Connect with us

ಸ್ಥಳೀಯ

ಅರಿಯಡ್ಕ :ಅಕ್ರಮ‌ಸಕ್ರಮ ಭೈಠಕ್, ಹಕ್ಕು ಪತ್ರ ವಿತರಣೆ:ಬಡವರ ದೂರು ನನ್ನ ಬಳಿ ಬಾರದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ

Published

on

ಪುತ್ತೂರು: ಕಳೆದ ಹಲವು ವರ್ಷಗಳ ಹಿಂದೆ ತಾವು ಮನೆ ಕಟ್ಟಿಕೊಂಡಿರುವ ಜಾಹದ ಅಡಿಸ್ಥಳಕ್ಕೆ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಲೇಬೇಕು, ಅವರನ್ನು ಸತಾಯಿಸಬಾರದು, ತಿಳುವಳಿಕೆ ಕೊರತೆ ಇರುವ ಕೆಲವು ಗ್ರಾಮೀಣ ಭಾಗದ ಜನರು ಹಲವು ದೂರುಗಳನ್ನು ನೀಡಿದ್ದಾರೆ,‌ಮುಂದಕ್ಕೆ ಯಾವುದೇ ದೂರುಗಳು ನನ್ನ ಬಳಿ ಬಾರದ ಹಾಗೆ ನೋಡಿಕೊಳ್ಳಿ ಎಂದು ಕಂದಾಯ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.

ಮನೆ ಕಟ್ಟಲು ಜಾಗವಿಲ್ಲದೆ ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡಿರುವ ಬಡವರು ತಮ್ಮ ಅಡಿಸ್ಥಳದ ದಾಖಲೆ ಪತ್ರ ಪಡೆಯುವುದಕ್ಕೆ ಅಲೆದಾಡುವಂತಾಗಿದ್ದು, ಬಾಕಿ ಇರುವ ಅನೇಕ 94 ಸಿ ಕಡತವನ್ನು ವಿಲೇವಾರಿ ಮಾಡಿದ್ದೇನೆ, ಕೆಲವು ಗ್ರಾಮಗಳಲ್ಲಿ ಇನ್ನೂ ಕಡತ ಬಾಕಿ ಇದೆ. ಮನೆ ಕಟ್ಟಿಕೊಂಡಿರುವ ಅರ್ಜಿ ಹಾಕಿರುವ ಎಲ್ಲಾ ಫಲಾನುಭವಿಗಳಿಗೂ ಹಕ್ಕು ಪತ್ರ ಕಡ್ಡಾಯವಾಗಿ ಕೊಡಬೇಕು ಎಂದು ಶಾಸಕರು ಸೂಚನೆ ನೀಡಿದರು.‌ಅಕ್ರಮ ಸಕ್ರಮದಲ್ಲಿ ತಡವಾದರೂ ಪರವಾಗಿಲ್ಲ 94 ಸಿ ಹಕ್ಕು ಪತ್ರ ಬಾಕಿಯಾಗಲೇಬಾರದು ಎಂದು ಖಡಕ್ ಸೂಚನೆ ನೀಡಿದರು.

ಅಭಿವೃದ್ದಿಗೆ ಮತಚಲಾಯಿಸಿ:

ಚುನಾವಣೆ ಸಮಯದಲ್ಲಿ ಅದು ಇದು ಎಂದು ನಿಮ್ಮ ಬಳಿ ವೋಟು ಕೇಳಲು ಬರುತ್ತಾರೆ ಆದರೆ ಅವರು ಇಷ್ಟು ವರ್ಷದಲ್ಲಿ ಮಾಡಿದ ಅಭಿವೃದ್ದಿ ಏನು ಎಂಬುದನ್ನು ಪ್ರಶ್ನಿಸಬೇಕು.‌ಯಾರು ಅಭಿವೃದ್ದಿ ಮಾಡುತ್ತಾರೆ ಅವರ ಪರ‌ಮತಚಲಾಯಿಸಬೇಕು. ನಮ್ಮ ಕ್ಷೇತ್ರದ ಅಭಿವೃದ್ದಿಯೇ ನಮಗೆ ಮಜಖ್ಯವಾಗಬೇಕು. ಪುತ್ತೂರಿನ ಶಾಸಕನಾದ ಬಳಿಕ ಎರಡೂವರೆ ವರ್ಷದಲ್ಲಿ 2006 ಕೋಟಿ ಅನುದಾನ ತಂದಿದ್ದೇನೆ. ರಸ್ತೆ, ಕುಡಿಯುವ ನೀರಿಗೆ ಮೊದಲ ಅಧ್ಯತೆಯನ್ನು ನೀಡಿದ್ದೇನೆ ಎಂದು ಶಾಸಕರು ಹೇಳಿದರು.

ಧಾರ್ಮಿಕ ಕೇಂದ್ರಗಳೂ ಅಭಿವೃದ್ದಿಯಾಗಬೇಕು:
ಕ್ಷೇತ್ರದ ದೇವಸ್ಥಾನ,ದೈವಸ್ಥಾನ ,ಕಟ್ಟೆ, ಮಸೀದಿ, ಮದ್ರಸ ,ಚರ್ಚುಗಳು ಅಭಿವೃದ್ದಿಯಾಗಬೇಕಿದೆ.‌ಹಿಂದೂ‌ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ 8 ಕೋಟಿ ,ಅಲ್ಪ ಸಂಖ್ಯಾತರ ಧಾರ್ಮಿಕ ಕೇಂದ್ರ ಅಭಿವೃದ್ದಿಗೆ 7 ಕೋಟಿ, ಬಸದಿಗೆ 1.5 ಕೋಟಿ ಅನುದಾನ ನೀಡಿದ್ದೇನೆ.‌ಇಷ್ಟು ವರ್ಷದಲ್ಲಿ ಯಾರು ಇಷ್ಟು ದೊಡ್ಡ ಮೊತ್ತವನ್ನು ನೀಡಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಿ ಆಗ ಅಭಿವೃದ್ದಿ ಪರ ಯಾರು? ಹಿಂದುತ್ವದ ಪರ ಯಾರು ಎಂದು ಗೊತ್ತಾಗ್ತದೆ. ಸರ್ವಧರ್ಮವನ್ನು ಗೌರವಿಸುವುದೇ ನೈಜ ಹಿಂದುತ್ವ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.

ಒಳ್ಳೆಯ ಕೆಲಸ ಮಾಡಿದರೆ ವೋಟು ಹಾಕಿ:
ಅಶೋಕ್ ರೈ ಒಳ್ಳೆಯ ಕೆಲಸ ಮಾಡಿದರೆ ಮಾತ್ರ‌ಮುಂದಿನ ಚಿನಾವಣೆಯಲ್ಲಿ ವೋಟು‌ಹಾಕಿ.‌ತಪ್ಪು ಮಾಡಿದ್ರೆ ತಿದ್ದುವ ಕೆಲಸ‌ಮಾಡಿ.‌ನಿಮ್ಮ ಆಶೀರ್ವಾದದಿಂದ ಶಾಸಕನಾಗುವ ಮೂಲಕ ಬಡವರ ಸೇವೆ ಮಾಡಲು ದೇವರು ಅವಕಾಶ ಮಾಡಿದ್ದಾನೆ ,ಈ ಅವಕಾಶವನ್ನು ಬಳಸುತ್ತಿದ್ದೇನೆ ಎಂದು ಶಾಸಕರು ತಿಳಿಸಿದರು.

ಕಂದಾಯ‌ಸಚಿವರಿಂದ ಶ್ಲಾಘನೆ:
ರಾಜ್ಯದಲ್ಲಿ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮಷ್ಟು‌ಪ್ರಮಾಣದಲ್ಲಿ ಅಕ್ರಮ ಸಕ್ರಮ ಬೈಠಕ್ ನಡೆದಿಲ್ಲ.ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವ ನಮ್ಮ ಕಂದಾಯ ಇಲಾಖೆ ಕಾರ್ಯವೈಖರಿ, ತಹಶಿಲ್ದಾರ್ ಬಗ್ಗೆ ಕಂದಾಯ ಸಚಿವರು ಮೆಚ್ಷುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಶಾಸಕರು ಬಡವರ ಕೆಲಸ‌ಮಾಡಲು ಹಿಂದೇಟು ಹಾಕಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ರಮ‌ಸಕ್ರಮ‌ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು‌ಮಾತಬಾಡಿ ನಾಲ್ಕು ಕೋಣೆಗಳ ಮಧ್ಯೆ ನಡೆಯುತ್ತಿದ್ದ ಬೈಠಕ್ ಇಂದು ಗ್ರಾಮದ ಮನೆ ಬಾಗಿಲಲ್ಲಿ ನಡೆಯುತ್ತಿದೆ. ಜನರ ಮಧ್ಯೆ ನಿಂತು ಜನರಿಗೆ ಹಕ್ಕು ಪತ್ರವನ್ನು ಕೊಡುವ ಕೆಲಸ ಮಾಡಲಾಗುತ್ತದೆ. ಈ ರೀತಿಯ ಬೈಠಕ್ ಹಿಂದೆಯೂ ಇಲ್ಲಿ ನಡೆಯುವುದಿಲ್ಲ ಅದು ಅಶೋಕ್ ರೈ ಕಾಲದಲ್ಲಿ ಮಾತ್ರ ಎಂದು ಹೇಳಿದರು.
ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಇದ್ದರು..
ತಹಶಿಲ್ದಾರ್ ಕೂಡ್ಲಿಗಿ ಸ್ವಾಗತಿಸಿ, ಕಂದಾಯ ನಿರೀಕ್ಷ ಗೋಪಾಲ್ ವಂದಿಸಿದರು.‌ಶಾಸಕ ರ ಕಚೇರಿ ಸಹಾಯಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು

Continue Reading
Click to comment

Leave a Reply

Your email address will not be published. Required fields are marked *

Advertisement