ಪುತ್ತೂರು: ಕೋವಿಪರವಾನಿಗೆ ನವೀಕರಣವಾಗದೆ ಬಾಕಿ ಇರುವವರ ಪಟ್ಟಿಯನ್ನು ರಾಜ್ಯ ಗೃಹ ಸಚಿವ ಡಾ. ಎಚ್ ಜಿ ಪರಮೇಶ್ವರ್ರವರಿಗೆ ಪುತ್ತೂರು ಶಾಸಕ ಅಶೋಕ್ ರೈ ಸಲ್ಲಿಸಿದ್ದು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲೂಕಿನ ಸುಮಾರು ೩೮ ಕೃಷಿಕರ ನವೀಕರಣವಾಗಲು ಬಾಕಿ ಇರುವವರ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ದ ಕ ಜಿಲ್ಲೆಯಲ್ಲಿ ಕೃಷಿಕರಿಗೆ ಕೋವಿ ಅಗತ್ಯವಾಗಿದೆ. ಆದರೆ ವಿವಿಧ ಕಾರಣಗಳನ್ನು ಮುಂದಿಟ್ಟು ನವೀಕರಣಕ್ಕೆ ಅರ್ಜಿ ಸಲ್ಲಿಸಿದವರ ಕೋವಿಯನ್ನು ನವೀಕರಣ ಮಾಡುತ್ತಿಲ್ಲ. ಈ ಬಗ್ಗೆ ಅರ್ಜಿದಾರರು ನನ್ನಲ್ಲಿ ವಿಚಾರವನ್ನು ತಿಳಿಸಿದ್ದು ಅದರಂತೆ ನವೀಕರಣಕ್ಕೆ ಅರ್ಜಿ ಹಾಕಿರುವ ವಿವಿಧ ತಾಲೂಕುಗಳ ಅರ್ಜಿದಾರರ ಪಟ್ಟಿಯನ್ನು ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಅಧಿವೇಶನದಲ್ಲಿ ಮಾತನಾಡಿದ್ದ ಶಾಸಕರು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಕೋವಿ ಪರವಾನಿಗೆ ನವೀಕರಣವಾಗದೇ ಇರುವ ಬಗ್ಗೆ ಸರಕಾರದ ಗಮನ ಸೆಳೆದಿದ್ದರು. ದ ಕ ಜಿಲ್ಲೆಯಲ್ಲಿ ಕೃಷಿಗಳಿಗೆ ಕಾಡುಪ್ರಾಣಿಗಳ ಕಾಟವಿದ್ದು ಈ ಕಾರಣಕ್ಕೆ ಕೋವಿ ಅಗತ್ಯವಾಗಿ ಬೇಕಾಗಿದೆ. ಕೋವಿ ಪರವಾನಿಗೆ ನೀಡಲು ಕಾನೂನು ಪ್ರಕಾರ ಯಾರಿಗೆ ಖಂಡಿತವಾಗಿಯೂ ಸಾದ್ಯವಿಲ್ಲವೋ ಅಂಥವರನ್ನು ಹೊರತುಪಡಿಸಿ ಉಳಿದ ಅರ್ಜಿದಾರರನ್ನು ಮಾನ್ಯ ಮಾಡಬೇಕು ಎಂದು ಅಧಿವೇಶನದಲ್ಲಿ ಶಾಸಕರು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗ್ರಹ ಸಚಿವರು ಯಾರೆಲ್ಲಾ ಕೋವಿ ಪರವಾನಿಗೆಗೆ ಅರ್ಜಿ ಹಾಕಿದ್ದಾರೋ ಅಂಥವರ ಪಟ್ಟಿ ಸಲ್ಲಿಸುವಂತೆ ತಿಳಿಸಿದ್ದರು. ಆ ಪ್ರಕಾರ ಶಾಸಕರು ಅರ್ಜಿದಾರರ ಪಟ್ಟಿ ಸಲ್ಲಿಸಿದ್ದಾರೆ.

ಕೋವಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದವರು: ರಾಮಚಂದ್ರ ಅಜೀರ, ಚೆನ್ನಪ್ಪರೈ ದರ್ಬೆ, ಅಜಿತ್ ಸರಪಾಡಿ, ಲೋಕೇಶ್ ಕುಕ್ಕುಜಡ್ಕ, ಎಸ್ ಆರ್ ಸುರಯ್ಯಗೌಡ ಕುಕ್ಕುಜಡ್ಕ, ಹರ್ಷಿತ್ ಜಿಕೆ ಕುಕ್ಕುಜಡ್ಕ, ಜಯಪ್ರಕಾಶ್ ಐವರ್ನಾಡು, ಎ ಜೆ ಥೋಮಸ್ ಶಿರಾಡಿ, ಕಿರಣ್ಕುಮಾರ್ ಮಿತ್ತನಾಜೆ, ಯಶವಂತ ಕೆ ಕಾಣಿಯೂರು, ಶ್ರುತಿ ದೇವಚಳ್ಳ, ಆನಂದ ಉರುವಾಲ್ , ಜಯಪ್ರಸಾದ್ ಬೆಳ್ಳಾರೆ, ವೆಂಕಪ್ಪ ಗೌಡ ದೇವಚಳ್ಳ, ಮೋಹನ ಎಚ್ ಪುಣಚ, ರವೀಂದ್ರ ರೈ ಕೆದಂಬಾಡಿ, ಕೆ ವಿಠಲ್ರೈ ಅಲಂಕಾರು, ಹರಿಚಂಧ್ರ ರೈ ಕೆಮ್ಮಿಂಜೆ, ಆಕಾಶ್ ವಿ ಬಿಳಿಯೂರು, ವಿಲ್ಸನ್ ಲೋಬೋ ಅರಳ, ಅನಂತ ಎ ಒಳಮೊಗ್ರು, ಸುರೇಶ್ ರೈ ಬಿ ಅರಿಯಡ್ಕ, ಅಬ್ದುಲ್ ರಝಾಕ್ ಚಿಕ್ಕಮುಡ್ನೂರು, ಸುಮತಿಮೋಹನ್ ಗೌಡ ಶಾಂತಿಗೋಡು, ಮೋಹನದಾಸ್ ಕಲ್ಮಕಾರ್, ಸುಕುಮಾರ್ ರೈ ಕೆಯ್ಯೂರು, ಮೋನಪ್ಪ ಗೌಡ ಬಳ್ಪ, ಸೋಮಪ್ಪ ನಾಯ್ಕ್ ಪುಣಚ, ಸುಬ್ರಹ್ಮಣ್ಯ ಭಟ್ ಉಪ್ಪಿನಂಗಡಿ, ಸಂತೋಷ್ ಪಿಕೆ ಕೊಕ್ಕಡ, ಷಣ್ಮುಖ ಭಟ್ ಬಡಗನ್ನೂರು, ರಾಕೇಶ್ ಶೆಟ್ಟಿ ಹಿರೆಬಂಡಾಡಿ, ಕೃಷ್ಣಪ್ರಸಾದ್ ರೈ ಕೆಯ್ಯೂರು, ರಾಮಕೃಷ್ಣಗೌಡ ಪುತ್ತೂರು ಕಸಬ, ಜೈಸ್ನರೋಹಿನ್ ಅರಳ, ಗೋಪಾಲಕೃಷ್ಣ ಕುರಿಯ ಮತ್ತು ಸುಜೀರ್ ಕುಮಾರ್ ಶೆಟ್ಟಿ ನಿಡ್ಪಳ್ಳಿ.

ಕೋವಿ ನವೀಕರಣಕ್ಕೆ ಅರ್ಜಿ ಸಲ್ಲಿಸಿ ನವೀಕರಣವಾಗದೇ ಬಾಕಿ ಇರುವ ವಿವಿಧ ತಾಲೂಕುಗಳ ೩೮ ಅರ್ಜಿದಾರರ ಪಟ್ಟಿಯನ್ನು ಗೃಹಸಚಿವರಿಗೆ ಸಲ್ಲಿಸಿದ್ದೇನೆ. ಪರವಾನಿಗೆ ಮಾಡಿಕೊಡುವಲ್ಲಿ ಕ್ರಮಕೈಗೊಳ್ಳುವುದಾಗಿ ಸಚಿವರು ಅಧಿವೇಶನದಲ್ಲಿ ಭರವಸೆಯನ್ನು ನೀಡಿದ್ದರು. ಪಟ್ಟಿ ಸಲ್ಲಿಕೆಯಾಗಿದೆ. ಸಚಿವರು ಈ ಬಗ್ಗೆ ಕ್ರಮಕೈಗೊಳ್ಳುತ್ತಾರೆ ಎಂಬ ಪೂರ್ಣ ಭರವಸೆ ಇದೆ.
ಅಶೋಕ್ ರೈ ಶಾಸಕರು ಪುತ್ತೂರು
