Connect with us

ಇತ್ತೀಚಿನ ಸುದ್ದಿಗಳು

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್- ಮತ್ತಷ್ಟು ಹೊಸತನದೊಂದಿಗೆ ಬೆಳ್ತಂಗಡಿಯ ಅತಿ ದೊಡ್ಡ ಶೋರೂಂ ಉದ್ಘಾಟನೆ

Published

on

ಮುಳಿಯ ಗೋಲ್ಡ್ ಅಂಡ್ ಡೈಮಂಡ್ , 81+ ವರ್ಷ ಪರಂಪರೆಯ ಚಿನ್ನದ ಮಳಿಗೆ ಇದೆ ಮೇ 17 ರಂದು ಹೊಸ ವಿಸ್ತೃತ ಶೋರೂಮ್ ನೊಂದಿಗೆ ಮುಳಿಯ ಗೋಲ್ಡನ್ ಡೈಮಂಡ್ ಎಂದು ಹೊಸ ಹೆಸರಿನಿಂದ ಮತ್ತು ಹಲವು ಹೊಸತನಗಳಿಂದ ಉದ್ಘಾಟನೆಗೊಳ್ಳಲಿದೆ. ಎಂಟು ದಶಕಗಳ ಹಿಂದೆ ದಿವಂಗತ ಕೇಶವ ಭಟ್ಟರಿಂದ ಆರಂಭವಾದ ಸಂಸ್ಥೆಯನ್ನು ಅವರ ಮೊಮ್ಮಕ್ಕಳದ ಕೇಶವ ಪ್ರಸಾದ್ ಹಾಗೂ ಕೃಷ್ಣನಾರಾಯಣ ಮುಳಿಯ ಇವರು ಮುನ್ನಡೆಸುತ್ತಿದ್ದಾರೆ .

ಈ ವಿಶಾಲ ಶೋರೂಮ್ ಖ್ಯಾತ ಸಿನಿಮಾ ನಟ ಹಾಗೂ ಸ್ಪೂರ್ತಿಯ ಮಾತುಗಾರ ರಮೇಶ್ ಅರವಿಂದ್ ಇವರಿಂದ ಉದ್ಘಾಟನೆಗೊಳ್ಳಲಿದೆ.

ಮೇ 17 ಬೆಳಿಗ್ಗೆ 10.30 ಗಂಟೆಗೆ ಶೋರೂಮ್ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವರು.

 

ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಈ ಹೊಸ ಶೋರೂಮ್ ನಂಬಿಕೆ ಮತ್ತು ಪರಂಪರೆಯ ಜೊತೆಗೆ ಈ ವಿಶಾಲ ವಿಸ್ತೃತ ಶೋರೂಮ್ ಮೂಲಕ ಬೆಳ್ತಂಗಡಿ ಊರಿನ ಜನತೆಗೆ ಅರ್ಪಿಸುತ್ತಿದ್ದೇವೆ” ಎನ್ನುತ್ತಾರೆ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ.
ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ ಬೆಳೆಯುತ್ತಿರುವ ನಮ್ಮ ಮುಳಿಯ ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ, ಸಂತೋಷ ನೀಡಿದ್ದೇವೆ.. ಬೆಳ್ತಂಗಡಿಯಲ್ಲಿ ನೀವು ಮನಸಾರೆ ನಮ್ಮನ್ನು ಹರಸಿದ್ದೀರಿ.. ನೀಡುವ ನಮ್ಮ ಹೊಸತನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಹೊಸತನದೊಂದಿಗೆ ಬರುತ್ತಿದ್ದೇವೆ” ಎನ್ನುತ್ತಾರೆ ಅವರು.

ಈ 2 ಅಂತಸ್ತಿನ ವಿಶಾಲ ಶೋರೂಮ್ ಅತ್ಯಾಧುನಿಕ ಶೈಲಿಯಲ್ಲಿ ರೂಪಗೊಂಡಿದೆ. ಇಲ್ಲಿ ಚಿನ್ನ , ಬೆಳ್ಳಿ , ವಜ್ರ , ವಾಚುಗಳು , ಗಿಫ್ಟ್ ಐಟಂ ..ಹಾಗೂ ವಿವಿಧ ಬಗೆಯ ಚಿನ್ನಾಭರಣಗಳ ಕೌಂಟರ್ಗಳು ಇರಲಿವೆ. ಇದು ನಮ್ಮ ಮುಂದಿನ ಐದು ವರ್ಷಗಳ ವರ್ಷಗಳ ವ್ಯವಹಾರ ವಿಸ್ತಾರಣೆಗೆ ನಾಂದಿಯಾಗಲಿದೆ ಎಂದು ಅವರು ವಿವರಿಸಿದರು.

ಗ್ರಾಹಕರ ಸಂತೃಪ್ತಿ ಮತ್ತು ಸಂತೋಷ ನೀಡುತ್ತಾ ಮುಳಿಯ ಈಗ ಹಿಂದಿಗಿಂತ ದುಪ್ಪಟ್ಟು ರೀತಿಯಲ್ಲಿ ಸದಾ ಸಂತೋಷ ನೀಡುವಲ್ಲಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದೆ.

 

ಶೋರೂಮ್ ವಿಶೇಷಗಳು
5000+ sft ವಿಶಾಲ – – 2 ಮಹಡಿ – – – – – ವಿಶಾಲ ಪಾರ್ಕಿಂಗ್ –
ಬೆಳ್ಳಿಯ ಭರಣಗಳ ವಿಶೇಷ ಕಾಂಡ ಕೌಂಟರ್
-ಗ್ರಾಹಕರಿಗೆ ತಿಂಡಿ ಊಟದ ವ್ಯವಸ್ಥೆ – ಮಕ್ಕಳ ಆಟಕ್ಕೆ ಮತ್ತು ಆರೈಕೆಗೆ ವಿಶೇಷ ಕೊಠಡಿ.
– ವ್ಯಾಲೆಟ್ ಪಾರ್ಕಿಂಗ್
– ವಾಚ್ ಕೌಂಟರ್
– ವಜ್ರಾಭರಣ ಅಮೂಲ್ಯ ಕೌಂಟರ್
– ದೇಶದಲ್ಲಿಯೇ ಪ್ರಪ್ರಥಮ ಬಾರಿ ಎನ್ನಬಹುದಾದ ಗ್ರಾಹಕರ ಸಮ್ಮುಖದಲ್ಲಿ ಗೋಲ್ಡ್ ಪ್ಯೂರಿಟಿ ಅನಲೈಸರ್ ಹಾಗೂ ಲ್ಯಾಬ್ ಗ್ರೋನ್ ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಷನ್,
ಇದಲ್ಲದೆ ಬಳೆ ,ಆಂಟಿಕ್, ನೆಕ್ಲೆಸ್ , ಪಾರಂಪರಿಕ ಆಭರಣಗಳ… ಇನ್ನಿತರ ಕೌಂಟರ್ಗಳು.

 

“ಗ್ರಾಹಕರು ಬದಲಾಗುತ್ತಿದ್ದಾರೆ. ಅವರ ಆಸೆ ಆಕಾಂಕ್ಷೆಗಳಿಗೆ ಸರಿಯಾಗಿ ನಾವೂ ಹೊಸತನ ನೀಡಬೇಕು. ‘ಬದಲಾವಣೆ ಜಗದ ನಿಯಮ’. ಇಂದಿನ ಯುವ ಪೀಳಿಗೆ ಮನೆಯ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಕೈಯಲ್ಲಿರುವ ಮೊಬೈಲ್ ಅವರಿಗೆ ಜಗತ್ತಿನ ವೈವಿಧ್ಯ ಮತ್ತು ಹೊಸಹೊಸ ವಸ್ತುಗಳನ್ನು ತೋರಿಸುತ್ತದೆ. ಚಿನ್ನದ ಹೂಡಿಕೆ ಬಗ್ಗೆಯೂ ಅವರಿಗೆ ಜಾಣತನದ ಬುದ್ಧಿವಂತಿಕೆ ಇದೆ. ಅವರು ಸಂಪಾದನೆ ಮಾಡುತ್ತಾರೆ. ಈ ಹೊಸ ಮತ್ತು ವಿಶಾಲ ಶೋರೂಮ್ ನಮ್ಮ ಲಕ್ಷಕ್ಕಿಂತಲೂ ಹೆಚ್ಚಿನ ಪರಂಪರಾಗದ ನಿಷ್ಠಾವಂತ (loyal customer) ಗ್ರಾಹಕರನ್ನು ನೆನಪಿಟ್ಟು ಅವರಿಗೂ ಮತ್ತು ಈಗಿನ ಹೊಸ ಜನರೇಷನ್  ಪೀಳಿಗೆಯನ್ನೂ ಆಕರ್ಷಿಸಲಿದೆ ಎಂದು ಕೃಷ್ಣನಾರಾಯಣ ಮುಳಿಯ ವಿವರಿಸಿದರೆ,

ಬೆಳ್ತಂಗಡಿಯ ವಿವಿಧಗ್ರಾಮಗಳಿಂದ ಗ್ರಾಹಕರು ನಮ್ಮಲ್ಲಿ ಬರುತ್ತಾರೆ. ಮದುವೆ ಮತ್ತು ಮನೆಯ ಸಮಾರಂಭಗಳ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಆಯ್ಕೆ ಬೇಕಾಗುತ್ತದೆ. ಹಾಗೆಯೇ ಅವರು ಹೆಚ್ಚು ಸಂತೋಷದ/ ಆರಾಮದ ವಾತಾವರಣ ಬಯಸುತ್ತಾರೆ. ಈಥರದ ಇಷ್ಟು ದೊಡ್ಡ ಹೊಸ ವಿಶಾಲ ಶೋರೂಮ್ ಬೆಳ್ತಂಗಡಿಗೆ ಹೊಸತು . ಹಾಗಾಗಿ ಗ್ರಾಮಾಂತರದ ಜನತೆ ಈ ಹೊಸ ವಿಶಾಲ ಶೋರೂಮ್ ಹಾಗೂ ಹೆಚ್ಚಿನ ಆಯ್ಕೆಯ ಮುಳಿಯವನ್ನು ಇಷ್ಟಪಡುವುದು ಖಂಡಿತ ಎಂದು ಅವರು ತಿಳಿಸಿದರು.

ಸಾಮಾಜಿಕ ಜವಾಬ್ದಾರಿಯೊಂದಿಗೆ ಗ್ರಾಹಕ ಸಂತೃಪ್ತಿ ಮತ್ತು ನಮ್ಮ ಸುತ್ತ ಸದಾ ಸಂತೋಷವನ್ನು ನೀಡುವ ಮುಳಿಯ ISO ಕಂಪನಿಯಾಗಿದೆ. ಸುಮಾರು 500ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಒಳಗೆ ಒಳಗೊಂಡಿರುವ ಮುಳಿಯ 1000 ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಇಂಡೈರೆಕ್ಟ್ ಆಗಿ ಉದ್ಯೋಗ Applicable ಶುದ್ಧ ಹಾಲ್ ಮಾರ್ಕ್ 916 ಹಾಗೂ HUD ಚಿನ್ನದ ಆಭರಣಗಳನ್ನು ಮತ್ತು ಐಜಿಐ ಸರ್ಟಿಫೈಡ್ ವಜ್ರಭರಣಗಳನ್ನು ಮಾತ್ರ ಮಾರಾಟ ಮಾಡುತ್ತದೆ.

ನಮ್ಮ ನೂತನ ಬ್ರಾಂಡ್ ಅಂಬ್ಯಾಸಿಡರ್ ಆದ ರಮೇಶ್ ಅರವಿಂದ್ ಬೆಳ್ತಂಗಡಿಗೆ ಬರುವುದು ತುಂಬಾ ಖುಷಿಯಾಗುತ್ತದೆ.  ಗ್ರಾಹಕರು  ರಮೇಶ್ ಅರವಿಂದನ್ನು ಈಗಾಗಲೇ ಮುಳಿಯ ಅಂಬಾಸಿಡರ್ ಆಗಿರುವುದ ಕುರಿತು ಈಗಾಗಲೇ ಸಂತೋಷವ್ಯಕ್ತಪಡಿಸಿದ್ದಾರೆ ಎಂದು ಮಾರ್ಕೆಟಿಂಗ್ ಸಲಹೆಗಾರ ವೇಣು ಶರ್ಮ ತಿಳಿಸಿದರು. ಇವರು ಬೆಳ್ತಂಗಡಿ ಜನರನ್ನು ಜನರನ್ನು ಉದ್ದೇಶಿಸಿ ಮಾತನಾಡಿ ಮೋಟಿವೇಟ್ ಮಾಡಲಿದ್ದಾರೆ ಎಂದರು.

ಆರು ವರ್ಷಗಳ ಹಿಂದೆ 81 ಗ್ರಾಮ ದೇಗುಲಗಳಿಂದ ಬೆಳಕನ್ನು ತಂದು ತಂದು ಬೆಳ್ತಂಗಡಿ ಶೋರೂಮ್ ಅನ್ನು ಉದ್ಘಾಟನೆ ಮಾಡಲಾಗಿತ್ತು. ಈ ಬಾರಿಯೂ ಅದೇ ರೀತಿ ದೀಪ ಬೆಳಗಿಸಿ ಉದ್ಘಾಟಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಮಾರ್ಕೆಟಿಂಗ್ ಸಲಹೆಗಾರ ವೇಣು ಶರ್ಮ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಳಿಯ ಮಾರ್ಕೆಟಿಂಗ್‌ ಸಲಹೆಗಾರ ವೇಣು ಶರ್ಮ, ಅಸಿಸ್ಟೆಂಟ್‌ ಎಕ್ಸ್‌ಕ್ಯೂಟಿವ್‌ ಶಿವಕೃಷ್ಣ ಮೂರ್ತಿ, ಬೆಳ್ತಂಗಡಿ ಶಾಖೆಯ ಶಾಖಾ ಪ್ರಬಂಧಕ ಲೋಹಿತ್‌, ಮಾರ್ಕೆಟಿಂಗ್‌ ಮ್ಯಾನೇಜರ್‌ ಸಂಜೀವ ಇದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version