Published
8 hours agoon
By
Akkare News
ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ದೇಶದ ಆರು ರಾಜ್ಯಗಳಲ್ಲಿ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನೂತನ ವೇಳಾಪಟ್ಟಿಯಲ್ಲಿ ಕರಡು ಮತದಾರರ ಪಟ್ಟಿ ಹಾಗೂ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ದಿನಾಂಕಗಳನ್ನು ನವೀಕರಿಸಲಾಗಿದೆ. ಪರಿಷ್ಕರಣೆಗೆ ಒಂದಿಷ್ಟು ಕಾಲಾವಕಾಶ ನೀಡಲಾಗಿದೆ.
ಈ ಪರಿಷ್ಕೃತ ವೇಳಾಪಟ್ಟಿಯು ಕರ್ನಾಟಕ, ದೆಹಲಿ, ತೆಲಂಗಾಣ, ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಅನ್ವಯಿಸಲಿದೆ. ಆಯಾ ರಾಜ್ಯಗಳ ಮತದಾರರ ಅರ್ಹತಾ ದಿನಾಂಕಗಳಿಗೆ ಅನುಗುಣವಾಗಿ ಈ ಪರಿಷ್ಕರಣೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ.
| ಪರಿಷ್ಕರಣಾ ಚಟುವಟಿಕೆಗಳು | ಪರಿಷ್ಕೃತ ವೇಳಾಪಟ್ಟಿ |
| ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ | 30.06.2026 ರಿಂದ 08.08.2026 ರವರೆಗೆ |
| ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ/ ಮರುಜೋಡಣೆ | 08.08.2026 |
| ಕರಡು ಮತದಾರರ ಪಟ್ಟಿಯ ಪ್ರಕಟಣೆ | 17.08.2026 (ಸೋಮವಾರ) |
| ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ | 17.08.2026 ರಿಂದ 16.09.2026 ರವರೆಗೆ |
| ನೋಟೀಸ್ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ | 17.08.2026 ರಿಂದ 15.10.2026 ರವರೆಗೆ |
| ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ | 19.10.2026 (ಸೋಮವಾರ) |





