Published
18 hours agoon
By
Akkare News


ಸಮಿತಿಯ ಸದಸ್ಯರಾದ ದಿನೇಶ್ ಶೆಟ್ಟಿ ಪಿಜಿನಡ್ಕ, ಸಂಪತ್ ಗೌಡ, ಕವಿತ, ಗಣೇಶ್ ಭಟ್, ಪವಿತ್ರಾ ಶೆಟ್ಟಿ, ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಸಂಧ್ಯಾ ರಾಮ ಚಂದ್ರ ಗೌಡ ಹಾಗೂ ಎಲ್.ಸಿ.ಆರ್.ಪಿ. ಪ್ರಿಯ ಉಪಸ್ಮಿತರಿದ್ದರು. ಅರಿವು ಕೇಂದ್ರ ಮೇಲ್ವಿ ಚಾರಕಿ ಕುಸುಮ ವಿ. ರೈ ಸ್ವಾಗತಿಸಿ ಭವ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ಸುಮಾರು 26 ಜನ ಮಕ್ಕಳು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ವತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಶಿಬಿರದಲ್ಲಿ ಮಕ್ಕಳಿಗೆ ಯೋಗ, ಸೂರ್ಯ ನಮಸ್ಕಾರ, ಕಥೆ ಹೇಳುವುದು, ಡ್ರಾಯಿಂಗ್, ಗೂಡು ದೀಪ, ಪೇಪರ್ ಕ್ರಾಫ್ಟ್ ಮುಂತಾದ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಿಕೊಡಲಾಯಿತು. ಶಿಬಿರದ ಸಮಾರೋಪ ಸಮಾರಂಭ ಸಮಿತಿಯ ಸದಸ್ಯ ಕೇಶವ ಭಂಡಾರಿ ಕೈಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಎಚ್.ಪಿ. ರಾಘವೇಂದ್ರ, ಗ್ರಾ.ಪಂ. ಕಾರ್ಯದರ್ಶಿ ಅಣ್ಣು ಪಿ, ಸಂಪನ್ಮೂಲ ವ್ಯಕ್ತಿಯಾಗಿದ್ದ ಕೋಡಿಂಬಾಡಿ ಕ್ಲಸ್ಟರ್ ಸಿ.ಆರ್.ಪಿ. ದೇವಕಿ, ಕೋಡಿಂಬಾಡಿ ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಸ್ಪೂರ್ತಿ ರಾಜಮಣಿ ರೈ, ಸಲಹಾ ಸಮಿತಿ ಸದಸ್ಯರಾದ ಗಣೇಶ ಭಟ್, ಪವಿತ್ರ ಶೆಟ್ಟಿ, ಕವಿತ, ಭವ್ಯಾ ಶೆಟ್ಟಿ ಮತ್ತು ಲಕ್ಷ್ಮೀ ರೈ ಭಾಗವಹಿಸಿದ್ದರು.
ಶಿಬಿರ ನಡೆಸಿಕೊಟ್ಟ ದೇವಕಿ ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಕ್ಕಳಿಗೆ ಲಘು ಉಪಹಾರ ನೀಡಿದ ಸ್ಪೂರ್ತಿ ರಾಜಮಣಿ ರೈ, ಪ್ರಿಯ ರಮೇಶ್ ಕೆ, ಲಕ್ಷ್ಮೀ ರೈ ,ಕೇಶವ ಭಂಡಾರಿ ಕೈಪ ಮತ್ತು ಗಣೇಶ ಭಟ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಪಶುಸಖಿ ಭವ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕಿ ಕುಸುಮ ವಿ.ರೈ ಸ್ವಾಗತಿಸಿದರು. ಪುನರ್ವಸತಿ ಕಾರ್ಯಕರ್ತೆ ಲೀಲಾವತಿ ಮತ್ತು ಸಿಬ್ಬಂದಿ ವರ್ಗ ಸಹ ಕರಿಸಿದರು. ಸುಮಾರು 45 ಮಕ್ಕಳು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.


