Connect with us

ಇತ್ತೀಚಿನ ಸುದ್ದಿಗಳು

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಬೆದರಿಕೆ ಕರೆ 💥 ಸೂಕ್ತ ಭದ್ರತೆ ನೀಡುವಂತೆ,ಎಸ್ ಪಿ ಅವರಿಗೆ ಮನವಿ : ಜಯಪ್ರಕಾಶ್ ಬದಿನಾರು

Published

on

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಈ ಬಾರಿ ಯಶಸ್ವಿಯಾಗಿ ನಡೆದಿದೆ. ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಬಲ್ನಾಡು ಉಳ್ಳಾಲ್ತಿ ದೈವಗಳ ಭಂಡಾರ ಬರುವ ದಾರಿ ಕಿರಿದಾದ ಕಾರಣ ಈ ರಸ್ತೆಯಲ್ಲಿ ಹಳೆಯ ಕಟ್ಟಡ ಬೀಳುವ ಪರಿಸ್ಥಿತಿಯಲ್ಲಿರುವುದನ್ನು ಅರಿತು ಸಾರ್ವಜನಿಕರು ಕಟ್ಟಡ ತೆರೆವು ಮಾಡಿದ ವಿಚಾರ ಪತ್ರಿಕಾ ಮಾಧ್ಯಮದಲ್ಲಿ ಪ್ರಕಟವಾಗಿರುತ್ತದೆ.

 

ಕಟ್ಟಡ ತೆರವು ಕಾರ್ಯಾಚರಣೆಯ ವೇಳೆ ಶಾಸಕ ಅಶೋಕ್ ಕುಮಾರ್ ರೈ ಅವರು ಸದ್ರಿ ಸ್ಥಳದಲ್ಲಿ ಇದ್ದರು ಎನ್ನುವ ನೆಪವನ್ನು ಒಡ್ಡಿ ಯಾರೋ ಕಿಡಿಗೇಡಿಗಳು ದೆಹಲಿಯಿಂದ ಶಾಸಕರಿಗೆ ಫೋನ್‌ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಶಾಸಕರು ನಡೆಸಿದ ಪತ್ರಿಕಾಗೋಷ್ಠಿಯ ಮುಖಾಂತರ ತಿಳಿದು ಬಂದಿದೆ. ಪುತ್ತೂರಿನ ಸಮಗ್ರ ಅಭಿವೃದ್ಧಿ ಮತ್ತು ದೇವಸ್ಥಾನದ ಕೆಲಸಗಳಿಗೆ ನಿರಂತರವಾಗಿ ಕೆಲಸ ಮಾಡುತ್ತಿರುವ ಶಾಸಕರಿಗೆ ಕೊಲೆ ಬೆದರಿಕೆ ಬಂದಿರುವುದು ಆತಂಕಕಾರಿಯಾಗಿದೆ.‌ ಈ ಘಟನೆ ಶಾಸಕರ ಬೆಂಬಲಿಗರಾದ ನಮಗೆ ದಿಗ್ಬ್ರಮೆ ಮೂಡಿಸಿದೆ.‌ ಆದ್ದರಿಂದ ತಾವು ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಓರ್ವ ಅಂಗರಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ನಾನು ಈ ಮೂಲಕ ವಿನಂತಿಸುತ್ತಿದ್ದೇನೆ.

ಜಯಪ್ರಕಾಶ್ ಬದಿನಾರು
ಮಾಜಿ ಉಪಾಧ್ಯಕ್ಷರು
ಗ್ರಾಮ ಪಂಚಾಯತ್ ಕೋಡಿಂಬಾಡಿ

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement