Published
12 months agoon
By
Akkare News
ಶನಿವಾರ ರಾತ್ರಿ ಗುಡ್ಡ ಕುಸಿತವಾಗಿದೆ. ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿ ಕಾಮಗಾರಿ ಗುಡ್ಡವನ್ನು ಅಗೆದ ಜಾಗದಲ್ಲಿ ಕುಸಿತ ಉಂಟಾಗಿದೆ.


ವಾಮಂಜೂರಿನಿಂದ ಗುರುಪುರ ಕಡೆಗೆ ತೆರಳುವ ರಸ್ತೆಗೆ ಗುಡ್ಡ ಜರಿದು ಬಿದ್ದಿದೆ. ಸಾಯಿಲ್ ನೈಲಿಂಗ್ ಮೂಲಕ ಗುಡ್ಡ ಕುಸಿಯದಂತೆ ಸುರಕ್ಷತಾ ಕ್ರಮ ವಹಿಸಿದ್ದರೂ, ಗುಡ್ಡ ಜರಿದು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮೇಲ್ಬಾಗದ ಮರಗಳು ಕೂಡಾ ಮಣ್ಣಿನೊಟ್ಟಿಗೆ ರಸ್ತೆಗೆ ಬಂದು ಬಿದ್ದಿದೆ.



ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ರಸ್ತೆಗೆ ಬಿದ್ದಿರುವ ಮಣ್ಣು ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ. ಮುನ್ನೆಚ್ಚರಿಕ ಕ್ರಮವಾಗಿ ರಸ್ತೆಯ ಒಂದು ಭಾಗದಲ್ಲಿ ಸಂಚಾರ ನಿಷೇಧಿಸಲಾಗಿದೆ. ಮುಂಗಾರು ಆರಂಭದ ವೇಳೆ ಸುರಿದ ಮಳೆಯ ಸಂದರ್ಭದಲ್ಲೂ ಗುಡ್ಡ ಕುಸಿತ ಉಂಟಾಗಿತ್ತು.










