ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಮಂಗಳೂರು ಏರ್ಪೋರ್ಟ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

Published

on

ಮಂಗಳೂರು ಏರ್ಪೋರ್ಟ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, ಇವರ ಅಳೂ ಎಲ್ಲಾ ಬರೋದೇ ಎಲೆಕ್ಷನ್ ಟೈಮ್ ನಲ್ಲಿ, ಮಿಸ್ಟರ್ ಕುಮಾರಸ್ವಾಮಿ, ಒಂದು ರಾಷ್ಟ್ರಧ್ವಜ ಹಾರಿಸೋಕೆ ನಿಮ್ಮ ಅವಧಿಯಲ್ಲಿ ರಾಮನಗರಕ್ಕೆ ಹೋಗಿಲ್ಲ, ಚೆನ್ನಪಟ್ಟಣಕ್ಕೂ ಹೋಗಿಲ್ಲ.
ಕನ್ನಡ ಬಾವುಟ ಹಾರಿಸಲು ಸಂವಿಧಾನದ ವ್ಯವಸ್ಥೆಯಲ್ಲಿ ನಿನ್ನ ರಾಮನಗರ, ಚೆನ್ನಪಟ್ಟಣದ ಜನ ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದರು. ಒಂದು ದಿನವೂ ಹೋಗಿ ನೀನು ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟಿಲ್ಲ, ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ ಎಂದರು.


ಯಾವುದಾದರೂ ಒಂದು ಗುರುತು ಮಾಡೋ ಕೆಲಸ ಚನ್ನಪಟ್ಟಣಕ್ಕೆ ಮಾಡಿರೋದನ್ನ ಪ್ಲೀಸ್ ಪಾಯಿಂಟ್ ಔಟ್ ಮಾಡು, ಕೆರೆ ಮಾಡಿದ್ದು ಯೋಗೇಶ್, ದುಡ್ಡು ಕೊಟ್ಟಿದ್ದು ನಾನು. ನೀನು ಚೀಪ್ ಮಿನಿಸ್ಟರ್ ಆಗಿದ್ದಾಗಲೇ ಮಾಡಿಲ್ಲ, ಎಂಎಲ್ ಎ ಆಗಿದ್ದಾಗ ಬಿಜೆಪಿ ಜೊತೆಗೆ ಸಂಪರ್ಕ ಇತ್ತು. ಗುರುತು ಮಾಡೋ ಏನಾದ್ರೂ ಕೆಲಸ ಮಾಡಬೇಕಿತ್ತಲ್ಲ. ಸುಮ್ಮನೆ ಓಟಿಗೋಸ್ಕರ ಬಂದು ಮಾತನಾಡೋದಲ್ಲ ಎಂದು ಕಿಡಿಕಾರಿದರು.

 

ಅಭ್ಯರ್ಥಿಗೆ ಲಾಸ್ ಏನೂ ಆಗಿಲ್ಲ, ಅಭ್ಯರ್ಥಿಗೂ ಚೆನ್ನ ಪಟ್ಟಣಕ್ಕೂ ಸಂಬಂಧ ಇಲ್ಲ. ಅವರು ಸೋತಿದ್ದು‌ ಮಂಡ್ಯ ಹಾಗೂ ರಾಮ ನಗರದಲ್ಲಿ, ನೀನು, ನಿನ್ನ ಧರ್ಮ ಪತ್ನಿ ಇದ್ದರೂ ಇಲ್ಲಿಗೆ ನೀನು ಏನು‌ ಕೊಟ್ಟೆ?. ಚನ್ನಪಟ್ಟಣಕ್ಕೆ ನೀನು ಏನು ಕೊಟ್ಟೆ ಅಂತ ಹೇಳಬೇಕು. ಯೋಗೀಶ್ಬರ್ ಪಕ್ಷಾಂತರಿ ಒಪ್ತೇನೆ, ಕಾಂಗ್ರೆಸ್, ಬಿಜೆಪಿ ಎಲ್ಲಾ ಕಡೆನೂ ಹೋದ್ರು, ಎನ್ ಡಿಎ ಸರಿ‌ ಇಲ್ಲ, ಕುಮಾರಸ್ವಾಮಿ ಸರಿ ಇಲ್ಲ ಅಂತ ಎಂಎಲ್ ಸಿ ಸ್ಥಾನ ಬಿಟ್ಟು ನಮ್ಮ ಜೊತೆ ಬಂದಿದ್ದಾರೆ.

ಅವರು ಟಿಕೆಟ್ ಕೊಡ್ತೀನಿ ಅಂತ ಹೇಳಿದ್ರೋ ಬಿಡ್ತೀನಿ ಅಂದ್ರೋ ನಂಗೆ ಗೊತ್ತಿಲ್ಲ. ನಾನಿವತ್ತು ಚನ್ನಪಟ್ಟಣ ತಾಲೂಕಿಗೆ ವಿದ್ಯಾವಂತ, ಬುದ್ದಿವಂತನ‌ ಆಯ್ಕೆ‌ ಮಾಡಿ. ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ, ನಿಮ್ಮ ಸೇವೆ ಮಾಡ್ತೀವಿ. ನೂರಾರು ಕೋಟಿ ರೂ. ಕೆಲಸ ಆಗಲೇ ಶುರು ಮಾಡಿದ್ದೇವೆ. ಸಾವಿರಾರು ಜನ ಬಡವರು ಬಂದು ಅರ್ಜಿ ಕೊಟ್ಟಿದ್ದಾರೆ, ಅವರಿಗೆ ಸ್ಪಂದಿಸ್ತೇವೆ. ಜನತಾದಳಕ್ಕೆ ಯಾವುದೇ ಭವಿಷ್ಯ ಇಲ್ಲ, ಭವಿಷ್ಯ ಇರೋ ನಾವು ಗ್ಯಾರಂಟಿಗಳನ್ನ ಕೊಡ್ತಾ ಇದೀವಿ. ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿಯಾಗಿದೆ.

ಮೋದಿ ಎಲೆಕ್ಚನ್ ಗೋಸ್ಕರ ಏನು ಬೇಕಾದರೂ ಮಾಡಲಿ. ವಿದ್ಯಾವಂತರು, ಬುದ್ದಿವಂತರು ಇದಾರೆ, ಮತ ಹಾಕಿ ಜ‌ನ ಗೆಲ್ಲಿಸ್ತಾರೆ. ನಾವು ಬಸ್ ನಲ್ಲಿ ಟಿಕೆಟ್ ತೆಗೋತಿವಿ ಅಂತ. ಕೆಲವರು ಹೇಳಿದ್ರು, ಅದನ್ನ ನಾನು ಚರ್ಚೆ ಮಾಡೋಣ ಅಂತ ಅಷ್ಟೇ ಹೇಳಿದ್ದೆ, ಶಕ್ತಿ ಯೋಜನೆ ನಾವು ಮಂಗಳೂರಿನಲ್ಲೇ ರಾಹುಲ್ ಗಾಂಧಿ ಘೋಷಣೆ ಮಾಡಿದ್ದು, ಯಾವ ಯೋಜನೆಯನ್ನೂ ನಾವು ಮುಂದಿನ ಐದು ವರ್ಷಕ್ಕೂ ನಿಲ್ಲಿಸಲ್ಲ. ಇವತ್ತು ವೃದ್ಧಾಪ್ಯ ವೇತನ, ವಿಧವಾ ವೇತನ ಎಲ್ಲನೂ ಕೊಡ್ರಾ ಇದೀವಿ. ಯಾವುದಾದರೂ ಒಂದು ಕಾರ್ಯಕ್ರಮ ಬಿಜೆಪಿ ಅಧಿಕಾರ ಇದ್ದಾಗಲೂ ನಿಲ್ಲಿಸಲು ಆಗಿಲ್ಲ. ನಾವು ಬದುಕಿನ ಬಗ್ಗೆ ಕೊಡೊ ಕಾರ್ಯಕ್ರಮ, ಬಿಜೆಪಿಯದ್ದು ಭಾವನೆ ಬಗ್ಗೆ ಕೊಡೋ ಕಾರ್ಯಕ್ರಮ. ಮೋದಿಯವರಿಗೆ ಗ್ಯಾರಂಟಿ ಯೋಜನೆ ನೋಡಿ ಹೀಗಾಗಿದೆ ಎಂದರು.

 

ನಮ್ಮ ಯೋಜನೆಯನ್ನು ‌ಬಿಜೆಪಿ ಆಡಳಿತದಲ್ಲೂ ತರ್ತಾ ಇದಾರೆ, ಮಧ್ಯಪ್ರದೇಶ, ಹರ್ಯಾಣ, ಮಹಾರಾಷ್ಟ್ರದಲ್ಲೂ ಆರಂಭ ಮಾಡಿದ್ದಾರೆ. ನಮ್ಮನ್ನ ಕಾಪಿ‌ ಮಾಡೋದು ಮೋದಿಯವರಿಗೆ ಮುಜುಗರ ಆಗ್ತಿದೆ. ನಮ್ಮ‌ ಆರ್ಥಿಕ ಬಲ ದೇಶದ ಆರ್ಥಿಕ ಬಲಕ್ಕಿಂತಲೂ ಗಟ್ಟಿಯಾಗಿದೆ. ಯತ್ನಾಳ್ ಒಬ್ಬ ಮೆಂಟಲ್ ಗಿರಾಕಿ, ಅವರ ಬಗ್ಗೆ ಮಾತನಾಡಲ್ಲ, ವಕ್ಫ್ ನೊಟೀಸ್ ಕೊಟ್ಟಿದ್ದು ಬಿಜೆಪಿ ಸರ್ಕಾರ, ಬಿಜೆಪಿ ಸರ್ಕಾರ. ನಾವು ರೈತರ ಜಮೀನು ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲ, ಅಧಿಕಾರಿ ತಪ್ಪು ಮಾಡಿದ್ರೆ ನಾವು ಕ್ರಮ ಕೈಗೊಳ್ತೇವೆ ಎಂದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version