Connect with us

ಇತರ

ಪುತ್ತೂರಿನಲ್ಲಿ 15 ವರ್ಷಗಳಿಂದ ಬಳಕೆಯಾಗದ ವಾಣಿಜ್ಯ ಕಟ್ಟಡ: ಶಾಸಕ ಅಸಮಾಧಾನ

Published

on

​ಪುತ್ತೂರು : ನಗರದ ಹೃದಯಭಾಗದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿರುವ ನಗರಸಭೆಯ ವಾಣಿಜ್ಯ ಕಟ್ಟಡ ಬಳಕೆ ಯಾಗಿಲ್ಲ. ಇದುವರೆಗೆ ಅದರಿಂದ ನಗರ ಸಭೆಗೆ ಯಾವುದೇ ಆದಾಯ ಬಂದಿಲ್ಲ. ಈ ಕಟ್ಟಡದಲ್ಲಿ ಮನುಷ್ಯ ಇರಲು ಸಾಧ್ಯವಿಲ್ಲ. ಇದನ್ನು ಯಾರಿಗೇ ನೀಡಿದರೂ ಬಳಕೆ ಮಾಡುವ ಸ್ಥಿತಿ ಇಲ್ಲ. ಇದನ್ನು ನಿರ್ಮಿಸಿದವರಿಗೆ ಗೌರವಾರ್ಪಣೆ ಮಾಡಬೇಕು ಎಂದು ಶಾಸಕ ಅಶೋಕ್‌ ಕುಮಾರ್ ರೈ ಅಸಮಾಧಾನ ವ್ಯಕ್ತಪಡಿಸಿದರು.

 

ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ನಗರಸಭೆಯ ವಾಣಿಜ್ಯ ಸಂಕೀರ್ಣಕ್ಕೆ ಮಂಗಳವಾರ ಭೇಟಿ ನೀಡಿ, ನಗರಸಭೆಯ ಅಧಿಕಾರಿಗ ಳೊಂದಿಗೆ ಕಟ್ಟಡ ಪರಿಶೀಲಿಸಿದ ಅವರು, ನಗರಸಭೆಯ ಈ ಕಟ್ಟಡದ ಕೊಠಡಿ ಗಳನ್ನು ಏಲಂ ಕರೆದು ಆಸಕ್ತರಿಗೆ ನೀಡುವ ಕುರಿತು ನಗರಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಗರ ಸಭೆಯ ಅಧಿಕಾರಿಗಳ ಜತೆ ಕಟ್ಟಡ ಪರಿಶೀಲನೆ ಮಾಡಲಾಗಿದೆ ಎಂದರು.

ಈ ಕಟ್ಟಡವನ್ನು ಬಳಕೆ ಮಾಡಬೇಕಾದರೆ ಕಟ್ಟಡದ ನವೀಕರಣ ಮಾಡಬೇಕು. ಸರಿಯಾದ ಶೌಚಾಲಯ ವ್ಯವಸ್ಥೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಬೇಕು. ಬ್ಯಾಂಕಿಂಗ್ ಮತ್ತು ಕಚೇರಿಗಳಿಗೆ ಸೂಕ್ತವಾಗುವ ರೀತಿಯಲ್ಲಿ ಹಾಗೂ ನಗರಸಭೆಯ ಆದಾಯ ಜಾಸ್ತಿ ಮಾಡುವ ನಿಟ್ಟಿನಲ್ಲಿ ನವೀಕರಣ ಆಗಬೇಕು. ಸದ್ಯ ಕಟ್ಟಡ ಕೋಣೆಗಳ ಏಲಂ ಮಾಡಬೇಡಿ. ಕಟ್ಟಡ ನವೀಕರಣ ಮಾಡುವ ಕುರಿತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಿಕೊಡಿ ಎಂದು ನಗರಸಭೆಯ ಪೌರಾಯುಕ್ತರಿಗೆ ಹಾಗೂ ಯೋಜನೆ ಸಿದ್ಧಪಡಿಸುವಂತೆ ನಗರಸಭೆಯ ಎಂಜಿನಿಯರ್‌ಗಳಿಗೆ ಸೂಚಿಸಿದರು. ನಗರಸಭೆಯ ಪೌರಾಯುಕ್ತೆ ವಿದ್ಯಾ ಎಂ.ಕಾಳೆ, ಅಧಿಕಾರಿಗಳು ಜತೆಗಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version