Connect with us

ರಾಜಕೀಯ

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಮಾಸಿಕ ಸಭೆ

Published

on

ಪುತ್ತೂರು ದಿನಾಂಕ 29/07/2025ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಮಾಸಿಕ ಸಭೆಯು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬಾಬು ಮರಿಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ನವೆಂಬರ್ ತಿಂಗಳ ದಿನಾಂಕ 02/11/2025ರ ಆದಿತ್ಯವಾರದಂದು ನಡೆಯಲಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪದಗ್ರಹಣ ಸಮಾರಂಭದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಉಸ್ತುವಾರಿ ಬಾಬು ಕಲ್ಲಗುಡ್ಡೆ, ಮಾಜಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಹಾಗೂ ಘಟಕದ ಗೌರವ ಸಲಹೆಗಾರ ಮುಕೇಶ್ ಕೆಮ್ಮಿಂಜೆ, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ರಾಮ ಪಾಂಬಾರು, ಉಪಾಧ್ಯಕ್ಷರಾದ ಬಿ. ಕೆ. ಮೋನಪ್ಪ ಕೆರೆ ಮೂಲೆ, ಧರಣಿ. ಸಿ. ಬಿ, ಜೊತೆ ಕಾರ್ಯದರ್ಶಿ ವಿಜಯಲಕ್ಷ್ಮಿ ಹಾಗೂ ಆಣ್ಣು ಕಲಾಯಿ, ಬಾಬು ಶೇಡಿ ಗುರಿ, ಮೋನಪ್ಪ ಸೇಡಿಯಾಪು, ಹರಿಪ್ರಸಾದ್ ಕಲಾಯಿ, ಎಸ್ ಧನಂಜಯ ಶೇಡಿಗುರಿ, ಮುಂಡಪ್ಪ ನೆಕ್ಕರೆ, ಪದ್ಮನಾಭ ಗುಂಪಕಲ್ಲು, ಗುರುವಪ್ಪ ಮರಿಕೆ, ಚೆನ್ನಪ್ಪ ಮರಿಕೆ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ಕೊಟ್ಟು ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದರು. ಪದಗ್ರಹಣದ ಆಮಂತ್ರಣ ಪತ್ರವನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಪರಿಶಿಷ್ಟ ಜಾತಿಯ ಎಲ್ಲಾ ವಲಯಗಳಿಗೆ ತಾಲೂಕು ಘಟಕದ ತಂಡಗಳನ್ನು ರಚಿಸಿ ಭೇಟಿಕೊಟ್ಟು ಆಮಂತ್ರಿಸುವುದೆಂದು ನಿರ್ಧರಿಸಲಾಯಿತು.

ಮುಕೇಶ್ ಕೆಮ್ಮಿಂಜೆ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ , ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ , ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ದಿನೇಶ್ ಮೂಳೂರು ಹಾಗೂ ವಿವಿಧ ಗಣ್ಯ ಅತಿಥಿಗಳ ಮತ್ತು ತಾಲೂಕಿನ ವಿವಿಧ ಘಟಕಗಳ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.ಹಿರಿಯ ಕಾಂಗ್ರೆಸ್ಸಿಗರನ್ನು ಗುರುತಿಸಿ ಪದಗ್ರಹಣದ ಕಾರ್ಯಕ್ರಮದಲ್ಲಿ ಅಭಿನಂದಿಸಲು ತೀರ್ಮಾನಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version