Published
1 day agoon
By
Akkare Newsಪುತ್ತೂರು: ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ ನಲ್ಲಿ ಡಿ.23 ರಿಂದ ಜ.26 ರ ವರೆಗೆ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಗ್ಲೋ ಫೆಸ್ಟ್ ಅಯೋಜಿಸಲಾಗಿದೆ.
ಸಮಾರಂಭವನ್ನು ಗಣೇಶ್ ಟ್ರೇಡರ್‍ಸ್ ಮಾಲಕ ವಾಮನ ಪೈ ಅವರ ಪತ್ನಿ ಅನುರಾಧ ವಾಮನ ಪೈ, ದಕ್ಷ ಕನ್ಸಲ್ಟೇನ್ಸಿ ಮಾಲಕ ಉಷಾ ರವೀಂದ್ರ, ಸ್ನೇಹಾ ಟೆಕ್ಸ್‌ಟೈಲ್ಸ್‌ನ ಮಾಲಕ ಸತೀಶ್ ಅವರ ಪತ್ನಿ ಹರಿಣಿ ಸತೀಶ್ ಹಾಗೂ ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ವಿಜಯ ಸರಸ್ವತಿ ನೇರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಎಲ್.ಆಚಾರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ, ಲಕ್ಮೀಕಾಂತ್ ಅಚಾರ್ಯ, ವೇದ ಲಕ್ಮೀಕಾಂತ್ ಅಚಾರ್ಯ, ಸುಧನ್ವ ಆಚಾರ್ಯ ಮತ್ತು ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಕೀರ್ತನ್, ಶೋ ರೂಂ ಮ್ಯಾನೇಜರ್ ಪುರಂದರ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಭಾರ್ಗವ್ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.