ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಸಹಕಾರಿ ಸಂಘಗಳ ಚುನಾವಣೆ ; ಕಾಂಗ್ರೆಸ್ ನಿಂದ ಪೂರ್ವಭಾವಿ ಸಭೆ ಕೃಷಿಕರಿಗೆ ಬೆಳೆ ವಿಮೆ ನೀಡಿದ್ದು ಕಾಂಗ್ರೆಸ್ ಸರಕಾರ,ರೈತರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ಇದೆ: ಅಶೋಕ್ ರೈ

Published

on

ಪುತ್ತೂರು: ಅಡಿಕೆ ,ಕಾಳುಮೆಣಸು ಕೃಷಿಕರಿಗೆ ಬೆಳೆ ವಿಮೆ ನೀಡಿದ್ದು ರಾಜ್ಯದ ಕಾಂಗ್ರೆಸ್ ಸರಕಾರ ಕೇಂದ್ರದ್ದು ಕೇವಲ 20% ಮಾತ್ರ ಸಹಾಯಧನ. ಕೃಷಿಕರಿಗೆ ನೆರವು ನೀಡುತ್ತಿರುವ ಕಾಂಗ್ರೆಸ್ ಗೆ ಸಹಕಾರಿ ಸಂಘದ ಚಿನಾವಣೆಯಲ್ಲಿ‌ ಬೆಂಬಲ ನೀಡುತ್ತಾರೆ ಎಂಬ ಪೂರ್ಣ ವಿಶ್ವಾಸ ಇದೆ ಎಂದುಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು‌ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಹಕಾರಿ ಸಂಘಗಳ ಚುನಾವಣೆ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ‌ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಕೃಷಿಕರು‌ಸೇರಿದಂತೆ ಎಲ್ಲಾ ವರ್ಗಕ್ಕೂ ನೆರವು ನೀಡುತ್ತಿದೆ. ಗ್ಯಾರಂಟಿ ಯೋಜನೆಯೂ ಎಲ್ಲರ ಮನೆಯನ್ನು ಬೆಳಗಿಸಿದೆ. ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿದೆ ಮುಂದೆಯೂ ಉಳಿಸಲಿದೆ. ಕಾಂಗ್ರೆಸ್ ಸರಕಾರದ ಮೇಲೆ ವಿಶ್ವಾಸ ಇಡುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕೊಟ್ಟದ್ದು ಕಾಂಗ್ರೆಸ್
ಬೋರ್ಡು ಬಿಜೆಪಿಯದ್ದು..!
ಬೆಳೆ ವಿಮೆ ಕೊಟ್ಟದ್ದು ರಾಜ್ಯದ ಕಾಂಗ್ರೆಸ್ ಸರಕಾರ ಆದರೆ ಕೆಲವೊಂದು ಸಹಕಾರಿ ಸಂಘದಲ್ಲಿ ಬಿಜೆಪಿಯವರು ತಮ್ಮ ಪಕ್ಷದ ಯೋಜನೆ ಎಂದು ಸುಳ್ಳು ಬೋರ್ಡು ಹಾಕುತ್ತಿದ್ದಾರೆ. ಕೇಂದ್ರ ಸರಕಾರ ಕೊಟ್ಟಿದ್ದೇ ಆದರೆ ಪಕ್ಕದ ಕೇರಳದಲ್ಲಿ ಯಾಕೆ ಇಲ್ಲ ಎಂಬುದನ್ನು ಕೃಷಿಕರು‌ಪ್ರಶ್ನಿಸಬೇಕು. ಈ ವಿಚಾರದಲ್ಲಿ ಜನರನ್ನು ಬಿಜೆಪಿ‌ಮೋಸ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.

 

ಮನೆ‌ಮನೆಗೂ ತೆರಳಿ ಮಾಹಿತಿ ನೀಡಿ:
ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಪ್ರತೀ ಮನೆ‌ಮನೆಗೂ ತಿಳಿಸಬೇಕು. ಕೃಷಿಕರ ಜೀವನ ಹಸನಾಗಿಸಿದ್ದು ಕಾಂಗ್ರೆಸ್ ಸರಕಾರವಾಗಿದೆ ಎಂದು ಹೇಳಬೇಕು.‌ರಾಜ್ಯದಲ್ಲಿ ಕಾಂಗ್ರೆಸ್ ಹೆಮ್ಮರವಾಗಿ ಬೆಳೆಯುತ್ತಿದೆ. ಉಪ ಚುನಾವಣೆ,ಗ್ರಾಪಂ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿದೆ ಆದೇ ರೀತಿ ಸಹಕಾರಿ ಸಂಘದ ಚುನಾವಣೆಯಲ್ಲೂ ನಾವು ಗೆಲುವು ಸಾಧಿಸುತ್ತೇವೆ ಎಂಬ ಸಂಕಲ್ಪದೊಂದಿಗೆ ನಾವು ಗ್ರಾಮ ಗ್ರಾಮಕ್ಕೆ ಭೇಟಿ‌ನೀಡಿ ಎಂದು ಶಾಸಕರು ಸಲಹೆ‌ನೀಡಿದರು

 

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಡಿ, ಸಹಕಾರಿ‌ಸಂಘಗಳ ಘಟಕದ ಜಿಲ್ಲಾಧ್ಯಕ್ಷ ಸುದರ್ಶನ್ ಜೈನ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ, ಪ್ರಸಾದ್ ಕೌಶಲ್ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಪಂಜಿಗುಡ್ಡೆ ಈಶ್ವರಭಟ್, ಪ್ರವೀಣ್ ಚಂದ್ರ ಆಲ್ವ, ಜೋಕಿಂ ಡಿಸೋಜಾ, ಮಹಮ್ಮದಾಲಿ,ರಾಜಶೇಖರ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ ಸ್ವಾಗತಿಸಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಕಾರ್ಯಕ್ರಮ‌ನಿರೂಪಿಸಿ ,ವಕ್ತಾರೆ ಚಂದ್ರಾವತಿ ವಂದಿಸಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version