ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಿಂದ ಸಚಿವ ಸಂಪುಟ ಭರ್ಜರಿ ಸರ್ಜರಿ.. ಅಸಮರ್ಥರು ಔಟ್..ಹೊಸಬರ ಎಂಟ್ರಿ

Published

on

ಹರಿಪ್ರಸಾದ್, ಸವದಿಗೆ ಅದೃಷ್ಟ ಖುಲಾಯಿಸುತ್ತಾ..?

ಉಪಸಮರ ನಡೆದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಸೇರಿದಂತೆ ಪಕ್ಷದ ನಾಯಕರು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ಸಂಪುಟ ವಿಸ್ತರಿಸುವ ಮನಸ್ಸಿದ್ದರೂ ಮುಡಾ ನಿವೇಶನ ಹಂಚಿಕೆ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ವಕ್ಫ್ ಆಸ್ತಿ ವಿವಾದದಂತಹ ಹಲವು ಕಾರಣಗಳಿಂದ ಆ ಸಾಹಸಕ್ಕೆ ಸದ್ಯ ಕೈಹಾಕುವುದೇ ಬೇಡ ಎಂಬ ನಿಲುವಿಗೆ ಸಿಎಂ-ಡಿಸಿಎಂ ಬಂದಿದ್ದರು. ಆದರೆ ಉಪಚುನಾವಣೆ ಫ‌ಲಿತಾಂಶವು ಸರಕಾರದ ಆತ್ಮವಿಶ್ವಾಸ ಹೆಚ್ಚಿಸಿದೆ. ಜತೆಗೆ ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ರೆಕ್ಕೆಪುಕ್ಕವೂ ಬಂದಿದೆ.

ಡಿಸೆಂಬರ್‌ ಮಧ್ಯಭಾಗದಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಜನವರಿಯಲ್ಲಿ ಮತ್ತೆ ಜಂಟಿ ಅಧಿವೇಶನ ಆರಂಭವಾಗಲಿದೆ. ತದನಂತರ ಬಜೆಟ್‌ ಸಿದ್ಧತೆಗಳು ಆರಂಭವಾಗುತ್ತವೆ. ಅದು ಮುಗಿಯುತ್ತಿದ್ದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೈಹಾಕುವ ಆಲೋಚನೆ ಇದೆ. ಹಾಗಾಗಿ ಈಗ ತಪ್ಪಿದರೆ ಇನ್ನು 4 ತಿಂಗಳು ಇದು ಸಾಧ್ಯವಾಗುವುದಿಲ್ಲ. ಆದ್ದರಿಂದ ಚಳಿಗಾಲದ ಅಧಿವೇಶನಕ್ಕೆ ಮುನ್ನ ಅಥವಾ ಕೊನೆಯ ಪಕ್ಷ ಹೊಸ ವರ್ಷದ ಆರಂಭದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಕೈಹಾಕುವ ಚಿಂತನೆ ಇದ್ದು, ಈ ಸಂಬಂಧ ಹೈಕಮಾಂಡ್‌ಗೆ ರಾಜ್ಯ ನಾಯಕರು ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಬಿ.ಕೆ. ಹರಿಪ್ರಸಾದ್‌, ಬಿ. ನಾಗೇಂದ್ರ ಮುಂಚೂಣಿಯಲ್ಲಿದ್ದಾರೆ. ಶಾಸಕರಾದ ನರೇಂದ್ರಸ್ವಾಮಿ, ವಿನಯ ಕುಲಕರ್ಣಿ, ಲಕ್ಷ್ಮಣ ಸವದಿ, ಆನೇಕಲ್‌ ಶಿವಣ್ಣ, ರುದ್ರಪ್ಪ ಲಮಾಣಿ, ಬಿ.ಕೆ.ಸಂಗಮೇಶ್ವರ ಅವರ ಜತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌, ಸಿಎಂ ಹಣಕಾಸು ಸಲಹೆಗಾರ ಬಸವರಾಜ ರಾಯರೆಡ್ಡಿ ಸಹಿತ ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ವಿವಿಧ ಮಾನದಂಡಗಳ ಆಧಾರದಲ್ಲಿ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ.
ಹೊಸ ಸೇರ್ಪಡೆಗಾಗಿ ಕೆಲವರನ್ನು ಸಂಪುಟದಿಂದ ಕೈಬಿಡುವ ಆಲೋಚನೆಯೂ ಇದೆ. ಈ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ.

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version