Published
19 hours agoon
By
Akkare Newsಡಾ. ಗಂಗೂಬಾಯಿ ಹಾನಗಲ್ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಇರ್ದೆ ಉಪ್ಪಳಿಗೆ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಸಾತ್ವಿ.ಡಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಶ್ರೀ ಶಾರದಾ ಕಲಾಕೇಂದ್ರ ದರ್ಬೆ ಪುತ್ತೂರು ಇಲ್ಲಿನ ವಿದ್ವಾನ್ ಸುದರ್ಶನ್ ಎಂ.ಎಲ್.ಭಟ್ ಇವರ ಶಿಷ್ಯೆಯಾಗಿರುವ ಸಾತ್ವಿ.ಡಿ ಅವರು ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ನಿವಾಸಿ ವೆಂಕಪ್ಪ ಪೂಜಾರಿ ಮತ್ತು ಗೀತಾ.ಡಿ ದಂಪತಿಯ ಪುತ್ರಿ.