Published
4 hours agoon
By
Akkare Newsಪುತ್ತೂರು:ಆಟೋ ಚಾಲಕರು ಮತ್ತು ಸ್ವಚ್ಚತಾ ಕಾರ್ಮಿಕರು ಸಮಾಜದ ಎರಡು ಕಣ್ಣುಗಳಿದ್ದಂತೆ ಅವರು ಇಲ್ಲದೇ ಇರುವ ಅದು ಪರಿಪೂರ್ಣತೆಯನ್ನು ಹೊಂದಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ಶಾಸಕರ ಅನುದಾನದಿಂದ ನಿರ್ಮಾಣವಾದ ನೂತನ ರಿಕ್ಷಾ ತಂಗುದಾನವನ್ನು ಉದ್ಘಾಟಿಸಿ ಮಾತನಾಡಿದರು.
ಆಟೋ ಚಾಲಕರು ಸಂಕಷ್ಟದಲ್ಲಿ ನೆರವಿಗೆ ದಾವಿಸುವ ಆಪತ್ಬಾಂದವರಾದರೆ ಸ್ವಚ್ಚತಾ ಕಾರ್ಮಿಕರು ಜನರ ಆರೋಗ್ಯ ಕಾಪಾಡುವ ರಕ್ಷಕರು ಈ ಕಾರಣಕ್ಕೆ ಇವರನ್ನು ಸಮಾಜ ಯಾವತ್ತೂ ಅಗೌರವದಿಂದ ಕಾಣಬಾರದು. ಬೆಳಿಗ್ಗೆಯಿಂದ ರಾತ್ರಿ ತನಕ ತನ್ನ ಕುಟುಂಬವನ್ನು ಸಲಹುವ ಉದ್ದೇಶದಿಂದ ಬಿಸಿಲು ಮಳಗೆ ದುಡಿಯುತ್ತಿರುವ ಆಟೋ ಚಾಲಕರಿಗೆ ನೆರಳಿಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯ ಇದ್ದ ಕಡೆ ತಂಗುದಾನ ನಿರ್ಮಾಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಟೋ ಚಾಲಕರಿಗೆ ತಂಗುದಾನದ ಬಳಿ ಶೌಚಾಲಯವನ್ನು ನಿರ್ಮಾಣ ಮಾಡುವ ಉದ್ದೇಶವಿರುವುದಾಗಿ ಶಾಸಕರು ಹೇಳಿದರು.
ರಿಕ್ಷಾ ಚಾಲಕರು ಕಚೇರಿಗೆ ಬನ್ನಿ
ವಿಧಾನಸಭಾ ಕ್ಷೇತ್ರದ ಪ್ರತೀಯೊಬ್ಬ ರಿಕ್ಷಾ ಚಾಲಕರೂ ತನ್ನ ಕಚೇರಿಗೆ ಬಂದು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬೇಕು. ಶಾಸಕರ ಕಚೇರಿಯಲ್ಲಿ ಆಟೋ ಚಾಲಕರಿಗಾಗಿ ಉಚಿತ ಸೇವೆಯನ್ನು ಮಾಡಲಿದ್ದೇವೆ. ಕರ್ನಾಟಕದ ಕಾಂಗ್ರೆಸ್ ಸರಕಾರ ರಿಕ್ಷಾ ಚಾಲಕರನ್ನು ಕಾರ್ಮಿಕ ಇಲಾಖಾ ವ್ಯಾಪ್ತಿಗೊಳಪಡಿಸಿದ್ದರಿಂದ ಮುಂದಿನ ದಿನಗಳಲ್ಲಿ ಚಾಲಕರಿಗೆ ಸರಕಾರದಿಂದ ವಿವಿಧ ಸವಲತ್ತುಗಳೂ ದೊರೆಯಲಿದೆ ಎಂದು ಹೇಳಿದ ಶಾಸಕರು ಯಾರೊಬ್ಬರನ್ನೂ ಬಿಡದೆ ನನ್ನ ಕಚೇರಿಗೆ ಬಂದು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಕ್ಷೇತ್ರದ ಜನತೆಗೆ 1500 ನಿವೇಶನ ನೀಡುವೆ
ತನ್ನ ಕ್ಷೇತ್ರದಲ್ಲಿ ಕರೆಂಟ್ , ಮನೆ ಮತ್ತು ನಿವೇಶನವಿಲ್ಲದೆ ಯಾರೂ ಇರಬಾರದು. ಹೊಟ್ಟೆ ತುಂಬಾ ಊಟ ಮಾಡಿ ಮಲಗುವ ವಾತಾವರಣ ಸೃಷ್ಟಿಯಾಗಬೇಕು. ಜಾಗವೇ ಇಲ್ಲದವರನ್ನು ಗುರುತಿಸಿ ಅಂತವರಿಗೆ ಶೀಘ್ರದಲ್ಲೇ ಮನೆ ನಿವೇಶನವನ್ನು ನೀಡುತ್ತೇವೆ. ಈಗಾಗಲೇ ಎಂಟು ಗ್ರಾಮಗಳಲ್ಲಿ ನಿವೇಶನಕ್ಕ ಜಾಗಗುರುತಿಸಲಾಗಿದೆ, ನಿವೇಶನವಿಲ್ಲದವರು ಶಾಸಕರ ಕಚೇರಿಗೆ ಬಂದು ಮಾಹಿತಿ ಪಡೆದುಕೊಂಡು ಆಯಾ ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಾಸಕಲರು ಹೇಳಿದರು. ಗ್ರಾಮದ ಜನರಿಗೆ ಕುಡಿಯುವ ನೀರು ಕೊಡುವ ಉದ್ದೇಶದಿಂದ ೧೦೧೦ ಕೋಟಿ ನುದಾನವನ್ನು ತಂದಿದ್ದೇನೆ, ಕಾಮಗಾರಿ ಆರಂಭವಾಗಿದೆ ಎಂದ ಶಾಸಕರು ಪ್ರತೀ ಮನೆಗೂ ದಿನದ ೨೪ ಗಂಟೆ ಶುದ್ದೀಕರಿಸಿದ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಶಾಸಕರು ಹೇಳಿದರು.
ಕ್ಷೇತ್ರದ ಜನರ ಕಣ್ಣೀರೊರೆಸುವೆ
ತನ್ನ ಕ್ಷೇತ್ರದ ಜನರ ಸೇವೆಗೆಂದೇ ನಾನು ಶಾಸಕನಾಗಿದ್ದೇನೆ, ನನಗೆ ಹಣ ಮಾಡಬೇಕೆಂಬ ಆಸೆಯಿಲ್ಲ, ಪುತ್ತೂರಿನಲ್ಲಿ ಬಡವರ ರಕ್ತ ಹೀರಲು ಬಿಡುವುದೇ ಇಲ್ಲ, ಕಚೇರಿಗಳಲ್ಲಿ ನಡೆಯುವ ಭೃಷ್ಟಾಚಾರಕ್ಕೆ ಬ್ರೇಕ್ ಹಾಕುವ ಕೆಲಸವನ್ನು ನಾನು ಮಾಡುತ್ತೇನೆ . ಜನತೆಯ ಬೆಂಬಲ ಸಿಕ್ಕಿದಲ್ಲಿ ಕ್ಷೇತ್ರವನ್ನು ಹೇಗೆ ಬೇಕೋ ಹಾಗೆ ಅಬಿವೃದ್ದಿ ಮಾಡಲು ಸಾಧ್ಯವಾಗುತ್ತದೆ. ನನ್ನ ಕ್ಷೇತ್ರದ ಜನರಿಗಾಗಿ ಎಲ್ಲಿಂದೆಲ್ಲಾ ಅನುದಾನ ತರಲು ಸಾಧ್ಯವೋ ಅಲ್ಲಿಂದೆಲ್ಲಾ ಅನುದಾನವನ್ನು ತರುತ್ತೇನೆ, ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದೇ ಇಲ್ಲ ಎಂದು ಶಾಸಕರು ಹೇಳಿದರು.
ಬಿಜೆಪಿ ಕಾರ್ಯಕರ್ತರು ಬರುತ್ತಿದ್ದಾರೆ
ಇಲ್ಲಿ ಬಿಜೆಪಿಯ ಶಾಸಕರಿದ್ದಾಗಲೂ ಬಿಜೆಪಿ ಕಾರ್ಯಕರ್ತರ ಕೆಲಸ ಆಗಿಲ್ಲ. ಬಹುತೇಕ ಬಿಜೆಪಿ ಕಾರ್ಯಕರ್ತರ ೯೪ ಸಿ , ಅಕ್ರಮ ಸಕ್ರಮ ವನ್ನು ಮಾಜಿ ಶಾಸಕರು ಮಾಡಿಲ್ಲ. ಲಂಚ ಕೊಟ್ಟವರ ಕೆಲಸವನ್ನು ಮಾತ್ರ ಮಾಡಲಾಗಿದೆ. ಈ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು, ಮುಖಂಡರು ನನ್ನ ಕಚೇರಿಗೆ ಬರುತ್ತಿದ್ದಾರೆ, ನನ್ನನ್ನು ಭೇಟಿಯಾಗುತ್ತಿದ್ದಾರೆ. ನನ್ನ ಸಹಾಯ ಕೇಳಿ ಬಂದವರನ್ನು ಪಕ್ಷ ಬೇದವಿಲ್ಲದೆ ಸಹಾಯ ಮಾಡುತ್ತಿದ್ದೇನೆ, ಶಾಸಕನಾದ ನಾನು ರಾಜಧರ್ಮ ಪಾಲಿಸುತ್ತಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶಾಸಕರ ಕಾರ್ಯುವೈಖರಿ ಬಿಜೆಪಿಗರಿಗೂ ಅಚ್ಚರಿತಂದಿದೆ: ಕೆ ಪಿ ಆಳ್ವ
ಅಶೋಕ್ ರೈ ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ವೇಗತೆಯನ್ನು ಪಡೆದುಕೊಂಡಿದೆ. ಶಾಸಕರಾಗುವುದು ಕೇವಲ ರಾಜಕೀಯ ಮಾಡುವುದಕ್ಕಲ್ಲ ಎಂಬುದನ್ನು ಶಾಸಕರು ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲೂ ಎಲ್ಲೂ ಆಗದ ಅಕ್ರಮ ಸಕ್ರಮ ಕಡತ ವಿಲೇವಾರಿ ಪುತ್ತೂರಿನಲ್ಲಿ ನಡೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಶಾಸಕರ ಅಭಿವೃದ್ದಿ ಕೆಲಸವನ್ನು ಮೆಚ್ಚಿ ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು ಅಚ್ಚರಿಯನ್ನು ವ್ಯಕ್ತಪಡಿಸಿ ಶಾಸಕರಿಗೆ ಮನಸ್ಸಿದ್ದರೆ ಏನೂ ಮಾಡಬಹುದು ಎಂಬುದಕ್ಕೆ ಅಶೋಕ್ ರೈ ಸಾಕ್ಷಿ ಎಂದು ನನ್ನಲ್ಲಿ ಹೇಳುತ್ತಿರುವುದು , ಕಾಂಗ್ರೆಸ್ ಅಭಿವೃದ್ದಿ ಪರ ಎಂಬುದನ್ನೂ ಬಿಜೆಪಿಗರೂ ಒಪ್ಪಿಕೊಂಡಂತಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಚೆಲ್ಯಡ್ಕದಲ್ಲಿ ಸೇತುವೆಯಾಗಲು ಅಶೋಕ್ ರೈ ಬರಬೇಕಾಯಿತು: ನವೀನ್ ರೈ
ಕಳೆದ ೪೫ ಕ್ಕೂ ಹೆಚ್ಚು ವರ್ಷಗಳಿಂದ ಚೆಲ್ಯಡ್ಕದಲ್ಲಿ ಸೇತುವೆ ಮಾಡಬೇಕೆಂದು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದಾರೆ ಆದರೆ ಇದುವರೆಗೂ ನಮ್ಮ ಮನವಿಯನ್ನು ಯಾರೂ ಪರಿಗಣಿಸಿಲ್ಲ. ಶಾಸಕ ಅಶೋಕ್ ರೈ ಯವರು ಈ ಸೇತುವೆಯ ನಿರ್ಮಾಣಕ್ಕೆ ೩ ಕೋಟಿ ಅನುದಾನ ನೀಡಿದ್ದು ಕಾಮಗಾರಿ ಆರಂಭವಾಗಿದೆ ಚೆಲ್ಯಡ್ಕದಲ್ಲಿ ಸೇತುವೆಯಗಲು ಅಶೋಕ್ ರೈಗಳೇ ಶಾಸಕರಾಗಿ ಬರಬೇಕಾಯಿತು ಇದು ನಮ್ಮೆಲ್ಲರ ಭಾಗ್ಯವಾಗಿದೆ. ಬೆಟ್ಟಂಪಾಡಿ ಗ್ರಾಮಕ್ಕೆ ಅತೀ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭಾ, ಗ್ರಾಪಂ ಉಪಾಧ್ಯಕ್ಷರಾದ ಮಹೇಶ್, ಸದಸ್ಯರಾದ ಮೊಯಿದುಕುಂಞಿ ಕೋನಡ್ಕ, ಮಹಾಲಿಂಗ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಅಬೂಬಕ್ಕರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪಸ್ರಸಾದ್ ಪಾಣಾಜೆ, ಐತಪ್ಪ ಪೇರಲ್ತಡ್ಕ, ನಾರಾಯಣ ಹೊಳ್ಳ, ಗುತ್ತಿಗೆದಾರ ಸಿಯಾನ್ ದರ್ಬೆ,ಶ್ರಮಜೀವಿ ಆಟೋ ಚಾಲಕ ಮಾಲಕ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ವಲಯಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚೆಲ್ಯಡ್ಕ ಸ್ವಾಗತಿಸಿ, ಸಿದ್ದಿಕ್ ತಂಬುತ್ತಡ್ಕ ವಂದಿಸಿದರು.