Connect with us

ಇತರ

ಸಿಎಂ ಸ್ಥಾನಕ್ಕೆ ರಾಜೀನಾಮೆ: ಜನವರಿ 6ಕ್ಕೆ ಡೆಡ್‌ಲೈನ್ ಕೊಟ್ಟಿದ್ದ ಡಿಕೆಶಿ ಬಣಕ್ಕೆ ಕೌಂಟರ್ ನೀಡಿದ ಸಿದ್ದರಾಮಯ್ಯ!

Published

on

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಜನವರಿ 6 ಕ್ಕೆ ರಾಜ್ಯದ ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆ ನಿರ್ಮಾಣ ಮಾಡುತ್ತಾರೆ. ಆದರೆ ನಾಯಕತ್ವ ಬದಲಾವಣೆ ಇದೇ ದಿನ ಆಗಲಿದೆ ಎಂಬ ‘ಡೆಡ್ ಲೈನ್’ ನಿರೀಕ್ಷೆಯಲ್ಲಿ ಡಿಕೆಶಿ ಬಣ ಇದೆ. ಆದರೆ ಇದಕ್ಕೆ ಸಿದ್ದರಾಮಯ್ಯ ಅವರು ಸೂಕ್ತ ರೀತಿಯಲ್ಲಿ ಕೌಂಟರ್ ಕೊಟ್ಟಿದ್ದಾರೆ.

ಭವಿಷ್ಯ ನುಡಿದಿದ್ದ ಇಕ್ಬಾಲ್ ಹುಸೇನ್

ನಾಯಕತ್ವ ಬದಲಾವಣೆ ವಿಚಾರವಾಗಿ ಡಿಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಭವಿಷ್ಯ ನುಡಿದಿದ್ದರು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಜನವರಿ 6 ರಂದು ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.

ಇಕ್ಬಾಲ್ ಹುಸೇನ್ ಅವರ ಈ ಮಾತನ್ನು ಡಿಕೆ ಕ್ಯಾಂಪ್ ನಲ್ಲಿರುವ ಇತರ ಶಾಸಕರು ಬಹಿರಂಗವಾಗಿ ಒಪ್ಪಿಕೊಳ್ಳದೆ ಇದ್ದರೂ ಆಂತರಿಕವಾಗಿ ಜನವರಿ 6 ರ ಬಳಿಕ ಇಂತಹದೊಂದು ಬೆಳವಣಿಗೆ ನಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಠಕ್ಕರ್ ನೀಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement