Published
2 months agoon
By
Akkare Newsಪುತ್ತೂರು: ಸಮಾಜದಲ್ಲಿ ಹಲವು ಮಂದಿಗೆ ಆಸರೆ ನೀಡಿ ಸಮಾಜದ ಬೆಳವಣಿಗೆಗೆ ಅದ್ಭುತ ಕೆಲಸ ಮಾಡಿದವರು ಜನ ಮಾನಸದಲ್ಲಿ ಎಂದೆಂದೂ ಜೀವಂತವಾಗಿರುತ್ತಾರೆ. ಜಿ.ಎಲ್. ಆಚಾರ್ಯ ಅಂಥ ಮಹಾನ್ ವ್ಯಕ್ತಿ ಎಂದು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.ಸ್ವರ್ಣ ಉದ್ಯಮಿ, ಸಮಾಜ ಸೇವಕರೂ ಆಗಿದ್ದಂತಹ ಜಿ.ಎಲ್. ಆಚಾರ್ಯ ಅವರ ಶತಮಾನದ ಸ್ಮರಣೆ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ। ಶ್ರೀಪತಿ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಯ ಬಲರಾಮ ಆಚಾರ್ಯ ಸ್ವಾಗತಿಸಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು.
ಆಚಾರ್ಯ ರತ್ನಾಕರ ವಿವಿಠಲ ರಾಮಮೂರ್ತಿ ಚೆನ್ನೈ ಅವರು ವಿಪ್ರಹಾರ್ ಬಳಗ ಚೆನ್ನೈಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಪ್ರಸ್ತುತಪಡಿಸಿತು. ವಯಲಿನ್‌ನಲ್ಲಿ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ, ಮೆಂಡೋಲಿನ್‌ನಲ್ಲಿ ವಿದ್ವಾನ್ ವಿಶ್ವಾಸ್ ಹರಿ ಚೆನ್ನೈ, ಕೀಬೋರ್ಡ್ ನಲ್ಲಿ ಪ್ರಣವ್ ಆರ್.ವಿ.ಚೆನ್ನೈ, ತಾಳವಾದ್ಯದಲ್ಲಿ ವಿದ್ವಾನ್ ಹರಿಹರನ್ ಸುಂದರ್ ರಾಮನ್ ಚೆನ್ನೈ ಸಹಕರಿಸಿದರು.