Published
3 hours agoon
By
Akkare News
ಪುತ್ತೂರು : ನಗರದ ಹೃದಯಭಾಗದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿರುವ ನಗರಸಭೆಯ ವಾಣಿಜ್ಯ ಕಟ್ಟಡ ಬಳಕೆ ಯಾಗಿಲ್ಲ. ಇದುವರೆಗೆ ಅದರಿಂದ ನಗರ ಸಭೆಗೆ ಯಾವುದೇ ಆದಾಯ ಬಂದಿಲ್ಲ. ಈ ಕಟ್ಟಡದಲ್ಲಿ ಮನುಷ್ಯ ಇರಲು ಸಾಧ್ಯವಿಲ್ಲ. ಇದನ್ನು ಯಾರಿಗೇ ನೀಡಿದರೂ ಬಳಕೆ ಮಾಡುವ ಸ್ಥಿತಿ ಇಲ್ಲ. ಇದನ್ನು ನಿರ್ಮಿಸಿದವರಿಗೆ ಗೌರವಾರ್ಪಣೆ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಅಸಮಾಧಾನ ವ್ಯಕ್ತಪಡಿಸಿದರು.
ಪುತ್ತೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ನಗರಸಭೆಯ ವಾಣಿಜ್ಯ ಸಂಕೀರ್ಣಕ್ಕೆ ಮಂಗಳವಾರ ಭೇಟಿ ನೀಡಿ, ನಗರಸಭೆಯ ಅಧಿಕಾರಿಗ ಳೊಂದಿಗೆ ಕಟ್ಟಡ ಪರಿಶೀಲಿಸಿದ ಅವರು, ನಗರಸಭೆಯ ಈ ಕಟ್ಟಡದ ಕೊಠಡಿ ಗಳನ್ನು ಏಲಂ ಕರೆದು ಆಸಕ್ತರಿಗೆ ನೀಡುವ ಕುರಿತು ನಗರಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಗರ ಸಭೆಯ ಅಧಿಕಾರಿಗಳ ಜತೆ ಕಟ್ಟಡ ಪರಿಶೀಲನೆ ಮಾಡಲಾಗಿದೆ ಎಂದರು. 





