Published
4 hours agoon
By
Akkare News

ಡಾ :ಅರುಣ ರವರು ಜಿಲ್ಲೆಗೆ ಎಸ್ ಪಿ ಯಾಗಿ ಬಂದ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರದವರ ಕೋಮು ಮತ್ತು ಗೋವಿನ ರಾಜಕೀಯಕ್ಕೆ ಕಡಿವಾಣ ಬಿದ್ದಿದೆ. ದಿನ ಬೆಳಗಾದರೆ ದ್ವೇಷ ಭಾಷಣ ಮಾಡುತ್ತಾ ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದ ಶಕ್ತಿಗಳು ಕಾನೂನಿಗೆ ಹೆದರಿ ಈಗ ಬಿಲ ಸೇರಿಕೊಂಡಿದೆ.
ಪುತ್ತೂರಿನ ಬಿಜೆಪಿ ಮುಖoಡಪಿ ಜಿ ಜಗನ್ನಿವಾಸ ರಾವ್ ಮಗ ಕೃಷ್ಣಾ ಜೆ ರಾವ್ ಹಿಂದೂ ಹುಡುಗಿಗೆ ಮಗು ಕರುಣಿಸಿ ಮೋಸ ಮಾಡಿದ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾದ ಸಂದರ್ಭದಲ್ಲಿ ಯುವತಿಯ ಪರ ನಿಲ್ಲದೆ ಪಲಾಯನ ಮಾಡಿದ ಸಂಸದ ಬ್ರಿಜೇಶ್ ಚೌಟ ಸೇರಿ ಬಿಜೆಪಿ ಮತ್ತು ಸಂಘಪರಿವಾರದ ನಾಯಕರುಗಳ ಭಂಡವಾಳ ಅಂದೇ ಜನತೆ ಗೊತ್ತಾಗಿದೆ.
ಬಿಜೆಪಿಯವರಿಗೆ ರಾಜಕೀಯ ಮಾಡಲು ಈಗ ದನಗಳು ಸಿಗುತ್ತಾ ಇಲ್ಲ.. ಇನ್ನೊಂದು ಕಡೆ ಶಾಸಕ ಅಶೋಕ್ ರೈ ಯವರು ಸರ್ವೇ ಜನ ಸುಖಿನೋ ಭವಂತು ಎಂಬವೇದ ವಾಕ್ಯದಂತೆ ಪುತ್ತೂರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅವರ ಜನಪರ ಕಾರ್ಯಕ್ರಮ ಅವರು ಮಹಾಲಿಂಗೇಶ್ವರ ದೇವಸ್ಥಾನ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಸೇರಿ ತಾಲೂಕಿನ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾದಿರುವ ಅಭಿವೃದ್ಧಿ ಕೆಲಸ ಕಾರ್ಯಗಳಿಂದ ತಾನು ಓರ್ವ ನೈಜ ಹಿಂದೂ ಎಂದು ತೋರಿಸಿಕೊಟ್ಟಿದ್ದಾರೆ. ಅಶೋಕ್ ಕುಮಾರ್ ರೈ ಯವರ ನೈಜ ಹಿಂದುತ್ವ ಟ್ರಂಪ್ ಕಾರ್ಡ್ ನಿಂದ ಬಿಜೆಪಿಯ ಡೋಂಗಿ ಹಿಂದುತ್ವದ ಕಾರ್ಡ್ ಈಗ ಬಣ್ಣ ಕಳೆದು ಕೊಂಡಿದೆ. ಶಾಸಕರ ಸಮಾನತೆ ತತ್ವದ ಕಾರ್ಯ ವೈಖರಿಯು ಬಿಜೆಪಿ ಹಾಗೂ ಸಂಘ ಪರಿವಾರದವರಿಗೆ ನುಂಗಲಾರದ ತುತ್ತಾಗಿದೆ.
ಪುತ್ತೂರಿನಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿದ್ದು ಪುತ್ತಿಲ ಪರಿವಾರ ಮತ್ತು ಬಿಜೆಪಿಯೊಳಗಿನ ಒಡಕುಗಳು ಅವರನ್ನು ಹೈರಾಣ ಮಾಡಿದೆ, ಬಿಜೆಪಿಗೆ ಹೇಗಾದರೂ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ ಅದಕ್ಕೆ ಅವರು ಪುತ್ತೂರಿನಲ್ಲಿ ಕೋಮು ಗಲಭೆ ಎಬ್ಬಿಸಲು ಹೊಂಚು ಹಾಕಿ ಕಾಯುತ್ತಿದ್ದ ಸಂದರ್ಭದಲ್ಲಿ ಇವರಿಗೆ ಸಿಕ್ಕಿರುವುದೇ ಪುರುಷರ ಕಟ್ಟೆಯ ಈ ಪೊಟ್ಟು ಪ್ರಕರಣ.
ಜಿಲ್ಲೆಯ ಸಂಸದನಾಗಿ ಗೆದ್ದ ಬಳಿಕ ಜಿಲ್ಲೆಯ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆರಾಮ ಜೀವಿಯಾಗಿರುವ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ದಿಡೀರಣೆ ನಿದ್ದೆಯಿಂದ ಎಚ್ಚೆತ್ತು ಈ ಪೊಟ್ಟು ಪ್ರಕರಣಕ್ಕೆ ಶಾಸಕ ಅಶೋಕ್ ಕುಮಾರ್ ರೈ ವರನ್ನು ತಳುಕು ಹಾಕಿ ರಾಜಕೀಯ ಮೈಲೇಜ್ ಪಡಕೊಳ್ಳಲು ಹೋಗಿ ತನ್ನ ಸ್ತಾನಕ್ಕಿದ್ದ ಗೌರವ ಮರ್ಯಾದೆಯನ್ನು ಸಂಪೂರ್ಣ ಕಳೆದು ಕೊಂಡಿದ್ದಾರೆ ಹಾಗೂ ಈ ಸುಳ್ಳು ಪ್ರಕರಣದಿಂದ ಪುತ್ತೂರಿನ ಸ್ವಯಂ ಘೋಷಿತ ಧರ್ಮ ರಕ್ಷಕರು ತೀವ್ರ ಮುಖ ಭಂಗಕ್ಕೀಡಾಗಿದ್ದಾರೆ ಪುರುಷರ ಕಟ್ಟೆಯ ಹಿಂದೂ ಹುಡುಗಿಗೆ ನ್ಯಾಯ ಕೊಡಿಸಲು ಹೊರಟಿರುವ ಬ್ರಿಜೇಶ್ ಚೌಟ,ಕಿಶೋರ್ ಬೊಟ್ಯಾಡಿ, ಸಂಜೀವ ಮಠoದೂರರವರೇ ತಮ್ಮದೇ ಪಕ್ಷದ ಮುಖoಡ ಜಗನ್ನಿವಾಸ ರಾವ್ ನ ಮಗ ಒಂದು ಹುಡುಗಿಗೆ ಮಗು ಕರುಣಿಸಿ ಮದುವೆಯಾಗದೆ ಮೋಸ ಮಾಡಿರುವ ಪ್ರಕರಣದ ಸಂದರ್ಭದಲ್ಲಿ ಹುಡುಗಿಯ ಪರ ನಿಲ್ಲದೆ ಅಡಗಿ ಕುಳಿತವರು ನೀವಲ್ಲವೇ…?
ಇತ್ತೀಚೆಗೆ ಮಂಗಳೂರಿನಲ್ಲಿ ಅನೀಶ್ ಪೂಜಾರಿ ಎಂಬ ಸಂಘ ಪರಿವಾರದ ಕಾರ್ಯಕರ್ತ ಎಸಗಿರುವ ಲೈಂಗಿಕ ದೌರ್ಜನ್ಯದಿಂದ ಓರ್ವ ಹಿಂದೂ ಹುಡುಗಿ ಅತ್ನ ಹತ್ಯೆ ಮಾಡಿ ಕೊಂಡಾಗ ಹೋರಾಡಲು ಸಂಸದ ಬ್ರಿಜೇಶ್ ಚೌಟ, ಸತೀಶ್ ಕುಂಪಲ ಯಾಕೆ ಹೋಗಿಲ್ಲ..? ಮೊನ್ನೆ ಬಿ ಸಿ ರೋಡ್ ನಲ್ಲಿ ಹಿಂದೂ ಯುವಕನಿಂದ ಹತ್ಯೆಗೆ ಬಲಿಯಾದ ಹಿಂದೂ ಹುಡುಗಿಯ ಬಗ್ಗೆ ಹೋರಾಟ ಯಾವಾಗ..? ಬರೇ ಸಾಂತ್ವನ ಹೇಳಿದರೆ ಸಾಕಾ…?ರಾಜಕೀಯ ಲಾಭವಾಗುವುದಾದರೆ ಮಾತ್ರ ನಿಮ್ಮ ಹೋರಾಟವಾ..?




