Connect with us

ಇತರ

ಎಚ್ಚರ ಗ್ರಾಹಕರೇ ಎಚ್ಚರ ಕೃತಕ ಬಣ್ಣ ಬಳಸಿ ಮಾಡಿದ ಕೇಕ್, ಬೇಕರಿ ಉತ್ಪನ್ನ ತಿಂದು ನಾವೇ ಕಾನ್ಸರ್ ನಂತಹ ಕಾಯಿಲೆಗಳಿಗೆ ಆಹ್ವಾನ ನೀಡುತ್ತಾ ಇದ್ದೇವ?

Published

on

ಮಂಡ್ಯ: ಕೆ.ಆರ್.ಪೇಟೆ ಪುರಸಭೆಯ ಆಡಳಿತಾಧಿಕಾರಿಗಳು ಹಾಗೂ ಪಾಂಡವಪುರ ಉಪ ವಿಭಾಗಾಧಿಕಾರಿಗಳಾದ ಕೆ.ಆರ್. ಶ್ರೀನಿವಾಸ್ ಅವರು ಇಂದು ಕೆ. ಆರ್.ಪೇಟೆ ಪಟ್ಟಣದಲ್ಲಿ ಮಿಂಚಿನ ಸಂಚಾರ ನಡೆಸಿ ವಿವಿಧ ಹೋಟೆಲ್ ಗಳು ಹಾಗೂ ಬೇಕರಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ ಮೂಡಿಸಿದರು ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು, ಹಿರಿಯ ಆರೋಗ್ಯ ಪರಿವೀಕ್ಷಕರಾದ ಶೀಳನೆರೆ ಸತೀಶ್, ಅಶೋಕ್, ಪರಿಸರ ಇಂಜಿನಿಯರ್ ಪ್ರಿಯಾಂಕಾ, ಗ್ರಾಮ ಆಡಳಿತಾಧಿಕಾರಿ ಜಗಧೀಶ್ ಅವರ ನೇತೃತ್ವದಲ್ಲಿ ಇಂದು ಪಟ್ಟಣದ ವಿವಿಧ ಬೇಕರಿಗಳು ಹಾಗೂ ಹೋಟೆಲ್ ಗಳ ಮೇಲೆ ದಾಳಿ ನಡೆಸಿದ ಪುರಸಭೆ ಆಡಳಿತ ಅಧಿಕಾರಿಗಳಾದ ಕೆಆರ್ ಶ್ರೀನಿವಾಸ್ ಪ್ಲಾಸ್ಟಿಕ್ ಬಳಕೆಯ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ, ಬೇಕರಿಗಳು ಹಾಗೂ ಹೋಟೆಲ್ ಗಳಲ್ಲಿ ಪಾರ್ಸಲ್ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ಹ್ಯಾಂಡ್ ಕವರ್‌ಗಳು ಹಾಗೂ ಪ್ಲಾಸ್ಟಿಕ್ ಶೀಟುಗಳನ್ನು ವಶಪಡಿಸಿಕೊಂಡರು.
 
ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕೇಕುಗಳು ಸಿಹಿ ತಿಂಡಿಗಳು ಹಾಗೂ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೆಮಿಕಲ್ ಯುಕ್ತ ಬಣ್ಣಗಳನ್ನು ಬಳಸುತ್ತಿರುವುದನ್ನು ಗಮನಿಸಿದ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ರಾಸಾಯನಿಕ ಹಾಗೂ ವಿಷದಿಂದ ಕೂಡಿರುವ ಕೃತಕ ಬಣ್ಣಗಳನ್ನು ಆಹಾರ ಉತ್ಪಾದನೆಯಲ್ಲಿ ಬಳಸಿ ಶ್ರೀಸಾಮಾನ್ಯರ ಆರೋಗ್ಯದೊಂದಿಗೆ ಚೆಲ್ಲಾಟವಾಡದೇ, ವಿಷದಿಂದ ಕೂಡಿರುವ ಕೆಮಿಕಲ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಇಂತಹ ಹೋಟೆಲ್ ಗಳು, ಬೇಕರಿಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಸೀಲ್ ಮಾಡಿ ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Advertisement