Connect with us

ಇತರ

40ನೇ ವರ್ಷದ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳದ ಫಲಿತಾಂಶ

Published

on

ಉಪ್ಪಿನಂಗಡಿ: 40ನೇ ವರ್ಷದ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳಕ್ಕೆ ಮಾ.29 ರಂದು ಸಂಜೆ ವೇಳೆ ಅದ್ದೂರಿ ತೆರೆ ಬಿದ್ದಿದೆ.


ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ ಕೋಣಗಳು ಭಾಗವಹಿಸಿದ್ದು, ಇದರಲ್ಲಿ ನಂದಳಿಕೆ ಶ್ರೀಕಾಂತ್ ಭಟ್‌ರ ಎ ಹಾಗೂ ಬಿ ವಿಭಾಗದ ಕೋಣಗಳೇ ಫೈನಲ್ ಪ್ರವೇಶಿದ್ದವು. ಇದರಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಬಿ ವಿಭಾಗದ ಕೋಣಗಳು ಪ್ರಥಮ ಹಾಗೂ ಎ ವಿಭಾಗದ ಕೋಣಗಳು ದ್ವಿತೀಯ ಬಹುಮಾನ ಪಡೆದವು. ಬಂಬ್ರಾಣ ಬೈಲು ವಂದಿತ್ ಶೆಟ್ಟಿ ಕೋಣಗಳನ್ನು ಓಡಿಸಿದರು.

ಹಗ್ಗ ಕಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಕೆ. ಶೆಟ್ಟಿಯವರ ಎ ಹಾಗೂ ಬಿ ವಿಭಾಗದ ಕೋಣಗಳು ಫೈನಲ್ ಪ್ರವೇಶಿಸಿದ್ದವು. ಇಲ್ಲಿ ಪ್ರಥಮ ಬಹುಮಾನವನ್ನು ಬಿ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಮಾಳ ಆದಿಶ್ ಪೂಜಾರಿ) ತಮ್ಮದಾಗಿಸಿಕೊಂಡವು. ದ್ವಿತೀಯ ಬಹುಮಾನವನ್ನು ಅವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕಾವೂರು ದೋಟ ಸುದರ್ಶನ್) ಪಡೆದವು.

ಅಡ್ಡ ಹಲಗೆಯಲ್ಲಿ 8 ಜೊತೆ ಕೋಣಗಳು ಭಾಗವಹಿಸಿದ್ದು, ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ ಅವರ ಕೋಣಗಳು (ಕೋಣ ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ) ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ನಾರಾವಿ ರಕ್ಷಿತ್ ಜೈನ್ ಅವರ ಕೋಣಗಳು (ಕೋಣ ಓಡಿಸಿದವರು: ಭಟ್ಕಳ ಹರೀಶ್) ಪಡೆದವು.

ನೇಗಿಲು ಹಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಬೆಳುವಾಯಿ ದರೆಗುಡ್ಡೆ ಕಮಲ ನಿವಾಸ ಮನನ್ ಕಾರ್ತಿಕ್ ಪೂಜಾರಿಯವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ ) ಪ್ರಥಮ ಬಹುಮಾನವನ್ನು ಪಡೆದವು. ದ್ವಿತೀಯ ಬಹುಮಾನವನ್ನು ಜೈ ತುಳುನಾಡ್ ಕಕ್ಯಪದವು ಪುಣ್ಕೆದಡಿ ರೆಹಾನ್ಸ್ ಭಂಡಾರಿ ಅವರ ಕೋಣಗಳು (ಕೋಣ ಓಡಿಸಿದವರು: ಭಟ್ಕಳ ಶಂಕರ) ಪಡೆದವು.


ನೇಗಿಲು ಹಿರಿಯ ವಿಭಾಗದಲ್ಲಿ 61 ಜೊತೆ ಕೋಣಗಳು ಭಾಗವಹಿಸಿದ್ದು, ಫೈನಲ್‌ನಲ್ಲಿ ಎರ್ಮಾಳ್ ಪುಚ್ಟೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ಅವರ ಎ ವಿಭಾಗದ ಕೋಣಗಳು (ಕೋಣ ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ಹಾಗೂ ಶ್ರೀ ಪಂಚಲಿಂಗೇಶ್ವರ ಉರುವಾಲು ನೇಕಾಳುಗುತ್ತು ಸದಾನಂದ ಗೌಡ ಅವರ ಕೋಣಗಳು (ಕೋಣ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ಸ್ಪರ್ಧಿಸಿದ್ದವು. ಆದರೆ ಇಲ್ಲಿ ಎರಡು ಕೋಣಗಳು ಸಮಾನವಾಗಿ ಮಂಜೊಟ್ಟಿ ತಲುಪಿದವು. ಕಂಬಳ ಸಮಿತಿಯ ತೀರ್ಮಾನದಂತೆ ಇಲ್ಲಿ ಎರಡು ಜೊತೆ ಕೋಣಗಳಿಗೂ ಪ್ರಥಮ ಬಹುಮಾನವಾದ ಒಂದು ಪವನ್ ಚಿನ್ನವನ್ನು ನೀಡಿ ಗೌರವಿಸಲಾಯಿತು.

ಕನಹಲಗೆ ವಿಭಾಗದಲ್ಲಿ 10 ಜೊತೆ ಕೋಣಗಳು ಭಾಗವಹಿಸಿದ್ದು, ಇಲ್ಲಿ ಯಾವ ಕೋಣಗಳು ನಿಶಾನೆಗೆ ನೀರು ಹಾಯಿಸದ ಕಾರಣ 10 ಜೊತೆ ಕೋಣಗಳ ಯಜಮಾನರಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement