ಪುತ್ತೂರು: ಸಹಕಾರ ಸಂಘಗಳ ಇತಿಹಾಸದಲ್ಲೇ ಮೊದಲ ಬಾರಿಗೆ, ಯಾವುದೇ ಖಾಸಗಿ ವಿಮಾ ಸಂಸ್ಥೆಗಳ ಒಡಂಬಡಿಕೆಯಿಲ್ಲದೆ ಸದಸ್ಯರಿಗಾಗಿ ಸ್ವಂತ ನೆಲೆಯಲ್ಲಿ ರೂಪಿಸಲಾದ ‘ಸಹಕಾರ ಸಂಜೀವಿನಿ’ ವಿಮೆ ಯೋಜನೆಯನ್ನು ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಾರಿಗೆ ತರುತ್ತಿದೆ. ಈ ವಿನೂತನ ಯೋಜನೆಯ ಉದ್ಘಾಟನಾ ಸಮಾರಂಭವು ಮೇ 25ರಂದು ಪುತ್ತೂರಿನ ಸಂಪ್ಯದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ತಿಳಿಸಿದ್ದಾರೆ.
ಸರಕಾರಿ ವಿಮೆ ಕ್ಲೈಮ್ ಆದರೂ ಸದಸ್ಯರಿಗೆ ಸೌಲಭ್ಯ ಸರಕಾರದ ಹಂತದಲ್ಲಿನ ಆಯುಷ್ಮಾನ್, ಯಶಸ್ವಿನಿ ಯೋಜನೆಯ ಮೂಲಕ ಸದಸ್ಯರು ಸೌಲಭ್ಯ ಪಡೆದರೂ ಕೂಡಾ ಬಿಲ್‌ನ ಪ್ರತಿಗಳನ್ನು ಸಂಘಕ್ಕೆ ಸಲ್ಲಿಸಿದರೆ ಅವರಿಗೆ ವಿಮಾ ಯೋಜನೆ ಸೌಲಭ್ಯ ನೀಡಲಾಗುವುದು. ಈ ಯೋಜನೆ ನಮ್ಮ ಸಂಘದ ಎ ವರ್ಗದ ಸದಸ್ಯರಿಗೆ ಮಾತ್ರ. ಈಗಾಗಲೇ ನಮ್ಮ 3 ಗ್ರಾಮಕ್ಕೆ ಒಳಪಟ್ಟಿದ್ದು, ಸಂಘದಲ್ಲಿ 4,150 ಸದಸ್ಯರಿದ್ದಾರೆ. ಅವರೆಲ್ಲರನ್ನು ಈ ಯೋಜನೆಗೆ ಸೇರ್ಪಡೆ ಮಾಡುವ ಪ್ರಯತ್ನ ಮಾಡಲಾಗುವುದು. ಸಂಘದ ಎ ವರ್ಗದ ಸದಸ್ಯರು ರೂ. 500ರಂತೆ ಪ್ರತಿ ವರ್ಷ ತೊಡಗಿಸಬೇಕು. ಪ್ರತಿ ವರ್ಷ ಪ್ರೀಮಿಯಂ ಮೊತ್ತವನ್ನು ತೊಡಗಿಸಿದ ಸದಸ್ಯನಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು. ಯಾರಿಗೆ ಲಭ್ಯ? ಹೇಗೆ ಪಡೆಯುವುದು?ಅರ್ಹತೆ: ಸಂಘದ ‘ಎ’ ವರ್ಗದ ಸದಸ್ಯರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಪ್ರೀಮಿಯಂ: ಸದಸ್ಯರು ವಾರ್ಷಿಕವಾಗಿ ಕೇವಲ 500 ರೂ. ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಸೌಲಭ್ಯ: ಸರ್ಕಾರದ ಆಯುಷ್ಮಾನ್ ಅಥವಾ ಯಶಸ್ವಿನಿ ಯೋಜನೆಗಳ ಮೂಲಕ ಸೌಲಭ್ಯ ಪಡೆದರೂ ಸಹ, ಬಿಲ್‌ನ ಪ್ರತಿಗಳನ್ನು ಸಲ್ಲಿಸಿದರೆ ‘ಸಹಕಾರ ಸಂಜೀವಿನಿ’ ಅಡಿಯಲ್ಲಿ ಹೆಚ್ಚುವರಿ ನೆರವು ನೀಡಲಾಗುವುದು. ವ್ಯಾಪ್ತಿ: ಸಂಘದ ವ್ಯಾಪ್ತಿಯ 3 ಗ್ರಾಮಗಳ ಸುಮಾರು 4,150 ಸದಸ್ಯರನ್ನು ಈ ಯೋಜನೆಯಡಿ ತರುವ ಗುರಿ ಹೊಂದಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.