ಒಳಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಬಿಜತ್ರೆ ಮತ್ತು ಪುಂಡಿಕಾಯಿಯಲ್ಲಿ ಅಳವಡಿಸಿದ್ದ ಸೋಲಾರ್ ದಾರಿ ದೀಪಗಳನ್ನು ಕಳವು ಮಾಡಲಾಗಿದೆ.
ಕಳೆದ 10 ದಿನಗಳ ಅವಧಿಯಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಲೈಟ್ ಮತ್ತು ಬ್ಯಾಟರಿಗಳನ್ನು ಕಳವು ಮಾಡಿದ್ದು ಕಂಬಗಳನ್ನು ಪೊದೆಗೆ ಎಸೆಯಲಾಗಿದೆ
ಗ್ರಾ.ಪಂ. ವತಿಯಿಂದ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ