Published
2 hours agoon
By
Akkare News
ಪುತ್ತೂರು: ನೀವು ಸಂಚರಿಸುವ ರಸ್ತೆಗಳನ್ನು ನೀವೇ ಸ್ವಚ್ಚವಾಗಿ ಅಂದವಾಗಿ ಇಟ್ಟುಕೊಳ್ಳಬೇಕು. ಸರಕಾರ ರಸ್ತೆಗೆ ಅನುದಾನ ಕೊಡುತ್ತದೆ, ರಸ್ತೆ ನಿರ್ಮಾಣ ಆಗುತ್ತದೆ ಆ ಬಳಿಕ ಆ ರಸ್ತೆಯಲ್ಲಿ ಸಂಚಾರ ಮಾಡುವವರು ವರ್ಷಕ್ಕೊಮ್ಮೆ ಶ್ರಮದಾನ ಮಾಡುವ ಮೂಲಕ ಅದನ್ನು ಅಂದವಾಗಿಟ್ಟುಕೊಂಡಲ್ಲಿ ರಸ್ತೆ ಹೆಚ್ಚು ಬಾಳಿಕೆ ಬರುತ್ತದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಭಾನುವಾರ ನಗರದ ಮಂಜಲ್ಪಡ್ಪು ಕಾಲನಿಗೆ ಭೇಟಿ ನೀಡಿ ರಸ್ತೆ ಉದ್ಘಾಟಿಸಿ ಮರಳುತ್ತಿರುವ ವೇಳೆ ರಸ್ತೆಗೆ ಅಡ್ಡವಾಗಿ ಬೆಳೆದಿದ್ದ ಮುಳ್ಳಿನ ಗಿಡವನ್ನು ಶಾಸಕರೇ ಕತ್ತರಿಸುವ ಮೂಲಕ ಮಾದರಿಯಾಗಿದ್ದಾರೆ. ರಸ್ತೆ ಮಧ್ಯದ ವರೆಗೂ ಮುಳ್ಳಿನ ಗಿಡ ಬೆಳೆದಿದ್ದ ಕಾರಣ ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು,ಪಕ್ಕದ ಮನೆಯವರಿಂದ ಕತ್ತಿ ತೆಗೆದು ಮುಳ್ಳನ್ನು ಕತ್ತರಿಸಿದ್ದಾರೆ.


‘





