Published
11 hours agoon
By
Akkare Newsಪುತ್ತೂರು : ವಿಧಾನಸಭಾ ಕ್ಷೇತ್ರದಲ್ಲಿ ಯಾರು ಕೂಡಾ ವಿದ್ಯುತ್ ಸಂಪರ್ಕ,ನೀರಿನ ಸಂಪರ್ಕ ಮನೆ ಇಲ್ಲದೆ ಇಲ್ಲದೆ ಇರಬಾರದು ಇದು ನಮ್ಮ ಕನಸು. ಇದಕ್ಕೆ ಪೂರಕವಾಗಿ ಕೆಲಸ ಮಾಡಲು ಈ ಕಾರ್ಯಾಗಾರ ನಡೆಯಲಿದೆ. ಅಕ್ರಮ ಸಕ್ರಮ, 94 ಸಿ, 94ಸಿಸಿ ಬಡವರಿಗೆ ಮಾಡಿಕೊಡುವುದು, ಅವರಿಗೆ ಅರಿವು ಮೂಡಿಸುವುದು ಕೆಲಸ ಮಾಡಬೇಕು. ಇವತ್ತು ಪಕ್ಷದ ಕಾರ್ಯಕರ್ತರು ಚುನಾವಣಾ ಸಂದರ್ಭ ಮನೆಗೆ ಚೀಟಿ ಕೊಡುವುದು ಮಾತ್ರವಲ್ಲ ಜನರಿಗೆ ಯಾವ ರೀತಿ ಸ್ಪಂಧನೆ ಕೊಡಬಹುದು ಎಂಬ ಮಾಹಿತಿ ಇಲ್ಲ. ಅವರ ಬೂತ್‌ನಲ್ಲಿ ಯಾವ ಕಾಮಗಾರಿ ಪೆಂಡಿಂಗ್ ಇದೆಯೋ ಎಂದು ನೋಡಿ ಪರಿಹಾರ ಕೊಡುವ ಕೆಲಸ ಮಾಡಬೇಕಾಗಿದೆ. ಒಟ್ಟು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸ್ಪಂದನೆ ಯಾವ ರೀತಿ ಇರಬೇಕೆಂಬ ನಿಟ್ಟಿನಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಶಾಸಕರು ಹೇಳಿದರು.
ಕಾರ್ಯಾಗಾರವು ತಳಮಟ್ಟದಲ್ಲಿ ಪಕ್ಷದ ಕೆಲಸದ ಕುರಿತು ನಡೆಯಲಿದೆ. ಸರಕಾರದ 5 ಗ್ಯಾರೆಂಟಿ, ಬೇರೆ ಬೇರೆ ಯೋಜನೆ ತಳಮಟ್ಟದಲ್ಲಿ ಬಡವರಿಗೆ ತಲುಪಬೇಕು. ಕಾರ್ಯಕರ್ತರು ಮನೆ ಮನೆಗೆ ಹೋಗಿ ಹೇಗೆ ಕೆಲಸ ಮಾಡಬೇಕು. ಪಕ್ಷಾತೀತವಾಗಿ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷದವರ ಸಹಿತ ಎಲ್ಲರ ಕೆಲಸವನ್ನು ಮಾಡಬೇಕು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಭಾಷಣವಿಲ್ಲ. ಜನರೊಂದಿಗೆ ಕಾರ್ಯಕರ್ತರು ಯಾವ ರೀತಿ ಬೆರೆಯಬೇಕೆಂಬುದು ಮಾತ್ರ ಇದರಲ್ಲಿ ಹೇಳಿಕೊಡಲಾಗುತ್ತದೆ. ಆ ಮೂಲಕ ಪಕ್ಷದ ಯೋಜನೆ, ಶಾಸಕರ ಯೋಜನೆ, ಕಲ್ಪಣೆಯನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಪುತ್ತೂರಿನಲ್ಲಿ ನಿವೇಶನ ಹಂಚಿಕೆಗೆ ಸುಮಾರು 300 ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರು ಕೂಡಾ ವಿದ್ಯುತ್ ಸಂಪರ್ಕ,ನೀರಿನ ಸಂಪರ್ಕ ಮನೆ ಇಲ್ಲದೆ ಇಲ್ಲದೆ ಇರಬಾರದು ಇದು ನಮ್ಮ ಕನಸು. ಇದಕ್ಕೆ ಪೂರಕವಾಗಿ ಕೆಲಸ ಮಾಡಲು ಈ ಕಾರ್ಯಾಗಾರ ನಡೆಯಲಿದೆ. ಅಕ್ರಮ ಸಕ್ರಮ, 94 ಸಿ, 94ಸಿಸಿ ಬಡವರಿಗೆ ಮಾಡಿಕೊಡುವುದು, ಅವರಿಗೆ ಅರಿವು ಮೂಡಿಸುವುದು ಕೆಲಸ ಮಾಡಬೇಕು. ಇವತ್ತು ಪಕ್ಷದ ಕಾರ್ಯಕರ್ತರು ಚುನಾವಣಾ ಸಂದರ್ಭ ಮನೆಗೆ ಚೀಟಿ ಕೊಡುವುದು ಮಾತ್ರವಲ್ಲ ಜನರಿಗೆ ಯಾವ ರೀತಿ ಸ್ಪಂಧನೆ ಕೊಡಬಹುದು ಎಂಬ ಮಾಹಿತಿ ಇಲ್ಲ. ಅವರ ಬೂತ್‌ನಲ್ಲಿ ಯಾವ ಕಾಮಗಾರಿ ಪೆಂಡಿಂಗ್ ಇದೆಯೋ ಎಂದು ನೋಡಿ ಪರಿಹಾರ ಕೊಡುವ ಕೆಲಸ ಮಾಡಬೇಕಾಗಿದೆ. ಒಟ್ಟು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸ್ಪಂದನೆ ಯಾವ ರೀತಿ ಇರಬೇಕೆಂಬ ನಿಟ್ಟಿನಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಶಾಸಕರು ಹೇಳಿದರು.
ಒಟ್ಟು ಬೆಳಗ್ಗಿನಿಂದ ಸಂಜೆಯ ತನಕ ಸುಮಾರು 6 ಸಾವಿರ ಮಂದಿ ಭಾಗವಹಿಸಲಿದ್ದು, ಒಂದೊಂದು ಅವಧಿಯಲ್ಲಿ 1400 ಮಂದಿ ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಆಹ್ವಾನಿತರಿಗೆ ಮಾತ್ರ ಅವಕಾಶವಿದೆ. ಸಂಜೆಯ ಕಾರ್ಯಾಗಾರದಲ್ಲಿ ಕುಟುಂಬ ಸಮೇತ ಅವರು ಬರಲಿದ್ದಾರೆ. ಅವರಿಗೆ ಸುಮಾರು ರೂ. 1500 ಮೌಲ್ಯದ ಗಿಫ್ಟ್ ಕೊಡಲಿದ್ದೇವೆ. ಸುಮಾರು 40ಲಕ್ಷ ಖರ್ಚು ತಗುಲಲಿದೆ ಎಂದು ಶಾಸಕರು ಹೇಳಿದರು.
ಈ ಕಾರ್ಯಾಕಾರಿಣಿಯು ಕಾಂಗ್ರೆಸ್ ಪಕ್ಷದಲ್ಲೇ ಪುತ್ತೂರಿನಲ್ಲಿ ಪ್ರಥಮ ಪ್ರಯೋಗವಾಗಿ ಮೂಡಿ ಬರಲಿದೆ. ಎಷ್ಟೋ ಒಳ್ಳೆಯ ಕೆಲಸ, ಯೋಜನೆ ತಂದರೂ ಅದನ್ನು ತಳಮಟ್ಟಕ್ಕೆ ತಲುಪಿಸಲು ನಮ್ಮ ಕಾರ್ಯಕರ್ತರಿಗೆ ಅನುಭವದ ಕೊರತೆ ಇದೆ. ಯಾಕೆಂದರೆ ಅವರಿಗೆ ಮಾಹಿತಿ ಸರಿಯಾಗಿ ತಲುಪಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಮಾಡಲಾಗುತ್ತಿದೆ. ಶಾಸಕರಿಗೆ ಅನುದಾನ ಬಂದಾಗ ಗೊತ್ತಿರುವ ಕಾರ್ಯಕರ್ತ ಅದನ್ನು ಅವರ ಬೂತ್ ಗೆ ತೆಗೆದುಕೊಂಡು ಹೋಗುತ್ತಾನೆ. ಕೆಲವರಿಗೆ ಅನುದಾನವನ್ನು ಹೇಗೆ ಪಡೆಯಬೇಕೆಂದು ಗೊತ್ತಿಲ್ಲ. ಹಾಗಾಗಿ ಸರಕಾರದಿಂದ ಹೇಗೆ ಅನುದಾನ ಬರುತ್ತದೆ. ಅದನ್ನು ಹೇಗೆ ಬೂತ್ ಮಟ್ಟಕ್ಕೆ ತಲುಪಿಸಬಹುದು ಎಂಬುದು ಮುಖ್ಯ. ಈ ರೀತಿಯಲ್ಲಿ ತಳಮಟ್ಟಕ್ಕೆ ಅನುದಾನ ತಲುಪಬೇಕು. ಬಡವರ ಕಷ್ಟಕ್ಕೆ ಸ್ಪಂಧಿಸಿದಾಗ ಜನರು ನಮಗೆ ಸಹಕಾರ ನೀಡುತ್ತಾರೆ. ಮುಂದಿನ ದಿನ ಎಲ್ಲಾ ಕಾರ್ಯಕರ್ತರಿಗೆ ಕಾರ್ಯಗಾರ ನಡೆಸಲಾಗುತ್ತದೆ. ಆ ಬಳಿಕ ಬಿಎಲ್ ಒಗಳಿತೆ ತರಬೇತಿ ನಡೆಯಲಿದೆ. ಒಟ್ಟು ಸಂಬಂಧ, ಪ್ರೀತಿ ವಿಶ್ವಾಸವನ್ನು ತಳಮಟ್ಟದಲ್ಲಿ ಬೆಳೆಸುವ ಚಿಂತನೆ, ಸರಕಾರದ ಯೋಜನೆ ಮನೆ ಮನೆಗೆ ತಲುಪಬೇಕು. ಪಕ್ಷದ ಅನುಮತಿ ಕೇಳಿ ನಮ್ಮ ಚಿಂತನೆಯಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಪ್ರಥಮವಾಗಿ ಇದನ್ನು ಪುತ್ತೂರಿನಲ್ಲಿ ಮಾಡುತ್ತಿದ್ದು, ಮುಂದಿನ ದಿವಸ ಬೇರೆ ಬೇರೆ ಕಡೆಗಳಲ್ಲಿ ಈ ಕಾರ್ಯಗಾರ ನಡೆಯಲಿದೆ ಎಂದು ಶಾಸಕರು ಹೇಳಿದರು.