ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಕೋಡಿಂಬಾಡಿಗೆ ಅನುದಾನ ನೀಡುವುದು ನನ್ನ ಮೊದಲ ಕರ್ತವ್ಯ : ನಾನು ಶಾಸಕ, ಬಳಸಿಕೊಳ್ಳುವುದು ನಿಮ್ಮ ಚಾಣಕ್ಯ : ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು: ಕೋಡಿಂಬಾಡಿ ನನ್ನ ತವರು ಗ್ರಾಮ, ನಾನು ಶಾಸಕನಾಗಿ ಆಯ್ಕೆಯಾಗಲು ಇಲ್ಲಿನ ಜನತೆಯ ಸಹಕಾರವಿತ್ತು, ಇಲ್ಲಿನ ಜನತೆಯನ್ನು ನಾನು ಅಪಾರವಾಗಿ ಪ್ರೀತಿಸುತ್ತೇನೆ ಈ ಕಾರಣಕ್ಕೆ ಗ್ರಾಮದ ಅಭಿವೃದ್ದಿಗೂ ಶಾಸಕನೆಂಬ ನೆಲೆಯಲ್ಲಿ ಹೆಚ್ಚಿನ ಅನುದಾನ ನೀಡುವುದು ನನ್ನ ಕರ್ತವ್ಯವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

 

ಅವರು ಕೋಡಿಂಬಾಡಿ ಗ್ರಾಮ ಪಂಚಾಯತ್‌ನ ನೂತನ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸುಮಾರು 30 ಲಕ್ಷ.ರೂ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದ್ದು ಅನುದಾನ ಕಡಿಮೆಯಾದಲ್ಲಿ ಇನ್ನೂ ನೀಡುವುದಾಗಿ ಶಾಸಕರು ಭರವಸೆ ನೀಡಿದರು.

ನಿರ್ಮಾಣವಾಗಲಿರುವ ಹೊಸ ಕಚೇರಿ ಕಟ್ಟಡದ ಕಾಮಗಾರಿ ಸಂಪೂರ್ಣವಾಗಿಸಬೇಕು. ಅನುದಾನ ಎಷ್ಟು ಬೇಕೋ ಅಷ್ಟು ಕೊಡಲು ನಾನು ಈ ಗ್ರಾಮದ ಪ್ರಜೆಯಾಗಿ,ಶಾಸಕನಾಗಿ ನೀಡಲು ಸಿದ್ದನಿದ್ದೇನೆ ಎಂದು ಹೇಳಿದರು.

ಕೋಡಿಂಬಾಡಿಗೆ ಅನುದಾನ ನೀಡುವುದು ನನ್ನ ಮೊದಲ ಕರ್ತವ್ಯ : ನಾನು ಶಾಸಕ, ಬಳಸಿಕೊಳ್ಳುವುದು ನಿಮ್ಮ ಚಾಣಕ್ಯ : 

ಕೋಡಿಂಬಾಡಿ ಗ್ರಾಮದ ಜನತೆ ಕಳೆದ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದಾರೆ. ಮುಂದೆಯೂ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ವಿಶ್ವಾಶವಿದೆ. ನನ್ನ ಗ್ರಾಮವನ್ನು ನಾನು ಎಂದಿಗೂ ಕಡೆಗಣಿಸಲಾರೆ. ಗ್ರಾಮದ ಅಭಿವೃದ್ದಿಗೆ ನನ್ನಿಂದ ಏನೆಲ್ಲಾ ಸಹಾಯ ಬೇಕೋ ಅದೆಲ್ಲವನ್ನೂ ನಾನು ಖಂಡಿತವಾಗಿಯೂ ನೀಡುತ್ತೇನೆ. ಶಾಸಕರಾದವರು ತಮ್ಮ ಸ್ವ ಗ್ರಾಮಕ್ಕೆ ಹೆಚ್ಚು ಅನುದಾನ ನೀಡುವುದು ತಪ್ಪಾಗಲಾರದು.ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ ನನ್ನನ್ನು ಬಳಸಿಕೊಳ್ಳುವುದು ನಿಮ್ಮ ಚಾಣಕ್ಯ .ಎಲ್ಲೆಲ್ಲಿ ಏನೆಲ್ಲಾ ಸಮಸ್ಯೆಗಳಿದೆಯೋ ಅದೆಲ್ಲವನ್ನೂ ಪರಿಹಾರ ಮಾಡಿಸಿ ಶಾಸಕರ ಗ್ರಾಮವನ್ನು ತಾಲೂಕಿನಲ್ಲಿ ಅತ್ಯತ್ತಮ ಗ್ರಾಮವನ್ನಾಗಿ ಮಾಡುವಲ್ಲಿ ಶ್ರಮವಹಿಸಲಿದ್ದೇನೆ ಇದಕ್ಕೆ ಗ್ರಾಮಸ್ಥರ ಎಲ್ಲರ ಸಹಕಾರ ಅತೀ ಅಗತ್ಯವಾಗಿದೆ. ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಅವರ ಕನಸಿನ ಕಚೇರಿ ಇಲ್ಲಿ ನಿರ್ಮಾಣವಾಗಲಿದೆ. ಗ್ರಾ.ಪಂ ಆಡಳಿತ ಉತ್ತಮವಾಗಿ , ಮಾದರಿಯಾಗಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ. ಇದಕ್ಕಾಗಿ ಎಲ್ಲಾ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾ.ಪಂ ಸಿಬ್ಬಂದಿಗಳನ್ನು ಅಭಿನಂದಿಸುವುದಾಗಿ ಶಾಸಕರು ಹೇಳಿದರು.

 

ಕಚೇರಿಯ ಬೇಡಿಕೆ ಇತ್ತು: ಜಯಪ್ರಕಾಶ್ ಬದಿನಾರ್
ಕೋಡಿಂಬಾಡಿ ಶಾಸಕರ ತವರು ಗ್ರಾಮವಾಗಿದೆ. ಇಲ್ಲಿ ಯಾವುದೇ ಕೊರತೆ ಇರಬಾರದು ಎಂಬುದು ನಮ್ಮ ಉದ್ದೇಶ. ಗ್ರಾ.ಪಂಗೆ ಕಚೇರಿ ಕಟ್ಟಡ ನಿರ್ಮಾಣವಾಗಬೇಕೆಂಬುದು ನೂತನ ಆಡಳಿತದ ಕನಸಾಗಿತ್ತು ಅದು ಶಾಸಕರ ಮೂಲಕ ನನಸಾಗಿದೆ. ಗ್ರಾಮದ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಅನುದಾನ ಶಾಸಕರು ನೀಡುತ್ತಾರೆ ಎಂಬ ಪೂರ್ಣ ವಿಶ್ವಾಸ ನಮಗಿದೆ. ಗ್ರಾಮಸ್ಥರು ಕೂಡಾ ಶಾಸಕರ ಕೈ ಬಲಪಡಿಸುವ ಕೆಲಸವನ್ನು ಮಾಡಬೇಕು. ಪಕ್ಷಾತೀತವಾಗಿ ಗ್ರಾಮಸ್ಥರು ಗ್ರಾಮದ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷದಾದ ಮಲ್ಲಿಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರಾಮಾಭಿವೃದ್ಧಿ ಅಧಿಕಾರಿ ವಿಲ್ಫ್ರೀಡ್ ಗೊನ್ಸಲೀಸ್ ಪಂ ಸದಸ್ಯರಾದ ರಾಮಣ್ಣ ಗೌಡ, ಉಷಾ, ಪುಷ್ಪ, ಜಗನ್ನಾಥ ಶೆಟ್ಟಿ ನಡುಮನೆ, ಮೋನಪ್ಪ ಗೌಡ ಪಮ್ಮನಮಜಲು ,ಹಿಂದುಳಿದ ವರ್ಗಗಳ ಇಲಾಖೆಯ ಗಣೇಶ್ ಉಪಸ್ಥಿತರಿದ್ದರು.

 

 

ಗ್ರಾ.ಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಸ್ವಾಗತಿಸಿದರು. ಪಿಡಿಒ ವಿಲ್ಪ್ರೆಡ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಡಿಂಬಾಡಿ ದೇವಸ್ಥಾನದ ಅರ್ಚಕರಾದ ರಾಮಕೃಷ್ಣ ಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು. ಸಿಬ್ಬಂದಿಗಳಾದ ಸುರೇಶ್, ರಿತಾ, ಕಾವ್ಯ, ಸುರೇಶ್ ನಾಯ್ಕ, ಗ್ರಂಥಾಲಯ ಸಹಾಯಕಿ ಕುಸುಮ, ಕಾರ್ಯದರ್ಶಿ ಅಣ್ಣು, ಆಶಾ ಕಾರ್ಯರ್ತೆಯರು ವಿವಿಧ ಕಾರ್ಯಕ್ರಮ ನಿರೂಪಿಸಿದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version