ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ನೆಕ್ಕಿಲಾಡಿ ವಲಯ ಕಾಂಗ್ರೆಸ್ ಸಭೆ: ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಬೇಕು: ಶಾಸಕ ಅಶೋಕ್ ರೈ

Published

on

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ನೆಮ್ಮದಿ ದಿನದಿಂದ ದಿನಕ್ಕೆ ಹೆಚ್ಷುತ್ತಲೇ ಇದ್ದು , ಜನ ಕಾಂಗ್ರೆಸ್ ಕಡೆ ಒಲವು ತೋರುತ್ತಿದ್ದು ಇದು ಬಡವರ ಪರ ಕಾಂಗ್ರೆಸ್ ಸರಕಾರವನ್ನು ಜನ ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.



ಅವರು ನೆಕ್ಕಿಲಾಡಿಯಲ್ಲಿ ನಡೆದ ನೆಕ್ಕಿಲಾಡಿ ವಲಯ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದರು.
ಪುತ್ತೂರು ದಿನದಿಂದ ದಿನಕ್ಕೆ ಅಭಿವೃದ್ದಿಯಾಗುತ್ತಿದೆ. ಕುಡಿಯುವ ನೀರು, ರಸ್ತೆ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ದಿ ಕೆಲಸ ನಡೆಯುತ್ತಿದೆ ಇದನ್ನು ಕಂಡು ವಿರೋಧ ಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ ಈ ಕಾರಣಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕಿವಿಗೊಡಬೇಡಿ ಎಂದು ಹೇಳಿದರು.

 

ಬೆರಳ ತುದಿಗೆ ನಿಮ್ಮ ಭೂ ದಾಖಲೆಗಳು:
ಮುಂದಿನ ಒಂದೂವರೆ ವರ್ಷದ ಅವಧಿಯೊಳಗೆ ನಿಮ್ಮ ಎಲ್ಲಾ ಕಂದಾಯ ಇಲಾಖೆಗೆ ಸಂಬಂದಿಸಿದ ದಾಖಲೆಗಳು ನಿಮ್ಮ ಮೊಬೈಲ್ ಮೂಲಕವೇ ಒಡೆದುಕೊಳ್ಳಬಹುದು ಇನ್ನು ಭೂ ದಾಖಲೆ ಪಡೆಯಲು ತಾಲೂಕು ಕಚೇರಿ ಅಲೆದಾಡಬೇಕಾಗಿಲ್ಲ ಇದು ಕಾಂಗ್ರೆಸ್ ಸರಕಾರದ ಸಾಧನೆಯಾಗಿದೆ ಎಂದು ಶಾಸಕರು ಹೇಳಿದರು.

 

ಪಂಚ ಗ್ಯಾರಂಟಿ ಮನೆ ಬೆಳಗಿಸಿದೆ:
ಸರಕಾರದ ಪಂಚ ಗ್ಯಾರಂಟಿ ಯೋಜನೆ ಪ್ರತೀ ಮನೆಯನ್ನು ಬೆಳಗಿಸಿದೆ. ಉಚಿತ ಕರೆಂಟ್, ಮಾಸಿಕ 2000, ಅಕ್ಕಿ ಹಣ, ಉಚಿತ ಬಸ್ ನಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ,ಕುಟುಂಬಕ್ಕೆ ಶಕ್ತಿ ತುಂಬಿದೆ ಈ ವಿಚಾರವನ್ನು ಪ್ರತೀ ಮನೆ ಮನೆಗೂ ಕಾರ್ಯಕರ್ತರು ತಿಳಿಸಬೇಕು ಎಂದು ಹೇಳಿದರು.

 

ಒಂದು ಗೋಣಿ ಸಿಮೆಂಟ್ ಕೆಲಸ ಆಗಿಲ್ಲ ಎಂದವರಿಗೆ ಉತ್ತರ ಕೊಡಿ:
ಪುತ್ತೂರಿನಲ್ಲಿ ಒಂದು ಗೋಣಿ ಸಿಮೆಂಟ್ ಕೆಲಸ ಆಗಿಲ್ಲ ಎಂದು ಕೆಲ ದಿನಗಳ ಹಿಂದೆ ಒಬ್ರು ಹೇಳಿದ್ರು ಅವರಿಗೆ ಕಾರ್ಯಕರ್ತರೇ ಉತ್ತರ ಕೊಡಬೇಕು. ಪುತ್ತೂರಿನಲ್ಲಿ ಕೋಟಿ ಕೋಟಿ ಅನುದಾನ ಬರುತ್ತಿದೆ. ಹಿಂದೆಂದೂ ಬಾರದಷ್ಟು ಸಿಮೆಂಟ್ ಪುತ್ತೂರಿಗೆ ಬರುತ್ತಿದೆ ಎಂದು ಗೋಣಿ ಚೀಲದ ಬಗ್ಗೆ ಹೇಳಿದವರಿಗೆ ಉತ್ತರ ಕೊಡಬೇಕು ಎಂದು ಹೇಳಿದರು.

 

ವೇದಿಕೆಯಲ್ಲಿ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿಮಿನೇಜಸ್, ಪಕ್ಷದ ಪ್ರಮುಖರಾದ ಡಾ.ರಘು, ಮುರಳೀಧರ್ ರೈ ಮಟಂತಬೆಟ್ಟು,ಭೂ‌ನ್ಯಾಯಮಂಡಳಿ ಸದಸ್ಯ ಯುನಿಕ್ ಅಬ್ದುಲ್ ರಹಿಮಾನ್,ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ,ನಿರಂಜನ್ ರೈ ಮಠಂತಬೆಟ್ಟು, ಜಿಲ್ಲಾ ಕಾಂಗ್ರೆಸ್ ಅಲ್ಪ‌ಸಂಖ್ಯಾತ ಘಟಕದ ಪ್ರ.ಕಾರ್ಯದರ್ಶಿ ನಝೀರ್ ಮಠ ಮೊದಲಾದವರು ಉಪಸ್ಥಿತರಿದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version