Connect with us

ರಾಜಕೀಯ

ಬಿಹಾರದಲ್ಲಿ ಆರ್ ಜೆ ಡಿ ಹೀನಾಯ ಸೋಲು…!!! ಲಾಲು ಪ್ರಸಾದ್ ಬಿಹಾರದಿಂದ ಹೊರಕ್ಜೆ…. ಮಗಳು ಮನೆಯಿಂದ ಹೊರಕ್ಕೆ….!!!

Published

on

ನವದೆಹಲಿ, ನವೆಂಬರ್ 16: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್​ಜೆಡಿ ಹೀನಾಯ ಸೋಲು ಅನುಭವಿಸಿದ ಬಳಿಕ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಕುಟುಂಬ ಹಾಗೂ ರಾಜಕೀಯ ಎರಡನ್ನೂ ತೊರೆದಿದ್ದರು. ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ರೋಹಿಣಿ, ನನಗೆ ಕುಟುಂಬವೇ ಇಲ್ಲ, ತೇಜಸ್ವಿ ನನ್ನನ್ನು ಹೊರಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಪಾಟ್ನಾದಲ್ಲಿ ತನ್ನ ಹೆತ್ತವರ ಮನೆಯಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿಣಿ ಆಚಾರ್ಯ, ನನಗೆ ಕುಟುಂಬವಿಲ್ಲ, ನೀವು ಏನಾದರೂ ಕೇಳುವುದಿದ್ದರೆ ಈಗ ಸಂಜಯ್, ರಮೀಜ್ ಮತ್ತು ತೇಜಸ್ವಿ ಯಾದವ್ ಅವರನ್ನು ಕೇಳಿ ಎಂದು ಹೇಳಿದ್ದಾರೆ..

ಕುಟುಂಬದಲ್ಲಿ ಪ್ರಶ್ನೆಗಳನ್ನು ಎತ್ತುವ ಜನರನ್ನು ಹೊರಗೆಸೆದು ಚಪ್ಪಲಿಯಿಂದ ಹೊಡೆಯಲಾಗುತ್ತದೆ ಎಂದು ಅವರು ಹೇಳಿದರು.ಅವರು ಚುನಾವಣಾ ಸೋಲಿನ ಹೊಣೆ ಹೊತ್ತುಕೊಳ್ಳಲು ತಯಾರಿಲ್ಲ, ನಾನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹೊರಹಾಕಿದ್ದಾರೆ ಎಂದು ರೋಹಿಣಿ ಹೇಳಿದ್ದಾರೆ. ರೋಹಿಣಿ ಆಚಾರ್ಯ ಅವರ ಹೇಳಿಕೆಗಳು ಚುನಾವಣಾ ಸೋಲಿನ ನಂತರ ಆರ್‌ಜೆಡಿಯೊಳಗಿನ ಉದ್ವಿಗ್ನತೆ ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version