Published
14 hours agoon
By
Akkare News

ಯಾರಿಗೆ ಲಭ್ಯ? ಹೇಗೆ ಪಡೆಯುವುದು? ಅರ್ಹತೆ: ಸಂಘದ ‘ಎ’ ವರ್ಗದ ಸದಸ್ಯರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಪ್ರೀಮಿಯಂ: ಸದಸ್ಯರು ವಾರ್ಷಿಕವಾಗಿ ಕೇವಲ 500 ರೂ. ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಸೌಲಭ್ಯ: ಸರ್ಕಾರದ ಆಯುಷ್ಮಾನ್ ಅಥವಾ ಯಶಸ್ವಿನಿ ಯೋಜನೆಗಳ ಮೂಲಕ ಸೌಲಭ್ಯ ಪಡೆದರೂ ಸಹ, ಬಿಲ್ನ ಪ್ರತಿಗಳನ್ನು ಸಲ್ಲಿಸಿದರೆ ‘ಸಹಕಾರ ಸಂಜೀವಿನಿ’ ಅಡಿಯಲ್ಲಿ ಹೆಚ್ಚುವರಿ ನೆರವು ನೀಡಲಾಗುವುದು. ವ್ಯಾಪ್ತಿ: ಸಂಘದ ವ್ಯಾಪ್ತಿಯ 3 ಗ್ರಾಮಗಳ ಸುಮಾರು 4,150 ಸದಸ್ಯರನ್ನು ಈ ಯೋಜನೆಯಡಿ ತರುವ ಗುರಿ ಹೊಂದಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.



