Connect with us

ರಾಜಕೀಯ

ವಿಟ್ಲಮುಡ್ನೂರು ಗ್ರಾಮದ 3ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರ ಸಭೆ

Published

on

ವಿಟ್ಲಮುಡ್ನೂರು ಗ್ರಾಮದ 3ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರ ಸಭೆ ಇಂದು ಸಂಜೆ 7ಗಂಟೆಗೆ ಸರಿಯಾಗಿ ಪಿಲಿ೦ಜ ವಸಂತ ಪೂಜಾರಿ ಮನೆಯಲ್ಲಿ ಬೂತ್ ಅಧ್ಯಕ್ಷರಾದ ನಾರಾಯಣ ಪೂಜಾರಿ ಬದಿಗುಡ್ಡೆ ಇವರ ನೇತೃತ್ವದಲ್ಲಿ ನಡೆಯಿತು.


ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರು/ಗ್ರಾಮ ಪಂಚಾಯತ್ ಸದಸ್ಯರು ಎಲ್ಯಣ್ಣ ಪೂಜಾರಿ, ಅಕ್ರಮ-ಸಕ್ರಮ ಸದಸ್ಯರಾದ ರಾಮಣ್ಣ ಪಿಲಿ೦ಜ, ಬೂತ್ ಪ್ರಮುಖರಾದ ಲೋಹಿತ್ ಪಿಲಿ೦ಜ ಭಾಗವಹಿಸಿ ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದರು.
ಮಾನ್ಯ ಶಾಸಕರ ಅನುದಾನದ ವಿಚಾರಗಳನ್ನು ಪ್ರತಿ ಸದಸ್ಯರಿಗೆ ತಿಳಿಸುವುದು ಮತ್ತು ಮುಂಬರುವ ಪಂಚಾಯತ್ ಚುನಾವಣೆಗೆ ಇಂದಿನಿಂದಲೇ ಪೂರ್ವ ತಯಾರಿ ನಡೆಸುವುದು ಮತ್ತು ಅಭ್ಯರ್ಥಿಗಳನ್ನು ಆಯ್ಕೆ ನಡೆಸುವ ವಿಚಾರಗಳನ್ನು ಸಭೆಗೆ ತಿಳಿಸಲಾಯಿತು.
ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಳಿನಿ, ಮುಖಂಡರಾದ ವಿಶ್ವನಾಥ ಪೂಜಾರಿ ಕೆಮಣಾಜೆ, ಇನಾಸ್ ಮಾರ್ಟೀಸ್, ಇಸ್ಮಾಯಿಲ್ ನಾಟೆಕಲ್ಲು,ವಿಶ್ವನಾಥ ಮೂಲ್ಯ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಬೇಡಿಕೆಗಳನ್ನು ಪ್ರಸ್ತಾಪಿಸಿದರು.

 

ಪ್ರಮುಖರಾದ ರವೀ೦ದ್ರ ಶೆಟ್ಟಿ ಪಿಲಿ೦ಜ, ನವೀನ ಗೌಡ ಓಟೆ, ಉಮೇಶ್ ನಾಯ್ಕ, ಸೇಸಪ್ಪ ಪಿಲಿ೦ಜ, ಸಂಜೀವ ಹಲಸಿನಕಟ್ಟೆ, ಚಂದ್ರಹಾಸ ಪಿಲಿ೦ಜ, ನವೀನ ಹಡೀಲು, ತಾರಾನಾಥ ಪಿಲಿ೦ಜ, ಸಂದೀಪ್ ಪಿಲಿ೦ಜ, ಕವಿತ್ ಕೆಮಣಾಜೆ, ಯಶವಂತ ಪಿಲಿ೦ಜ, ವಿನೋದ್ ಪಿಲಿ೦ಜ ಕುಜುಂಬ ಪಿಲಿಂಜ ಸಭೆಯಲ್ಲಿ ಹಾಜರಿದ್ದರು.. ಸ್ಥಳಾವಕಾಶ ನೀಡಿದ ವಸಂತ ಪೂಜಾರಿ ಮತ್ತು ಮನೆಯವರಿಗೆ ಧನ್ಯವಾದಗಳನ್ನು ತಿಳಿಸಲಾಯಿತು.


 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version