Connect with us

ಇತರ

ಪರಶುರಾಮನನ್ನೇ ಬಿಡದ ಕಳ್ಳರು ಅಂದರ್ ಕಾರ್ಕಳ ಪೊಲೀಸರ ಭರ್ಜರಿ ಕಾರ್ಯಾಚರಣೆ!

Published

on

ಕಾರ್ಕಳ ಜ.10: ಪ್ರಸಿದ್ಧ ಪ್ರವಾಸಿ ತಾಣವಾದ ಕಾರ್ಕಳದ ಪರಶುರಾಮ ಥೀಮ್ ಪಾರ್ಕಿನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಕಾರ್ಕಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರು ಅಂತರ್ ಜಿಲ್ಲಾ ಕಳ್ಳರಾಗಿದ್ದು, ಮಂಗಳೂರು ಮೂಲದವರಾಗಿದ್ದಾರೆ. ಆರಿಫ್ ಅಲಿಯಾಸ್ ಮುನ್ನ (37) – ನಿವಾಸಿ: ತಲಪಾಡಿ ಕಳವಾರು, ಮಂಗಳೂರು.
ಅಬ್ದುಲ್ ಹಮೀದ್ (32) – ನಿವಾಸಿ: ಕಾವೂರು, ಮಂಗಳೂರು.

ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರು ಕಳ್ಳರ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.
ಜಂಟಿ ಕಾರ್ಯಾಚರಣೆ: ಉಡುಪಿ, ದಕ್ಷಿಣ ಕನ್ನಡ ಮತ್ತು ಮಂಗಳೂರು ನಗರದ ವಿವಿಧೆಡೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು, ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಆರೋಪಿಗಳಿಂದ ಒಟ್ಟು 2,18,200 ರೂಪಾಯಿ ಮೌಲ್ಯದ ಕಳವು ಮಾಡಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


 

Continue Reading
Click to comment

Leave a Reply

Your email address will not be published. Required fields are marked *

Advertisement