Connect with us

ಇತ್ತೀಚಿನ ಸುದ್ದಿಗಳು

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಬೆದರಿಕೆ ಕರೆ ಸೂಕ್ತ ರಕ್ಷಣೆಗೆ ಎಸ್ ಪಿ ಅವರಿಗೆ ಮನವಿ : ಜಯಪ್ರಕಾಶ್ ಬದಿನಾರು

Published

on

ಪುತ್ತೂರು : ಪುತ್ತೂರು ಶ್ರೀ ಮಾಲಿಂಗೇಶ್ವರ ದೇವರ ಜಾತ್ರೋತ್ಸವ ಬಾರಿ ಯಶಸ್ವಿನಿಂದ ನಡೆದಿದೆ. ಬಲ್ನಾಡು ಉಲ್ಲಾಳ್ತಿ ದೈವಗಳ ಬರುವ ದಾರಿ ಕಿರಿದಾದ ಕಾರಣ ಈ ರಸ್ತೆಯಲ್ಲಿ ಹಳೆಯ ಕಟ್ಟಡ ಮತ್ತು ಬೀಳುವ ಪರಿಸ್ಥಿತಿಯನ್ನು ಅರಿತು ದೇವಸ್ಥಾನದ ಆಡಳಿತ ಮಂಡಳಿಯವರು ತೆರೆವು ಮಾಡಿದ ಬಗ್ಗೆ ಪತ್ರಿಕಾ ಮಾಧ್ಯಮದಲ್ಲಿ ತಿಳಿದುಬಂದಿರುತ್ತದೆ. ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ಶಾಸಕರು ಆ ಸ್ಥಳದಲ್ಲಿ ಇದ್ದಾರೆ ಎನ್ನುವ ನೆಪವನ್ನು ಒಡ್ಡಿ ಯಾರೋ ಕಿಡಿಗೇಡಿಗಳು ದೆಹಲಿಯಿಂದ ಶಾಸಕರಿಗೆ ಫೋನ್ ಮುಖಾಂತರ ಬೆದರಿಕೆ ಮತ್ತು ಹೆದರಿಸುವ ಕೆಲಸ ಆಗಿದೆ ಎಂದು ಶಾಸಕರು ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಿರುತ್ತಾರೆ.

 

ಪುತ್ತೂರಿನ ಅಭಿವೃದ್ಧಿ ಮತ್ತು ದೇವಸ್ಥಾನದ ಕೆಲಸಗಳಿಗೆ ನಿರಂತರವಾಗಿ ಕೆಲಸ ಮಾಡುವ ಶಾಸಕರಿಗೆ ಕೊಲೆ ಬೆದರಿಕೆ ಬಂದಿರುವುದು ಖಂಡನೀಯ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಒಂದು ಅಂಗ ರಕ್ಷಕ ರನ್ನು ನಿಯೋಜನೆ ಮಾಡಬೇಕು ಎಂದು ನಾನು ಈ ಮೂಲಕ ಆಗ್ರಹಿಸುತ್ತೇನೆ.

ಜಯಪ್ರಕಾಶ್ ಬದಿನಾರು
ಕಾಂಗ್ರೆಸ್ ಮುಖಂಡರು ಪುತ್ತೂರು

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version