ ದೊಡ್ಡ ಆಶೀರ್ವಾದ ಎಂದು ಟ್ರಸ್ಟ್‌ನ ಪ್ರಮುಖರಾದ ನಿಹಾಲ್ ಪಿ ಶೆಟ್ಟಿ ಹೇಳಿದರು.
ಅವರು ಕುರಿಯ ಗ್ರಾಮದಲ್ಲಿ ನಡೆದ ಅಶೋಕ ಜನ ಮನ ಕಾರ್ಯಕ್ರಮದ ಪ್ರಚಾರ ಸಭೆ ಹಾಗೂ ಆಹ್ವಾನ ಸಮಾರಂಭದಲ್ಲಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಿಗಿಂದ ಶಾಸಕರಾದ ಅಶೋಕ್ ರೈ ಅವರು ಪ್ರತೀ ವರ್ಷ ದೀಪಾವಳಿಯಂದು ವಸ್ತ್ರ ವಿತರಣೆ ಹಾಗೂ ಸಹಭೋಜನ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದಾರೆ. ಈ ಬಾರಿ ಸುಮಾರು ೭೫ ಸಾವಿರಕ್ಕೂ ಮಿಕ್ಕಿ ಮಂದಿಗೆ ವಸ್ತ್ರದಾನ ಮಾಡುತ್ತಿದ್ದಾರೆ ಈ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು , ಮಕ್ಕಳು ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಶಿವರಾಮ ಆಳ್ವ ಮಾತನಾಡಿ ಶಾಸಕರ ನೇತೃತ್ವದಲ್ಲಿ ನಡೆಯುವ ಜನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಆಹ್ವಾನ ಪತ್ರವನ್ನು ಹಂಚಲಾಯಿತು. ಈ ಸಂದರ್ಬದಲ್ಲಿ ಸನತ್ ರೈ ಕುರಿಯ, ಗ್ರಾಪಂ ಸದಸ್ಯ ಯಾಕೂಬ್ ಕುರಿಯ, ಶಿವನಾಥ ರೈ ಮೇಗಿನಗುತ್ತು, ಗ್ರಾಪಂ ಸದಸ್ಯರಾದ ನೇಮಾಕ್ಷ ಸುವರ್ಣ ಮಗಿರೆ ಸೇರಿದಂತೆ ಗ್ರಾಮಸ್ಥರು ಹಾಗೂ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.