ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮಂಗಳೂರು: ಹೆಲಿಕಾಪ್ಟರ್‌ನಲ್ಲಿ ಕರಾವಳಿ ದರ್ಶನ

Published

on

ಕರಾವಳಿ ಉತ್ಸವದ ವೇಳೆ ಹೆಲಿಕಾಪ್ಟರ್‌ನಲ್ಲಿ ಕರಾವಳಿಯ ಸೊಬಗನ್ನು ಸವಿಯುವ ವ್ಯವಸ್ಥೆ ಏರ್ಪಡಿಸಲಾಗಿದೆ
ಡಿ.21ರಿಂದ 29ರವರೆಗೆ ನಗರದ ಮೇರಿಹಿಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಟ್ರಿಪ್‍ನಲ್ಲಿ 6 ಜನರಿಗೆ ಸಂಚರಿಸಲು ಅವಕಾಶವಿದ್ದು ₹4,500 ದರ ನಿಗದಿಪಡಿಸಲಾಗಿದೆ.

 

ಆಸಕ್ತರು ಮಾಹಿತಿಗೆ 9400399999, 7483432752 ಈ ಮೊಬೈಲ್ ಫೋನ್ ಸಂಖ್ಯೆ ಸಂಪರ್ಕಿಸಬಹುದು.
ಗುಜರಿ ವಾಹನ ತೆರವಿಗೆ ಸೂಚನೆ
ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ, ಪುಟ್‍ಪಾತ್, ರಸ್ತೆ ಬದಿಗಳಲ್ಲಿ ಹಳೆಯದಾದ ನಿರುಪಯುಕ್ತ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ.
ಈ ಸಮಸ್ಯೆ ಬಗೆಹರಿಸಲು ಪಾಲಿಕೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. 15 ದಿನಗಳೊಳಗೆ ಹಳೆ ವಾಹನಗಳ ಮೇಲೆ ನೋಟಿಸ್ ಅಂಟಿಸಲು ಕ್ರಮ ಕೈಗೊಳ್ಳಲಾಗುತ್ತದೆ. ವಾಹನಗಳ ಮಾಲೀಕರು ತೆರವುಗೊಳಿಸದಿದ್ದರೆ ವಾರಸುದಾರರಹಿತ ವಾಹನ ಎಂದು ಪರಿಗಣಿಸಿ, ಪಾಲಿಕೆ ವತಿಯಿಂದ ತೆರವು ಕಾರ್ಯ ನಡೆಸಿ, ನಿಯಮಾನುಸಾರ ಹರಾಜು ಮಾಡಲಾಗುವುದು. ವಾಹನ ಸ್ಥಳಾಂತರಿಸುವಾಗ ವಾಹನಗಳಿಗೆ ಹಾನಿಯಾದಲ್ಲಿ ಪಾಲಿಕೆಯು ಹೊಣೆಯಾಗುವುದಿಲ್ಲ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version