Published
3 days agoon
By
Akkare Newsಪುತ್ತೂರು:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಎ.16ರಂದು ಸಂಜೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಭಂಡಾರ ದೇವಸ್ಥಾನಕ್ಕೆ ಆಗಮಿಸಲಿದ್ದು, ಅದೇ ದಿನ ಬಲ್ನಾಡು ದೈವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಮಲ್ಲಿಗೆ, ಹರಿಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಲು ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ದೈವಸ್ಥಾನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಹಾಗೂ ಸಂಜೆ 3 ಗಂಟೆಯಿಂದ 5 ಗಂಟೆಯ ತನಕ ದೈವಗಳಿಗೆ ಹರಕೆ, ಮಲ್ಲಿಗೆ ಸಮರ್ಪಿಸಿ ಪ್ರಸಾದ ಸ್ವೀಕರಿಸಬಹುದಾಗಿದೆ. ಸಂಜೆ 6 ಗಂಟೆಗೆ ದೈವಸ್ಥಾನದಿಂದ ದೈವಗಳ ಕಿರುವಾಳು ಭಂಡಾರವು ಹೊರಡಲಿದೆ ಎಂದು ದೈವಸ್ಥಾನದ ಆಡಳಿತ ಅಧಿಕಾರಿ ತಿಳಿಸಿದ್ದಾರೆ.